ನಟ ಅಕ್ಷಯ್ ಕುಮಾರ್‌ಗೆ ಕೊರೊನಾ ವೈರಸ್ ಪಾಸಿಟಿವ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಖುದ್ದು ಅಕ್ಷಯ್ ಕುಮಾರ್ ಈ ವಿಚಾರವನ್ನು ಭಾನುವಾರ (ಏಪ್ರಿಲ್ 4) ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖಚಿತಪಡಿಸಿದ್ದಾರೆ.

''ಇಂದು ಬೆಳಗ್ಗೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ನನಗೆ ಪಾಸಿಟಿವ್ ಬಂದಿದೆ. ತಕ್ಷಣ ನಾನು ಐಸೋಲೆಟ್ ಆಗಿದ್ದೇನೆ. ಹೋಮ್ ಕ್ವಾರಂಟೈನ್‌ನಲ್ಲಿದ್ದು, ಕೊರೊನಾ ನಿಯಮಗಳನ್ನು ಪಾಲಿಸುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಿದ್ದವರು ದಯವಿಟ್ಟು ಪರೀಕ್ಷಿಸಿ, ಬೇಗ ಗುಣಮುಖನಾಗಿ ಬರುತ್ತೇನೆ'' ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಇತ್ತೀಚಿಗಷ್ಟೆ 'ರಾಮ್ ಸೇತು' ಸಿನಿಮಾದ ಚಿತ್ರೀಕರಣ ಆರಂಭಿಸಿದ್ದರು. ಮಾರ್ಚ್ 18 ರಂದು ಅಯೋಧ್ಯೆಯಲ್ಲಿ ರಾಮ್ ಸೇತು ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆದಿತ್ತು. ಮಾರ್ಚ್ 30 ರಿಂದ ಮುಂಬೈನಲ್ಲಿ ಶೂಟಿಂಗ್ ಪ್ರಾರಂಭಿಸಿದ್ದರು.

 Actor Akshay Kumar tested positive for COVID-19

ಅದಕ್ಕೂ ಮುಂಚೆ ಧನುಶ್, ಸಾರಾ ಅಲಿ ಖಾನ್ ಜೊತೆ ನಟಿಸಿರುವ 'ಅತ್ರಂಗಿ ರೇ' ಸಿನಿಮಾ ಶೂಟಿಂಗ್ ಮುಗಿಸಿದ್ದರು. ಆನಂದ್ ಎಲ್ ರೈ ನಿರ್ದೇಶನದ ಈ ಚಿತ್ರ ಆಗಸ್ಟ್ 6 ರಂದು ಬಿಡುಗಡೆಯಾಗಲಿದೆ.

ಕಳೆದ ವರ್ಷ 'ಲಕ್ಷ್ಮಿ' ಸಿನಿಮಾ ಬಿಡುಗಡೆಯಾಗಿತ್ತು. 'ಸೂರ್ಯವಂಶಿ' ಸಿನಿಮಾ ತೆರೆಗೆ ಬರಬೇಕಿದೆ.' ಬೆಲ್ ಬಾಟಂ 2' ಸಿನಿಮಾ ಬಹುತೇಕ ಮುಗಿದಿದೆ. 'ಪೃಥ್ವಿರಾಜ್' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. 'ಬಚ್ಚನ್ ಪಾಂಡೆ' ಶೂಟಿಂಗ್ ಪ್ರಗತಿಯಲ್ಲಿದೆ.

Recommended Video

ಯುವರತ್ನ ಸಕ್ಸಸ್ ಪುನೀತ್ ರಾಜ್ ಕುಮಾರ್ ಗೆ ಸಾಥ್ ಕೊಟ್ಟ ಜಗ್ಗೇಶ್ | Filmibeat Kannada

More from Filmibeat

English summary
Bollywood Actor Akshay Kumar has confirmed that he has tested positive for COVID-19. We wish him a speedy recovery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X