OMG 2: ಅಕ್ಷಯ್ ಕುಮಾರ್ ಸಿನಿಮಾಗೆ ಒಟಿಟಿ ಬಿಡುಗಡೆಗೂ ಸಂಕಷ್ಟ, 27 ದೃಶ್ಯಗಳಿಗೆ ಕತ್ತರಿ
ಅಕ್ಷಯ್ ಕುಮಾರ್ ಅವರ ಚಿತ್ರ 'ಓಎಂಜಿ 2' ಆಗಸ್ಟ್ 11 ರಂದು ಸನ್ನಿ ಡಿಯೋಲ್ ಅವರ 'ಗದರ್ 2' ಜೊತೆಗೆ ಬಿಡುಗಡೆಯಾಗಿತ್ತು. ಅಮಿತ್ ರಾಯ್ ನಿರ್ದೇಶಿಸಿದ ಚಲನಚಿತ್ರವು ಲೈಂಗಿಕ ಶಿಕ್ಷಣದ ಕಥೆಯನ್ನು ಆಧರಿಸಿದೆ. ಆದರೆ, ಸಿನಿಮಾಗೆ ಸೆನ್ಸಾರ್ ಬೋರ್ಡ್ ಹಲವು ದೃಶ್ಯಗಳಿಗೆ ಕತ್ತರಿ ಹಾಕಿ, ಎ ಪ್ರಮಾಣ ಪತ್ರ ನೀಡಿತ್ತು. ಈಗ ಒಟಿಟಿ ಬಿಡುಗಡೆಗೂ ಸಂಕಷ್ಟ ಎದುರಾಗಿದೆ.
ಚಿತ್ರದ ಬಿಡುಗಡೆಗೂ ಮುನ್ನ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಒಟಿಟಿಗೂ 27 ಕಟ್‌ಗಳನ್ನೂ ಸೂಚಿಸಿದೆ. ಚಿತ್ರತಂಡವು ಸೆನ್ಸಾರ್ ಮಂಡಳಿಗೆ ಮನವರಿಕೆ ಮಾಡಲು ಪ್ರಯತ್ನಿಸಿ, ಕೊನೆಗೆ ಹಲವು ಕಟ್‌ಗಳೊಂದಿಗೆ ಚಲನಚಿತ್ರವನ್ನು ಬಿಡುಗಡೆ ಮಾಡಬೇಕಾಯಿತು. ಕೊನೆಗೂ ಈ ಬಗ್ಗೆ ಅಕ್ಷಯ್ ಪ್ರತಿಕ್ರಿಯಿಸಿದ್ದಾರೆ.

'ನಿಯಮಗಳ ಬಗ್ಗೆ ನನಗೆ ಯಾವುದೇ ಕಲ್ಪನೆ ಇಲ್ಲ'
ಚಿತ್ರದ ಬಿಡುಗಡೆಗೂ ಮುನ್ನ ಸಿಬಿಎಫ್‌ಸಿಯ 27 ದೃಶ್ಯಗಳಿಗೆ ಕತ್ತರಿ ಪ್ರಯೋಗಿಸುವುದಕ್ಕೆ ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇಂಡಿಯಾ ಟುಡೇ ಡಾಟ್‌ಇನ್‌ಗೆ ನೀಡಿರುವ ಸಂದರ್ಶನದ ವೇಳೆ ಮಾತನಾಡಿದ ಅಕ್ಷಯ್ ಕುಮಾರ್, "ನನಗೆ ಜಗಳವಾಡಲು ಇಷ್ಟವಿಲ್ಲ. ನಿಯಮಗಳ ಬಗ್ಗೆ ನನಗೆ ತಿಳಿದಿಲ್ಲ. ನಾನು ರೂಲ್‌ಬುಕ್‌ಗೆ ಓದಿಲ್ಲ. ಅವರು ವಯಸ್ಕ ಚಿತ್ರ ಎಂದು ಭಾವಿಸಿದ್ದಾರೆ. ನಿಮಗೆಲ್ಲರಿಗೂ ಇದೊಂದು ಅಡಲ್ಟ್ ಫಿಲ್ಮ್ ಅನ್ನಿಸುತ್ತಿದೆಯೇ..? ನಾವು ಯಾರಿಗೆ ಚಿತ್ರ ತೋರಿಸಿದ್ದೇವೆಯೋ ಅವರು ಅದನ್ನು ಇಷ್ಟಪಟ್ಟಿದ್ದಾರೆ. ನಾನು ಇದನ್ನು ಯುವಕರಿಗಾಗಿಯೇ ಮಾಡಿದ್ದೇನೆ. ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬರುತ್ತಿದೆ. ಅದರ ಬಗ್ಗೆ ನನಗೆ ಸಂತೋಷವಾಗಿದೆ. ಮುಖ್ಯವಾದ ವಿಷಯವೆಂದರೆ ಜನರು ಅದರ ಬಗ್ಗೆ ತಿಳಿದುಕೊಳ್ಳಬೇಕು" ಎಂದು ಹೇಳಿದ್ದಾರೆ.
