twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ವಿರುದ್ಧ ಹೋರಾಟಕ್ಕೆ ಅಕ್ಷಯ್ ಭಾರಿ ಮೊತ್ತದ ದೇಣಿಗೆ: ಹೆಮ್ಮೆಯಾಗುತ್ತೆ ಎಂದ ಪತ್ನಿ

    |

    ಇಡೀ ವಿಶ್ವವೆ ಕಿಲ್ಲರ್ ಕೊರೊನಾ ವೈರಸ್ ವಿರುದ್ದ ಹೋರಾಟ ನಡೆಸುತ್ತಿದೆ. ಭಾರತದಲ್ಲಿ ಕೊರೊನಾ ಭೀತಿ ಹೆಚ್ಚಾಗಿದ್ದು, ಸಂಪೂರ್ಣ ಭಾರತ ಸ್ತಬ್ದವಾಗಿದೆ. ಜೀವ ಉಳಿದರೆ ಸಾಕಪ್ಪ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕ ಸಂಕಷ್ಟ ಮತ್ತಷ್ಟು ಬಿಗಡಾಯಿಸುವ ಆತಂಕ ಉಂಟಾಗಿದೆ. ಲಾಕ್ ಡೌನ್ ಸಮಯದಲ್ಲಿ ಜನರಿಗೆ ಅಗತ್ಯ ಸೇವೆಗಳು ಕೊರತೆಯಾಗದ್ದಂತೆ ಸರ್ಕಾರ ನೋಡಿಕೊಳ್ಳಬೇಕಾಗಿದೆ.

    ಇಂತಹ ಕಷ್ಟದ ಸಮಯದಲ್ಲಿ ಪರಿಹಾರ ಕಾರ್ಯಕ್ಕೆ ಸರ್ಕಾರದ ಜೊತೆ ಅನೇಕ ಸೆಲೆಬ್ರಿಟಿಗಳು ಕೈ ಜೋಡಿಸಿದ್ದಾರೆ. ಸದ್ಯ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರಿ ಮೊತ್ತದ ಹಣವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಸಮಾಜಮುಖಿ ಕಾರ್ಯಗಳಲ್ಲಿ ನಟ ಅಕ್ಷಯ್ ಕುಮಾರ್ ಸದಾ ಮುಂದಿರುತ್ತಾರೆ.

    ಕೊರೊನಾ ವಿರುದ್ಧ ಹೋರಾಟಕ್ಕೆ ತೆಲುಗು ನಟರ ಧನ ಸಹಾಯ: ರಾಮ್, ಪವನ್, ಚಿರು ನಂತರ ಪ್ರಭಾಸ್ ದೇಣಿಗೆಕೊರೊನಾ ವಿರುದ್ಧ ಹೋರಾಟಕ್ಕೆ ತೆಲುಗು ನಟರ ಧನ ಸಹಾಯ: ರಾಮ್, ಪವನ್, ಚಿರು ನಂತರ ಪ್ರಭಾಸ್ ದೇಣಿಗೆ

    ಈ ಹಿಂದಿಯೂ ದೇಶಸದ ಸಂಕಷ್ಟ ಸಮಯದಲ್ಲಿ ಅಕ್ಷಯ್ ಸಾಕಷ್ಟು ದಾನ ಮಾಡಿದ್ದಾರೆ. ಈ ಬಾರಿ ದೊಡ್ಡ ಮೊತ್ತದ ಹಣ ನೀಡಿರುವ ಬಗ್ಗೆ ಅನೇಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಪತ್ನಿ ಟ್ವಿಂಕಲ್ ಕನ್ಹಾ ಸಹ ಪತಿಯ ಬಗ್ಗೆ ಹೆಮ್ಮೆಯಾಗುತ್ತೆ ಎಂದು ಹೇಳಿದ್ದಾರೆ. ಮುಂದೆ ಓದಿ...

