ಟ್ರೋಲ್ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅಮೀರ್ ಖಾನ್

ಸಿನಿಮಾ ತಾರೆಯರ ಬಗ್ಗೆ ಪದೇ ಪದೇ ಟ್ರೋಲ್ ಆಗುತ್ತಲೇ ಇರುತ್ತದೆ. ಟ್ರೋಲ್ ಕಾಟ ನಟ ಅಮೀರ್ ಖಾನ್ ರನ್ನೂ ಬಿಟ್ಟಿಲ್ಲ. ಇದೀಗ ಈ ಬಗ್ಗೆ ಅಮೀರ್ ಪ್ರತಿಕ್ರಿಯೆ ನೀಡಿದ್ದಾರೆ.

ಟ್ರೋಲ್ ಗಳನ್ನು ಅಮೀರ್ ಖಾನ್ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲವಂತೆ. ಹೀಗಾಗಿ ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅಮೀರ್ ಹೇಳಿದ್ದಾರೆ.

ತಮ್ಮ ಸಿನಿಮಾಗೆ ಸಂಬಂಧಪಟ್ಟ ವಿಮರ್ಶೆಗಳನ್ನು, ಪ್ರತಿಕ್ರಿಯೆಗಳನ್ನು ಅಮೀರ್ ಗಮನಿಸುತ್ತಾರಂತೆ. ಸಿನಿಮಾ, ಪಾತ್ರ ಹಾಗೂ ನಟನೆ ಬಗ್ಗೆ ಬರುವ ಅಭಿಪ್ರಾಯಗಳು ಮುಖ್ಯ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಬರುವ ಟ್ರೋಲ್ ಗಳು ಉಪಯೋಗ ಆಗುವುದಿಲ್ಲ ಎಂದು ಅಮೀರ್ ಹೇಳಿದ್ದಾರೆ.

Actor Amir Khan Reaction About Trolls

ಸೋಷಿಯಲ್ ಮೀಡಿಯಾದಲ್ಲಿ ಬರುವ ಅಭಿಪ್ರಾಯಗಳು ತಮ್ಮ ಕಲಿಕೆಗೆ ಅನುಕೂಲ ಆಗುವ ಆಗಿದ್ದರೆ ಸರಿ. ಆದರೆ, ಟ್ರೋಲ್ ಗಳು ಆ ರೀತಿ ಇರುವುದಿಲ್ಲ. ಹಾಗಾಗಿ ನಾನು ಅದನ್ನು ನೋಡಲು ಹೋಗುವುದಿಲ್ಲ ಎಂದು ಅಮೀರ್ ತಿಳಿಸಿದ್ದಾರೆ.

ಇತ್ತೀಚಿಗೆ ಅಮೀರ್ ಖಾನ್ 'ಥಕ್ಸ್ ಆಫ್ ಹಿಂದೂಸ್ತಾನ್' ಸಿನಿಮಾದ ಕಾರಣ ತುಂಬ ಟ್ರೋಲ್ ಆಗಿದ್ದರು. ಸಿನಿಮಾ ಅನೇಕರಿಗೆ ಇಷ್ಟ ಆಗಿರಲಿಲ್ಲ. ಹೀಗಾಗಿ ಚಿತ್ರದ ಬಗ್ಗೆ ಸಾಕಷ್ಟು ಟ್ರೋಲ್ ಗಳು ಆಗಿದ್ದವು.

ಅಮೀರ್ ಖಾನ್ ಸದ್ಯ 'ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಕ್ರಿಸ್ ಮಸ್ ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಅಮೀರ್ ಖಾನ್ ಅವರೇ ಈ ಸಿನಿಮಾದ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Actor Amir Khan reaction about trolls.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X