For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ನಟ ಅಕ್ಷಯ್ ಕುಮಾರ್

  |

  ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಸದ್ಯ ಬಿ ಟೌನ್ ಶ್ರೀಮಂತ ನಟ ಅಂದರೆ ತಪ್ಪಾಗಲ್ಲ. ಒಂದು ವರ್ಷಕ್ಕೆ ನಾಲ್ಕೈದು ಸಿನಿಮಗಳನ್ನು ಮಾಡಿ ರಿಲೀಸ್ ಮಾಡುತ್ತಾರೆ ಕಳೆದ ವರ್ಷ ಅಕ್ಷಯ್ ಅಭಿನಯದ ನಾಲ್ಕು ಸಿನಿಮಾಗಳು ರಿಲೀಸ್ ಆಗಿವೆ. ನಾಲ್ಕು ಸಿನಿಮಾಗಳು ಸೂಪರ್ ಹಿಟ್ ಆಗಿದ್ದು ಕಲೆಕ್ಷನ್ ವಿಚಾರದಲ್ಲು ದಾಖಲೆ ಮಾಡಿವೆ.

  ವಾರ್ಷಿಕ ಗಳಿಕೆಯಲ್ಲಿ ಸಲ್ಮಾನ್ ಖಾನ್ ಹಿಂದಿಕ್ಕಿದ ನಟ ಅಕ್ಷಯ್ ಕುಮಾರ್ವಾರ್ಷಿಕ ಗಳಿಕೆಯಲ್ಲಿ ಸಲ್ಮಾನ್ ಖಾನ್ ಹಿಂದಿಕ್ಕಿದ ನಟ ಅಕ್ಷಯ್ ಕುಮಾರ್

  ಕಡಿಮೆ ಅವಧಿಯಲ್ಲಿ ಅದ್ಭುತ ಸಿನಿಮಾಗಳನ್ನು ನೀಡುತ್ತಿರುವ ಅಕ್ಷಯ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಳೆದ ವರ್ಷ ಅಂದರೆ 2019ರಲ್ಲಿ ರಿಲೀಸ್ ಆದ ನಾಲ್ಕು ಅಕ್ಷಯ್ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ ನಲ್ಲಿಯು ಭರ್ಜರಿ ಕಲೆಕ್ಷನ್ ಮಾಡಿವೆ. ಕೋಟಿ ಕೋಟಿ ಲೂಟಿ ಮಾಡುವ ಮೂಲಕ ಅಕ್ಷಯ್ ಹೊಸ ಇತಿಹಾಸ ಬರೆದಿದ್ದಾರೆ.

  ಒಂದು ವರ್ಷಕ್ಕೆ 700 ಕೋಟಿ ಕಲೆಕ್ಷನ್

  ಒಂದು ವರ್ಷಕ್ಕೆ 700 ಕೋಟಿ ಕಲೆಕ್ಷನ್

  ಕಳೆದ ವರ್ಷ ಅಕ್ಷಯ್ ಸಿನಿಮಾಗಳಿಂದ ಬರೋಬ್ಬರಿ 700 ಕೋಟಿ ಬ್ಯುಸಿನೆಸ್ ಆಗಿದೆ. ಕಳೆದ ವರ್ಷ ರಿಲೀಸ್ ಆದ ಅಕ್ಷಯ್ ಮೊದಲ ಸಿನಿಮಾ 'ಕೇಸರಿ' ಸೂಪರ್ ಹಿಟ್ ಆಗಿದೆ. 'ಕೇಸರಿ' ಬಾಕ್ಸ್ ಆಫೀಸ್ ನಲ್ಲಿ 154.41 ಕೋಟಿ ಬಾಚಿಕೊಂಡಿದೆ. ನಂತರ ಬಂದ 'ಮಿಷನ್ ಮಂಗಲ್' 202.98 ಕೋಟಿ ಕಲೆಕ್ಷನ್ ಮಾಡಿತ್ತು. 'ಹೌಸ್ ಫುಲ್-4' 194.60 ಕೋಟಿ ಕಲೆಕ್ಷನ್ ಮಾಡಿದ್ರೆ, ಇನ್ನು ಡಿಸೆಂಬರ್ ನಲ್ಲಿ ತೆರೆಗೆ ಬಂದ ಗುಡ್ ನ್ಯೂಸ್ 162 ಕೋಟಿ ಬಾಚಿಕೊಂಡಿದೆ. ಅಲ್ಲದೆ ಸಿನಿಮಾ ಇನ್ನು ಉತ್ತಮ ಪ್ರದರ್ಶನ ಕಾಣುತ್ತಿದೆ.