    25 ಕೋಟಿ ನೀಡಿದ ನಟ ಅಕ್ಷಯ್

    25 ಕೋಟಿ ನೀಡಿದ ನಟ ಅಕ್ಷಯ್

    ಅಕ್ಷಯ್ ಕುಮಾರ್ ನೆರುವು ನೀಡುತ್ತಿರುವುದ ಇದೇ ಮೊದಲೇನಲ್ಲ. ಈ ಹಿಂದೆಯು ಸಾಕಷ್ಟು ಸಮಯದಲ್ಲಿ ಕೋಟಿ ಕೋಟಿ ಹಣ ದೇಣಿಗೆ ನೀಡಿದ್ದಾರೆ. ದೇಶದ ಸಂಕಷ್ಟದ ಸಮಯದಲ್ಲಿ ಅಕ್ಷಯ್ ಯಾವಾಗಲು ನೆರವಿಗೆ ದಾವಿಸುತ್ತಾರೆ. ಈ ಬಾರಿ ಸಹ ಹೃದಯ ವೈಶಾಲ್ಯತೆ ಮೆರೆದಿರುವ ಅಕ್ಷಯ್ ಕೊರೊನಾ ವಿರುದ್ಧ ಹೋರಾಡಲು 25 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಆರ್ಥಿಕ ಸಂಕಷ್ಟವನ್ನು ನಿಭಾಯಿಸುವುದು ಸರ್ಕಾರಕ್ಕೂ ಕಷ್ಟವಾಗಿದೆ.

    ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್

    ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ದೇಮಿಗೆ ಸ್ವೀಕರಿಸಲು ಮುಂದಾಗಿದ್ದಾರೆ. PM-CARES FUNd ಮೂಲಕ ಹಣ ಸಂಗ್ರಹ ಮಾಡುತ್ತಿದ್ದಾರೆ. ಈಗಾಗಲೆ ಸಾಕಷ್ಟು ಮಂದಿ ದೇಣಿಗೆ ನೀಡುತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟ ಅಕ್ಷಯ್ ಕುಮಾರ್ "ಎಲ್ಲದ್ದಕ್ಕಿಂತ ಈ ಸಮಯದಲ್ಲಿ ನಮ್ಮ ಜನಕ ಪ್ರಾಣವೆ ಮುಖ್ಯ. ಏನೆಲ್ಲ ಸಾಧ್ಯವೊ ಅದನ್ನ ಮಾಡಬೇಕು. ನಾನು ನನ್ನ ಉಳಿತಾಯದಿಂದ 25 ಕೋಟಿ ರೂಪಾಯಿಯನ್ನು ನರೇಂದ್ರ ಮೋದಿ ಅವರ PM-CARES Fundಗೆ ನೀಡುತ್ತಿದ್ದೀನಿ. ನಾವೆಲ್ಲರು ಒಂದಾಗಿ ಜೀವ ಉಳಿಸೋಣ. ಜೀವ ಇದ್ದರೆ ಜಗತ್ತು" ಎಂದು ಟ್ವೀಟ್ ಮಾಡಿದ್ದಾರೆ.

