For Quick Alerts
  ALLOW NOTIFICATIONS  
  For Daily Alerts

  ಮತ್ತೆ ಬಿಗ್‌ಬಿಗೆ ಕೋವಿಡ್ ಪಾಸಿಟಿವ್: ಅಭಿಮಾನಿಗಳಲ್ಲಿ ಆತಂಕ

  |

  ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್‌ಗೆ ಮತ್ತೆ ಕೊರೊನಾ ಸೋಂಕು ದೃಢಪಟ್ಟಿದೆ. 2020ರ ಜುಲೈನಲ್ಲೂ ಅಮಿತಾಬ್ ಕೋವಿಡ್ ಪಾಟಿಸಿವ್ ಬಂದು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. 23 ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಅಷ್ಟೇ ಅಲ್ಲ ಕುಟುಂಬ ಸದಸ್ಯರೆಲ್ಲಾ ಕೊರೊನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದರು. ಇದೀಗ ಮತ್ತೆ ಬಿಗ್‌ಬಿಗೆ ಸೋಂಕು ತಗುಲಿರುವುದು ಅಭಿಮಾನಿಗಳಿಗೆ ಆತಂಕ ತಂದಿದೆ. ಇಳಿ ವಯಸ್ಸಿನಲ್ಲಿ ಬಿಗ್‌ಬಿ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಬೇಕಿದೆ.

  ಫ್ರೆಂಡ್‌ಶಿಪ್‌ ಡೇ ದಿನ ಗೆಳೆಯರೊಟ್ಟಿಗೆ ಸೇರಿ ಹಿಮಾಲಯ ಹತ್ತಲು ಹೊರಟ ಅಮಿತಾಬ್ ಬಚ್ಚನ್!ಫ್ರೆಂಡ್‌ಶಿಪ್‌ ಡೇ ದಿನ ಗೆಳೆಯರೊಟ್ಟಿಗೆ ಸೇರಿ ಹಿಮಾಲಯ ಹತ್ತಲು ಹೊರಟ ಅಮಿತಾಬ್ ಬಚ್ಚನ್!

  ತಮಗೆ ಕೋವಿಡ್ ಪಾಸಿಟಿವ್ ಆಗಿರುವ ವಿಚಾರವನ್ನು ಮಂಗಳವಾರ(ಆಗಸ್ಟ್ 23) ರಾತ್ರಿ ಟ್ವೀಟ್ ಮಾಡಿ ಅಮಿತಾಬ್ ಬಚ್ಚನ್ ತಿಳಿಸಿದ್ದಾರೆ. "ನನಗೆ ಕೋವಿಡ್ ಪಾಸಿಟಿವ್ ಬಂದಿದೆ. ನನ್ನ ಜೊತೆ ಯಾರ್ಯಾರು ಸಂಪರ್ಕದಲ್ಲಿದಿರೋ ಅವರೆಲ್ಲರೂ ದಯವಿಟ್ಟು ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ವಿನಂತಿಸಿಕೊಳ್ಳುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪಾರ್ಥಿಸುತ್ತಿದ್ದಾರೆ. ದಣಿವರಿಯದ ಕಲಾವಿದ ಅಮಿತಾಬ್ ಬಚ್ಚನ್ ದಶಕಗಳಿಂದ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಇವತ್ತಿಗೂ ಒಂದು ಕ್ಷಣವೂ ಪುರುಸೊತ್ತು ಇಲ್ಲದಂತೆ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ನಟಿಸುತ್ತಿದ್ದಾರೆ.

  ಸದ್ಯ ಒಂದಲ್ಲ ಎರಡಲ್ಲ 6 ಸಿನಿಮಾಗಳು ಬಿಗ್‌ಬಿ ಕೈಯಲ್ಲಿವೆ. ಈಗಾಗಲೇ 'ಬ್ರಹ್ಮಾಸ್ತ್ರ' ಹಾಗೂ 'ಗುಡ್‌ಬೈ' ಸಿನಿಮಾಗಳ ಶೂಟಿಂಗ್ ಮುಕ್ತಾಯವಾಗಿದೆ. 'ಗುಡ್‌ಬೈ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಬಿಗ್‌ಬಿ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಇನ್ನು 'ಉಂಚಾಯಿ', 'ಗಣಪತ್', 'ಪ್ರಾಜೆಕ್ಟ್ K', 'ಬಟ್ಟರ್‌ಫ್ಲೈ' ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಳ ಜೊತೆಗೆ ಬಿಗ್‌ಬಿ 'ಕೌನ್ ಬನೇಗಾ ಕರೋಡ್‌ಪತಿ' ಸೀಸನ್ 14ರ ಚಿತ್ರೀಕರಣದಲ್ಲಿದ್ದರು. ಇದೀಗ ಕೋವಿಡ್ ಪಾಸಿಟಿವ್ ಬಂದು ಐಸೋಲೇಷನ್‌ನಲ್ಲಿದ್ದಾರೆ. ಹಾಗಾಗಿ ಶೋ ಚಿತ್ರೀಕರಣ ಮುಂದೂಡಲಾಗಿದೆ.

  ರಣ್‌ಬೀರ್ ಕಪೂರ್, ಆಲಿಯಾ ಭಟ್ ಲೀಡ್‌ ರೋಲ್‌ಗಳಲ್ಲಿ ನಟಿಸಿರುವ 'ಬ್ರಹ್ಮಾಸ್ತ್ರ' ಸಿನಿಮಾ ರಿಲೀಸ್‌ ಡೇಟ್ ಹತ್ತಿರವಾಗುತ್ತಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದಾರೆ. ಕೊರೋನಾ ಸೋಂಕಿನಿಂದ ಬಿಗ್‌ಬಿ ಸಿನಿಮಾ ಪ್ರಮೋಷನ್‌ನಲ್ಲಿ ಭಾಗಿಯಾಗುವುದು ಕಷ್ಟವಾಗಲಿದೆ. ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ನಿಧಾನವಾಗಿ ಕೋವಿಡ್ ಕೇಸ್‌ಗಳ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 25%ರಷ್ಟು ಕೊರೋನಾ ಕೇಸ್‌ಗಳು ಹೆಚ್ಚಾಗಿದ್ದು, ಸದ್ಯ ನಗರದಲ್ಲಿ 12 ಸಾವಿರ ಆಕ್ವೀವ್ ಕೇಸ್‌ಗಳು ಇರುವುದಾಗಿ ವರದಿಯಾಗಿದೆ.

  English summary
  Actor Amitabh Bachchan tests positive for Covid-19 Once Again. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X