For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ ಬೈಕ್ ಏರಿ ಚಿತ್ರೀಕರಣಕ್ಕೆ ಹೊರಟ ಕಾರಣ ಬಹಿರಂಗ

  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಸದಾ ಸಿನಿಮಾಗಳಲ್ಲಿ ಬ್ಯುಸಿ ಇರುತ್ತಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡುತ್ತಿರುವ ಅಕ್ಷಯ್ ತುಂಬಾ ವೃತ್ತಿಪರತೆ ಹೊಂದಿರುವ ನಟ. ಅಂದುಕೊಂಡ ಸಮಯಕ್ಕೆ ಚಿತ್ರೀಕರಣ ಮುಗಿಸಿ, ಮತ್ತೊಂದು ಸಿನಿಮಾ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ.

  ಲಾಕ್ ಡೌನ್ ಬಳಿಕ ಅಕ್ಷಯ್ ಕುಮಾರ್ ಬೆಲ್ ಬಾಟಂ ಸಿನಿಮಾದ ಚಿತ್ರೀಕರಣ ಮುಗಿಸಿ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಹಾವಳಿಯ ನಡುವೆಯೂ ಅಕ್ಷಯ್ ಕುಮಾರ್ ಮತ್ತು ತಂಡ ವಿದೇಶಕ್ಕೆ ಹಾರಿ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿ ಬಂದಿದ್ದಾರೆ. ಸದಾ ಸಿನಿಮಾದಲ್ಲಿ ನಿರತರಾಗಿರುವ ಅಕ್ಷಯ್ ಸಮಯ ಉಳಿಸಲು ಹೊಸ ದಾರಿ ಕಂಡುಕೊಂಡಿದ್ದಾರೆ.

  'ಲಕ್ಷೀ ಬಾಂಬ್' ಸಿನಿಮಾದ 'ಬುರ್ಜ್ ಖಲೀಫಾ' ಸಾಂಗ್: ಅಕ್ಷಯ್-ಕಿಯಾರಾ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ'ಲಕ್ಷೀ ಬಾಂಬ್' ಸಿನಿಮಾದ 'ಬುರ್ಜ್ ಖಲೀಫಾ' ಸಾಂಗ್: ಅಕ್ಷಯ್-ಕಿಯಾರಾ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ

  ಮುಂಬೈ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರುವ ಕಾರಣ ಅಕ್ಷಯ್ ಕುಮಾರ್, ಟ್ರಾಪಿಕ್ ತಪ್ಪಿಸಿ, ಸಮಯ ಉಳಿಸಲು ಕಾರು ಬಿಟ್ಟು ಬೋಟ್ ಮತ್ತು ಬೈಕ್ ಏರಿದ್ದಾರೆ. ಮುಂಬೈನಲ್ಲಿ ಹೆಚ್ಚಾದ ಟ್ರಾಪಿಕ್ ನೋಡಿ ಅಕ್ಷಯ್ ಐಷಾರಾಮಿ ಕಾರನ್ನು ಬಿಟ್ಟು ಬೋಟಲ್ಲಿ ಪ್ರಯಾಣ ಮಾಡಿದ್ದಾರೆ. ಬೋಟ್ ಯಿಂದ ಇಳಿದು ಬೈಕ್ ಹತ್ತಿ ಸರಿಯಾದ ಸಮಯಕ್ಕೆ ಚಿತ್ರೀಕರಣ ಸ್ಥಳ ತಲುಪಿದ್ದಾರೆ.

  ಟ್ರಾಫಿಕ್ ತಪ್ಪಿಸಿಕೊಂಡು, ಸಮಯ ಉಳಿಸಲು ಅಕ್ಷಯ್ ಕುಮಾರ್ ಮಾಡಿದ ಐಡಿಯಾಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಕ್ಷಯ್ ಕುಮಾರ್ ಬೈಕ್ ಹಿಂದೆ ಕುಳಿತು ಹೋಗುತ್ತಿರು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

   Actor Akshay Kumar Opts For Bike And Boat To Avoid Traffic And Save Time
  Vajramuni ಮಗ ಚಿತ್ರರಂಗಕ್ಕೆ ಯಾಕೆ ಬಂದಿಲ್ಲ ಗೊತ್ತಾ..? | Filmibeat Kannada

  ಅಂದ್ಹಾಗೆ ಅಕ್ಷಯ್ ಸದ್ಯ ಪೃಥ್ವಿರಾಜ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಬಳಿಕ ಅಕ್ಷಯ್ ಸೂರ್ಯವಂಶಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  English summary
  Actor Akshay Kumar opts for bike and boat to Avoid traffic and save time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X