ಅಕ್ಷಯ್ ಕುಮಾರ್ ಹೊಸ ಸಿನಿಮಾಗೆ 100 ಕೋಟಿ ರೂ ಸಂಭಾವನೆ: ಚಿತ್ರದ ಬಜೆಟ್ ಕೇಳಿದ್ರೆ ಅಚ್ಚರಿ ಆಗುತ್ತೆ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗಷ್ಟೆ ರಿಲೀಸ್ ಆಗಿರುವ ಲಕ್ಷ್ಮೀ ಸಿನಿಮಾದ ಮೂಲಕ ಸದ್ದು ಮಾಡುತ್ತಿದ್ದ ಅಕ್ಷಯ್ ಇದೀಗ ಸಂಭಾವನೆ ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಅಕ್ಷಯ್ ಕುಮಾರ್, ಬಹುಬೇಗನೆ ಒಂದು ಸಿನಿಮಾವನ್ನು ಮುಗಿಸಿ ಮತ್ತೊಂದು ಸಿನಿಮಾಗೆ ಜಂಪ್ ಆಗುತ್ತಿದ್ದಾರೆ. ಅಂದುಕೊಂಡ ದಿನಕ್ಕೆ ಚಿತ್ರೀಕರಣ ಪೂರ್ಣಗೊಳಿಸಿ, ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳ ಮೂಲಕ ಅಭಿಮಾನಿಗಳ ಮುಂದೆ ಬರುತ್ತಾರೆ. ಕೈತುಂಬ ಸಿನಿಮಾಗಳನ್ನಿಟ್ಟುಕೊಂಡಿರುವ ಅಕ್ಷಯ್ ಇದೀಗ ಹೊಸ ಚಿತ್ರಕ್ಕೆ ಸಹಿ ಮಾಡಿದ್ದು, ಬರೋಬ್ಬರಿ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಅಕ್ಷಯ್ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವುದಕ್ಕಿಂತ ಸಿನಿಮಾ ಬಜೆಟ್ ಅಚ್ಚರಿ ಮೂಡಿಸುತ್ತಿದೆ. ಹೌದು ಅಕ್ಷಯ್ ಸಂಭಾವನೆ 100 ಕೋಟಿ ರೂಪಾಯಿಯಾದರೆ, ಸಿನಿಮಾದ ಬಜೆಟ್ ಅಂದಾಜು 35 ರಿಂದ 45 ಕೋಟಿ ರೂ. ಎನ್ನಲಾಗುತ್ತಿದೆ. ಬಾಲಿವುಡ್ ನಲ್ಲಿ ಅದರಲ್ಲೂ ಸ್ಟಾರ್ ನಟರ ಸಿನಿಮಾಗಳಿಗೆ ಹೋಲಿಸಿದರೆ ಇದು ತುಂಬಾ ಕಡಿಮೆ ಬಜೆಟ್ ಸಿನಿಮಾ.

Actor Akshay Kumar Is Charging 100 Crores For His Upcomming Movie

ಅಕ್ಷಯ್ ಕುಮಾರ್ ಸದ್ಯ ಬೆಲ್ ಬಾಟಂ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಳಿಸಿದ್ದಾರೆ. ಬೆಲ್ ಬಾಟಂ ಸಿನಿಮಾದ ನಿರ್ಮಾಪಕರೇ ಅಕ್ಷಯ್ ಹೊಸ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಇದೊಂದು ಕಾಮಿಡಿ ಸಿನಿಮಾವಾಗಿದ್ದು, ಮುದಾಸ್ಸರ್ ಅಜೀಜ್ ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಸಿನಿಮಾ 2021 ಜುಲೈನಲ್ಲಿ ಸೆಟ್ಟೇರಲಿದೆ.

Recommended Video

ಸೈಬರ್ ರಾಣೆ ಮೆಟ್ಟಿಲೇರಿದ Vinod Raj | Filmibeat Kannada

More from Filmibeat

English summary
Bollywood Actor Akshay Kumar is Charging 100 crores for his Upcomming movie which has a Budget of 35-45 crores.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X