ಕರಣ್ ಜೋಹರ್ ನಿರ್ಮಾಣದ ಸಿನಿಮಾದಿಂದ ಹೊರ ನಡೆದ ಕಾರ್ತಿಕ್ ಜಾಗಕ್ಕೆ ಸ್ಟಾರ್ ನಟನ ಎಂಟ್ರಿ
ಬಾಲಿವುಡ್ ಸ್ಟಾರ್ ನಟ ನಟ ಕಾರ್ತಿಕ್ ಆರ್ಯನ್ ಬಹುನಿರೀಕ್ಷೆಯ ದೋಸ್ತಾನ-2 ಸಿನಿಮಾದಿಂದ ಹೊರಬಂದ ಬಳಿಕ ಆ ಜಾಗಕ್ಕೆ ಯಾರು ಎಂಟ್ರಿ ಕೊಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಬಾಲಿವುಡ್ ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ ನಲ್ಲಿ ಮೂಡಿಬರುತಿದ್ದ ದೋಸ್ತಾನ-2 ಚಿತ್ರದಲ್ಲಿ ಕಾರ್ತಿಕ್ ನಾಯಕನಾಗಿ ಕಾಣಿಸಿಕೊಳ್ಳಬೇಕಿತ್ತು.
ಧರ್ಮ ಸಂಸ್ಥೆ ಕಾರ್ತಿಕ್ ನನ್ನು ಸಿನಿಮಾದಿಂದ ಹೊರ ಹಾಕಿ, ಇನ್ಮುಂದೆ ಕಾರ್ತಿಕ್ ಜೊತೆ ಯಾವುದೇ ಸಿನಿಮಾ ಮಾಡದಿರಲು ನಿರ್ಧರಿಸಿದೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಭಾರಿ ಟೀಕೆಗೆ ಗುರಿಯಾಗಿದ್ದ ಕರಣ್ ಜೋಹರ್ ಈ ನಿರ್ಧಾರ ಚಿತ್ರರಂಗಕ್ಕೆ ಮತ್ತು ಅಭಿಮಾನಿಗಳಿಗೆ ಶಾಕ್ ನೀಡಿದೆ.
ವೃತ್ತಿ ಪರತೆ ಇಲ್ಲ ಮತ್ತು ಕತೆಯಲ್ಲಿ ಅನವಶ್ಯಕವಾಗಿ ಎಂಟ್ರಿಯಾಗುತ್ತಾರೆ ಎನ್ನವ ಕಾರಣಕ್ಕೆ ಕಾರ್ತಿಕ್‌ರನ್ನು ಸಿನಿಮಾದಿಂದ ಹೊರಹಾಕಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಏನೇ ಇರಲಿ ಇದೆಲ್ಲ ನಡೆದುಹೋದ ಕತೆ. ಇದೀಗ ದೋಸ್ತಾನ-2 ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಕಾರ್ತಿಕ್ ಜಾಗಕ್ಕೆ ಬಾಲಿವುಡ್ ಸ್ಟಾರ್ ನಟ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಮಾತು ಹೇಳಿಬರುತ್ತಿದೆ.

ಅದು ಮತ್ಯಾರು ಅಲ್ಲ ನಟ ಅಕ್ಷಯ್ ಕುಮಾರ್. ಈಗಾಗಲೇ ಕರಣ್ ಜೋಹರ್ ಅಕ್ಷಯ್ ಕುಮಾರ್ ಜೊತೆ ಮಾತನಾಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಚಿತ್ರದಲ್ಲಿ ನಟಿಸುವಂತೆ ಅಕ್ಷಯ್ ಅವರನ್ನು ಕೇಳಿಕೊಂಡಿದ್ದಾರೆ ಎನ್ನುವ ವಿಚಾರ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಅಕ್ಷಯ್ ಕುಮಾರ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.
ಸದ್ಯ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಅಕ್ಷಯ್ ಇನ್ನು ಸಿನಿಮಾ ಕೆಲಸಗಳಿಗೆ ವಾಪಸ್ ಆಗಿಲ್ಲ. ಹಾಗಾಗಿ ಅಕ್ಷಯ್ ಕುಮಾರ್ ದೋಸ್ತಾನಾ-2ನಲ್ಲಿ ನಟಿಸುತ್ತಾರಾ? ಅಥವಾ ಬೇರೆ ನಟ ಕಾಣಿಸಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕು.


Click it and Unblock the Notifications











