ಟೀನೆಜರ್ಸ್‌ಗಳಿಗಾಗಿ ಮಾಡಿದ ಮೊದಲ ವಯಸ್ಕರ ಸಿನಿಮಾ ಓಎಂಜಿ 2! ಅಕ್ಷಯ್ ಕುಮಾರ್ ಹೀಗೆ ಹೇಳಿದ್ಯಾಕೆ?

ನಟ ಅಕ್ಷಯ್ ಕುಮಾರ್, ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಅಭಿನಯದ ಓ ಮೈ ಗಾಡ್ 2 (ಓಎಂಜಿ 2) ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಎ ಪ್ರಮಾಣಪತ್ರ ಸಿಕ್ಕಿರುವ ಕುರಿತು ಹಲವು ಬಾರಿ ಚಿತ್ರತಂಡ ತಮ್ಮ ಬೇಸರ ವ್ಯಕ್ತಪಡಿಸಿತ್ತು. ಆದರೆ ನಟ ಅಕ್ಷಯ್ ಕುಮಾರ್ ಎಲ್ಲಿಯೂ ಮಾತನಾಡಿರಲಿಲ್ಲ.ಮೊದಲ ಬಾರಿಗೆ ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಶುಕ್ರವಾರ ಬಿಡುಗಡೆಯಾದ ಚಿತ್ರದಲ್ಲಿ ಅಕ್ಷಯ್ ಕುಮಾರ್ ಶಿವ ಮತ್ತು ಶಿವಗಣದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಚಲನಚಿತ್ರದ ಪ್ರದರ್ಶನದ ನಂತರ ಥಿಯೇಟರ್‌ಗೆ ಭೇಟಿ ನೀಡಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿರುವ ಅಕ್ಷಯ್ ಕುಮಾರ್ ಅವರ ವಿಡಿಯೋ ಹೊರಬಿದ್ದಿದೆ. ವಿಡಿಯೋದಲ್ಲಿ ಚಿತ್ರದ ಬಗ್ಗೆ ಜನರ ಅಭಿಪ್ರಾಯವನ್ನು ಅಕ್ಷಯ್ ಪಡೆಯುತ್ತಿದ್ದಾರೆ. ಈ ವೇಳೆ ಅಕ್ಷಯ್ ಕುಮಾರ್ ಓಎಂಜಿ 2 ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ನಿಂದ ಎ ಪ್ರಮಾಣಪತ್ರವನ್ನು ಹೇಗೆ ಪಡೆದುಕೊಂಡಿದೆ ಎಂದು ತಮಾಷೆ ಮಾಡಿದ್ದಾರೆ.

 Actor Akshay Kumar reaction on OMG 2 getting A certification from CBFC

ಚಿತ್ರವನ್ನು ಶಾಲೆಗಳಲ್ಲಿ ತೋರಿಸಬೇಕು

ಓಎಂಜಿ ಸೀಕ್ವೆಲ್ ವೀಕ್ಷಕರೊಂದಿಗೆ ಮಾತನಾಡಿದ ಅಕ್ಷಯ್ ಕುಮಾರ್, "ಕೈಸಿ ಲಗೀ ಆಪ್ ಲೋಗೋ ಕೋ ಸಿನಿಮಾ? ಪೆಹ್ಲಿ ಅಡಲ್ಟ್ ಫಿಲಂ ಹೈ ಜೋ ಟಿನೇಜರ್ಸ್‌ ಕೆ ಲಿಯೇ ಬಾನಿ ಹೈ. ಕೇಹೆನಾ ಹೈ ತೋ ಯೇ ಸಬ್ ಸ್ಕೂಲ್ ಮೇ ದಿಖಾನಿ ಚಾಹಿಯೇ, ಲೇಕಿನ್ ಆಪ್ ಸಬ್ ಎಂಟರ್ಟೈನ್ ಹುಯೇ ನಾಹ್? ಬಹುತ್ ಅಚಾ ಲಗಾ, ಬಹುತ್-ಬಹುತ್ ಶುಕ್ರಿಯಾ ಆಪ್ ಲೋಗ್ ಆಯೆ ದೇಖ್ನೆ (ನಿಮಗೆ ಸಿನಿಮಾ ಹೇಗನಿಸಿತು? ಇದು ಹದಿಹರೆಯದವರಿಗಾಗಿ ವಿಶೇಷವಾಗಿ ತೆಗೆದಿರುವ ಮೊದಲ ವಯಸ್ಕ ಚಲನಚಿತ್ರ. ಹೇಳಬೇಕೆಂದರೆ ಇದನ್ನು ನಿಜವಾಗಿಯೂ ಶಾಲೆಗಳಲ್ಲಿ ತೋರಿಸಬೇಕು, ನಿವೆಲ್ಲರೂ ಸಿನಿಮಾ ನೋಡಿ ಆನಂದಿಸಿದ್ದಿರಾ?. ನೀವು ಚಲನಚಿತ್ರವನ್ನು ವೀಕ್ಷಿಸಲು ಬಂದಿರುವುದು ನನಗೆ ತುಂಬಾ ಸಂತೋಷವಾಗಿದೆ)" ಎಂದಿದ್ದಾರೆ.