  ಪತ್ನಿಗೆ ಈರುಳ್ಳಿ ಕಿವಿಯೋಲೆ ಗಿಫ್ಟ್ ಮಾಡಿದ ಬಾಲಿವುಡ್ ಸ್ಟಾರ್ ನಟಪತ್ನಿಗೆ ಈರುಳ್ಳಿ ಕಿವಿಯೋಲೆ ಗಿಫ್ಟ್ ಮಾಡಿದ ಬಾಲಿವುಡ್ ಸ್ಟಾರ್ ನಟ

  ಹೆಚ್ಚು ಕಲೆಕ್ಷನ್ ಲಿಸ್ಟ್ ನಲ್ಲಿ ಸಲ್ಮಾನ್ ಮತ್ತು ರಣ್ವೀರ್

  ಹೆಚ್ಚು ಕಲೆಕ್ಷನ್ ಲಿಸ್ಟ್ ನಲ್ಲಿ ಸಲ್ಮಾನ್ ಮತ್ತು ರಣ್ವೀರ್

  2019ರಲ್ಲಿಯೆ ಅಕ್ಷಯ್ ಸಿನಿಮಾ ಒಟ್ಟು 714 ಕೋಟಿ ಬ್ಯುಸಿನೆಸ್ ಮಾಡಿವೆ. ಆದರೆ 2015ರಲ್ಲಿ ಸಲ್ಮಾನ್ ಖಾನ್ ಸಿನಿಮಾಗಳು 500 ಕೋಟಿ ಬಾಚಿಕೊಂಡಿತ್ತು. 'ಭಜರಂಗಿ ಭಾಯಿಜಾನ್' ಮತ್ತು 'ಪ್ರೇಮ್ ರತನ್ ಧನ್ ಪಾಯೋ' ಸಿನಿಮಾಗಳು 500 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಮಾಡಿತ್ತು. ಇನ್ನು 2018ರಲ್ಲಿ ರಣ್ವೀರ್ ಸಿಂಗ್ ಅಭಿನಯದ ಪದ್ಮಾವತ್ ಮತ್ತು ಸಿಂಬ ಸಿನಿಮಾಗಳು ಕೂಡ 500 ಕೋಟಿ ಬ್ಯುಸಿನೆಸ್ ಮಾಡಿತ್ತು. ಈಗ ಅಕ್ಷಯ್ ಕುಮಾರ್ ಸಿನಿಮಾ ಈ ಎಲ್ಲಾ ದಾಖಲೆಗಳನ್ನು ಮೀರಿ ಹೊಸ ಇತಿಹಾಸ ನಿರ್ಮಿಸಿದೆ.

  ಕಡಿಮೆ ಅವಧಿಯಲ್ಲಿ ಹೆಚ್ಚು ಸಿನಿಮಾಗಳು

  ಕಡಿಮೆ ಅವಧಿಯಲ್ಲಿ ಹೆಚ್ಚು ಸಿನಿಮಾಗಳು

  ಕಡಿಮೆ ಅವಧಿಯಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಅಕ್ಷಯ್ ನೋಡಿ ಇಡೀ ಬಾಲಿವುಡ್ ದಂಗ್ ಆಗಿದೆ. ಒಂದು ಕಾಲದಲ್ಲಿ ಅಕ್ಷಯ್ ಸಿನಿಮಾ ನಿರ್ಮಾಣ ಮಾಡಲು ಯಾರು ಉತ್ಸಾಹ ತೋರುತ್ತಿರಲಿಲ್ಲ. ಆದರಿಗ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿರುವುದನ್ನು ನೋಡಿ ನಿರ್ಮಾಪಕರು ಅಕ್ಷಯ್ ಕಾಲ್ ಶೀಟ್ ಗಾಗಿ ಕ್ಯೂ ನಿಲ್ಲುವಂತೆ ಆಗಿದೆ.

  ಭಾರತೀಯ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿ ಬೇಸರ ಹೊರಹಾಕಿದ ಅಕ್ಷಯ್ ಕುಮಾರ್ಭಾರತೀಯ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿ ಬೇಸರ ಹೊರಹಾಕಿದ ಅಕ್ಷಯ್ ಕುಮಾರ್

  2020ರಲ್ಲಿ ಅಕ್ಷಯ್ ಮೇಲೆ ಹೆಚ್ಚಿದ ನಿರೀಕ್ಷೆ

  2020ರಲ್ಲಿ ಅಕ್ಷಯ್ ಮೇಲೆ ಹೆಚ್ಚಿದ ನಿರೀಕ್ಷೆ

  2020ರಲ್ಲೂ ಸಹ ಸಾಕಷ್ಟು ಸಿನಿಮಾಗಳು ಅಕ್ಷಯ್ ಬತ್ತಳಿಕೆಯಲ್ಲಿದೆ. ಸೂರ್ಯವಂಶಿ, ಲಕ್ಷ್ಮಿ ಬಾಂಬ್ ಮತ್ತು ಪೃಥ್ವಿರಾಜ್ ಸಿನಿಮಾಗಳು ಸಾಲಿನಲ್ಲಿ ಇವೆ. ಇದರ ಜೊತೆಗೆ ಇನ್ನೆಷ್ಟು ಸಿನಿಮಾಗಳು ಸೇರಿಕೊಳ್ಳಲಿದೆಯೊ ಗೊತ್ತಿಲ್ಲ. ಆದರೆ ಈ ಎಲ್ಲಾ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿವೆ.

  English summary
  Bollywood Actor Akshay Kumar movies have grossed over Rs 700 crore a year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X