For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಟ ಅಮಿತ್ ಮಿಸ್ತ್ರಿ ಹೃದಯಾಘಾತದಿಂದ ನಿಧನ

  |

  ಗುಜರಾತ್ ಮೂಲದ ಬಾಲಿವುಡ್‌ನ ಖ್ಯಾತ ನಟ ಅಮಿತ್ ಮಿಸ್ತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಂದು (ಏಪ್ರಿಲ್ 23) ಬೆಳಗ್ಗೆ ಕೊನೆಯುಸಿರೆಳೆದಿದ್ದು, ಅಮಿತ್ ಮ್ಯಾನೇಜರ್ ಸಾವಿನ ಸುದ್ದಿಯನ್ನು ದೃಢಪಡಿಸಿದ್ದಾರೆ. ಅಮಿತ್ ಹಠಾತ್ ಸಾವು ಅವರ ಅಭಿಮಾನಿಗಳಿಗೆ, ಸ್ನೇಹಿತರಿಗೆ ಆಘಾತ ತಂದಿದೆ.

  ಸಿನಿಮಾ, ಕಿರುತೆರೆ ಮತ್ತು ವೆಬ್‌ಸೀರಿಸ್‌ಗಳಲ್ಲಿ ಪ್ರಖ್ಯಾತಿ ಪಡೆದಿದ್ದ ನಟ ಅಮಿತ್ ಮಿಸ್ತ್ರಿ, ತೆನಾಲಿ ರಾಮ, ಮದ್ದಂ ಸರ್, ದಫಾ 420 ಅಂತಹ ಟಿವಿ ಸೀರಿಸ್ ಮತ್ತು ಯಮಲ ಪಗ್ಲಾ ದಿವಾನಾ, ಶೋರ್ ಇನ್ ದಿ ಸಿಟಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಬಂದೀಶ್ ಬ್ಯಾಂಡಿಟ್ಸ್ ಅಂತಹ ಸೂಪರ್ ಹಿಟ್ ವೆಬ್‌ಸೀರಿಸ್‌ಗಳಲ್ಲಿ ನಟ ಅಮಿತ್ ಮಿಸ್ತ್ರಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬಂದೀಶ್ ಬ್ಯಾಂಡಿಟ್ಸ್ ವೆಬ್ ಸೀರಿಸ್ ಪಾತ್ರ ಅಮಿತ್ ಮಿಸ್ತ್ರಿಗೆ ಹೆಚ್ಚು ಪ್ರಶಂಸೆ ತಂದು ಕೊಟ್ಟಿತ್ತು.

  ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಕೊರೊನಾಗೆ ಬಲಿ

  ಎ ಜಂಟಲ್ ಮ್ಯಾನ್ ಸಿನಿಮಾದಿಂದ ತನ್ನ ವೃತ್ತಿ ಜೀವನ ಜೀವನ ಪ್ರಾರಂಭಿಸಿದ ಅಮಿತ್ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅಮಿತ್ ಮಿಸ್ತ್ರಿ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ನಟಿ ಟಿಸ್ಕಾ ಚೋಪ್ರಾ ಟ್ವೀಟ್ ಮಾಡಿ, ಎಷ್ಟು ಅದ್ಭುತವಾದ ವ್ಯಕ್ತಿ. ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ದೇವರು ನೀಡಲಿ' ಎಂದು ಹೇಳಿದ್ದಾರೆ.

  ಕೊರೊನಾ ಬಗ್ಗೆ ಹೆದರಿಸುವ ಬದಲು ಎದುರಿಸುವುದು ಹೇಗೆ ಅಂತಾ ತಿಳಿಸಿ | Filmibeat Kannada

  ಇನ್ನು ಸೇಕ್ರೆಡ್ ಗೇಮ್ಸ್ ಖ್ಯಾತಿಯ ನಟಿ ಕುಬ್ರಾ ಸೇಠ್ ಟ್ವೀಟ್ ಮಾಡಿ, 'ನೀವು ಈ ಭೂಮಿಯನ್ನು ಮಿಸ್ ಮಾಡಿಕೊಳ್ಳುತ್ತೀರಿ' ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

  English summary
  Bandish Bandits fame Actor Amit mistry Passaes away due to cardiac arrest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X