ಓಎಂಜಿ 2 ಗೆ ವಯಸ್ಕ ಪ್ರಮಾಣಪತ್ರ

ಸಿನಿಮಾ ಕುರಿತ ಊಹಾಪೋಹಗಳ ನಂತರ ಚಲನಚಿತ್ರ ನಿರ್ಮಾಪಕರು UA ಪ್ರಮಾಣಪತ್ರವನ್ನು ನೀಡಿ ಎಂದು ಸಿಬಿಎಫ್‌ಸಿಗೆ ಮನವಿ ಮಾಡಿದ್ದರು. ಆದರೆ, ಎ ಪ್ರಮಾಣಪತ್ರವನ್ನು ನೀಡಲಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಆದಿಪುರುಷ್ ಸಿನಿಮಾ ಎದುರಿಸಿದ ವಿವಾದದಿಂದಾಗಿ ಸಿಬಿಎಫ್‌ಸಿ ಹೆಚ್ಚು ಜಾಗರೂಕವಾಗಿದೆ ಎಂದು ವರದಿಗಳು ಹೇಳಿವೆ. ಓಂ ರಾವುತ್ ಅವರ ಆದಿಪುರುಷ್ ಜೂನ್‌ನಲ್ಲಿ ಬಿಡುಗಡೆಯಾದ ನಂತರ ದೇಶಾದ್ಯಂತ ಭಾರಿ ವಿವಾದ ಉಂಟು ಮಾಡಿತ್ತು.

ಸಿನಿಮಾದಲ್ಲಿ ರಾಘವನಾಗಿ ಪ್ರಭಾಸ್, ಜಾನಕಿಯಾಗಿ ಕೃತಿ, ಲಕ್ಷ್ಮಣನಾಗಿ ಸನ್ನಿ ಸಿಂಗ್ ಮತ್ತು ಲಂಕೇಶ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾದ ಸಂಭಾಷಣೆಗಳು, ವೇಷಭೂಷಣಗಳು ಮತ್ತು ಕಾರ್ಟೂನ್ ತರಹದ ಗ್ರಾಫಿಕ್ಸ್ ಬಗ್ಗೆ ವಿಪರಿತ ಟೀಕೆಗಳು ಬಂದವು.

 Actor Akshay Kumar reaction on OMG 2 getting A certification from CBFC

ಓ ಮೈ ಗಾಡ್ 2

ಓಎಂಜಿ 2 ಎಂಬುದು 2012 ರ ಓಎಂಜಿ - ಓ ಮೈ ಗಾಡ್ ಚಿತ್ರದ ಸೀಕ್ವೆಲ್, ಅದರಲ್ಲಿ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಉಮೇಶ್ ಶುಕ್ಲಾ ನಿರ್ದೇಶನವಿತ್ತು. ಓಎಂಜಿ 2 ಅನ್ನು ಅಮಿತ್ ರೈ ನಿರ್ದೇಶಿಸಿದ್ದಾರೆ ಮತ್ತು ಪಂಕಜ್ ತ್ರಿಪಾಠಿ ಕಾಂತಿ ಶರಣ್ ಮುದ್ಗಲ್ ಎಂಬ ಶಿವಭಕ್ತನಾಗಿ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಭಗವಾನ್ ಶಿವನ ಸಂದೇಶವಾಹಕನಾಗಿ ಮತ್ತು ಯಾಮಿ ಗೌತಮ್ ವಕೀಲರಾಗಿ ಪಾತ್ರ ನಿರ್ವಹಿಸಿದ್ದಾರೆ.

More from Filmibeat

English summary
Akshay Kumar reaction on OMG 2 getting A certification from CBFC.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X