    ಹೆಮ್ಮೆಯಾಗುತ್ತೆ ಎಂದ ಅಕ್ಷಯ್ ಪತ್ನಿ

    ಹೆಮ್ಮೆಯಾಗುತ್ತೆ ಎಂದ ಅಕ್ಷಯ್ ಪತ್ನಿ

    ಪತಿ ಭಾರಿ ಮೊತ್ತದ ಹಣವನ್ನು ದೇಣಿಗೆ ನೀಡಿರುವ ಬಗ್ಗೆ ಪತ್ನಿ ಟ್ವಿಂಕಲ್ ಕನ್ಹಾ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಟ್ವಿಂಕಲ್ " ಅವರ ಬಗ್ಗೆ ಹೆಮ್ಮೆಯಾಗುತ್ತೆ. ಈ ರೀತಿ ದೊಡ್ಡ ಮೊತ್ತದ ಹಣವನ್ನು ದಾನ ಮಾಡು ಅಗತ್ಯ ವಿದಿಯೆ ಎಂದು ಕೇಳಿದಾಗ, ಅಕ್ಷಯ್ ನಾನು ಮೊದಲು ವೃತ್ತಿ ಜೀವನ ಪ್ರಾರಂಭಿಸುವಾಗ ಏನು ಇರಲಿಲ್ಲ. ಆದರೀಗ ಈ ಸ್ಥಾನದಲ್ಲಿ ಇದ್ದೀನಿ. ಏನು ಇಲ್ಲದವರಿಗೆ ಸಹಾಯ ಮಾಡುವುದನ್ನು ಹೇಗೆ ತಡೆಯಲು ಸಾಧ್ಯ ಎಂದು ಹೇಳಿದರು" ಎಂದು ಅಕ್ಷಯ್ ಹೇಳಿರುವ ಮಾತನ್ನು ಟ್ವಿಂಕಲ್ ಕನ್ಹಾ ಟ್ವೀಟ್ ಮೂಲಕ ಬಹಿರಂಗ ಪಡಿಸಿದ್ದಾರೆ.

    ಅಕ್ಷಯ್ ಕೆಲಸಕ್ಕೆ ಅಭಿಮಾನಿಗಳ ಮೆಚ್ಚುಗೆ

    ಅಕ್ಷಯ್ ಕೆಲಸಕ್ಕೆ ಅಭಿಮಾನಿಗಳ ಮೆಚ್ಚುಗೆ

    ಅಕ್ಷಯ್ ಕುಮಾರ್ ಹೃದಯ ವೈಶಾಲ್ಯತೆಗೆ ಅಭಿಮಾನಿಗಳಿಂದ, ದೇಶದ ಜನರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೀವೆ ರಿಯಲ್ ಹೀರೋ ಎಂದು ಅಕ್ಷಯ್ ಅವರನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ಸದಾ ಸಹಾಯ ಹಸ್ತ ಚಾಚುವ ಅಕ್ಷಯ್ ಈ ಬಾರಿ ದೊಡ್ಡ ಮೊತ್ತದ ಹಣವನ್ನು ನೀಡಿ ಇತರೆ ಸೆಲೆಬ್ರಿಟಿಗಳಿಗೆ ಮಾದರಿಯಾಗಿದ್ದಾರೆ.

    ಅನೇಕ ಸಿನಿತಾರೆಯರಿಂದ ದೇಣಿಗೆ

    ಅನೇಕ ಸಿನಿತಾರೆಯರಿಂದ ದೇಣಿಗೆ

    ಕೊರೊನಾ ವಿರುದ್ಧ ಹೋರಾಟಕ್ಕೆ ತೆಲುಗು ಚಿತ್ರತಾರೆಯರು ಕೋಟಿ ಕೋಟಿ ಹಣ ನೀಡಿದ್ದಾರೆ. ನಟ ಮತ್ತು ರಾಜಕಾರಣಿ ಪವನ್ ಕಲ್ಯಾಣ್ 1 ಕೋಟಿ, ಚಿರಂಜೀವಿ 1 ಕೋಟಿ, ರಾಮ್ ಚರಣ್ 70 ಲಕ್ಷ, ಪ್ರಭಾಸ್ 4 ಕೋಟಿ, ಮಹೇಶ್ ಬಾಬು 1 ಕೋಟಿ, ನಟ ನಿತಿನ್ 20 ಲಕ್ಷ ಹೀಗೆ ಸಾಕಷ್ಟು ಕಲಾವಿದರು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನ ಸಾಕಷ್ಟು ಕಲಾವಿದರು ಸಹ ದೇಣಿಗೆ ನೀಡಿದ್ದಾರೆ. ಜೊತೆಗೆ ಅಭಿಮಾನಿಗಳ ಮೂಲಕ ಬಡವರಿಗೆ ಅಗತ್ಯ ವಸ್ತುಗಳ ಸೇವೆಯನ್ನು ಕಲ್ಪಿಸುತ್ತಿದ್ದಾರೆ.

    English summary
    Bollywood Actor Akshay Kumar donates 25 crores for the fight against coronavirus. His Wife Twinkle says 'proud' of him.
    Sunday, March 29, 2020, 12:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X