"ನಾನು 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಸಿನಿಮಾ ಮಾಡುವಾಗ, ಇದು ಯಾವ ರೀತಿಯ ಹೆಸರು ಎಂದು ಎಲ್ಲರೂ ನನ್ನನ್ನು ಪ್ರಶ್ನೆ ಮಾಡಿದ್ದರು. ನಿಮಗೆ ಹುಚ್ಚುತನವೇ...? ಶೌಚಾಲಯ ಹೆಸರಿನಲ್ಲಿ ಚಿತ್ರ ಮಾಡಲು ಬಯಸುವಿರಾ..? ಇಂತಹ ಚಿತ್ರ ಯಾರು ಮಾಡುತ್ತಾರೆ?, ಟಾಯ್ಲೆಟ್‌ನಂತಹ ಸಬ್ಜೆಕ್ಟ್ ಯಾರಾದರೂ ಸಿನಿಮಾ ಮಾಡುತ್ತಾರಾ? ಎಂದು ಕೇಳಿದ್ದರು. ಆಗಲು ನಾನು ಹೇಳಿದೆ. ನನ್ನ ಈ ಸಿನಿಮಾ ಒಳ್ಳೆ ಪ್ರದರ್ಶನ ನೀಡಲಿದೆ. ನನ್ನ ಉತ್ಸಾಹ ಹಾಳು ಮಾಡಬೇಡಿ. ನನಗೆ ಧೈರ್ಯ ನೀಡಿ ಎಂದು. ಕನಿಷ್ಠ ಈ ರೀತಿಯ ಚಲನಚಿತ್ರವನ್ನು ಮಾಡಲಾಗುತ್ತಿದೆ. ಈ ಸಿನಿಮಾಗಳನ್ನು ನಾವು ಅದನ್ನು ನಮ್ಮ ಮಕ್ಕಳಿಗೆ ತೋರಿಸುತ್ತಿದ್ದೇವೆ. ಇದು ಸಮಾಜವನ್ನು ಬದಲಾಯಿಸುವ ಸಮಯ" ಎಂದು ಅಕ್ಷಯ್ ಬೇಸರ ಹೊರಹಾಕಿದ್ದಾರೆ.

ಮುಂದುವರಿದು ತಮ್ಮ ಪ್ಯಾಡ್ ಮ್ಯಾನ್ ಸಿನಿಮಾ ಬಗ್ಗೆ ಮಾತನಾಡಿರುವ ಅವರು, "ಯಾರೂ ಕೈಯಲ್ಲಿ ಸ್ಯಾನಿಟರಿ ಪ್ಯಾಡ್ ಹಿಡಿಯಲು ಧೈರ್ಯ ಮಾಡದ ಸಮಯದಲ್ಲಿ ನಾನು ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಚಲನಚಿತ್ರ ಮಾಡಿದ್ದೇನೆ. ಜನರು ಅದನ್ನು ಮುಟ್ಟಲು ಸಿದ್ಧರಿಲ್ಲ' ಎಂದಿದ್ದಾರೆ.
ಓಎಂಜಿ 2
'OMG 2' ಆಗಸ್ಟ್ 11 ರಂದು ತೆರೆಗೆ ಅಪ್ಪಳಿಸಿತ್ತು. 'ಓಎಂಜಿ 2' ಸಿನಿಮಾವು ಲೈಂಗಿಕ ಶಿಕ್ಷಣದ ಅವಶ್ಯಕತೆ ಬಗೆ ಮಾತನಾಡುವ ಕೋರ್ಟ್ ರೂಂ ಡ್ರಾಮಾ. ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಶಿವಗಣದ ಸದಸ್ಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಪಂಕಜ್ ತ್ರಿಪಾಠಿ ಶಿವನ ಭಕ್ತ ಮತ್ತು ತನ್ನ ಮಗನ ಹಕ್ಕಿಗಾಗಿ ಹೋರಾಡುವ ತಂದೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಿನಿಮಾದಲ್ಲಿ ವಕೀಲೆಯಾಗಿ ಯಾಮಿ ಗುಪ್ತಾ ಕಾನಿಸಿಕೊಂಡಿದ್ದು. ಸಿನಿಮಾಕ್ಕೆ ಅಮಿತ್ ರಾಯ್ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











