For Quick Alerts
  ALLOW NOTIFICATIONS  
  For Daily Alerts

  ಗಣರಾಜ್ಯ ದಿನ ಅನೌನ್ಸ್ ಆಯ್ತು '1971' ಸಿನಿಮಾ: ತೆರೆ ಮೇಲೆ ಬರ್ತಿದೆ ಇಂಡಿಯಾ-ಪಾಕ್ ವಾರ್

  |

  ಇದು ದೇಶದಾದ್ಯಂತ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ರಾಜಕೀಯ, ಸಿನಿಮಾ ಗಣ್ಯರು ದೇಶದ ಜನತೆಗೆ ಶುಭಾಶಯ ತಿಳಿಸುತ್ತಿದ್ದಾರೆ. ಗಣರಾಜ್ಯದ ದಿನ ಬಾಲಿವುಡ್ ನಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಿದ್ದು ಇಂಡೋ-ಪಾಕಿಸ್ತಾನ ಯುದ್ಧವನ್ನು ತೆರೆಮೇಲೆತರಲು ಸಜ್ಜಾಗಿದ್ದಾರೆ ನಿರ್ಮಾಪಕ ಮತ್ತು ನಟ ನಿಖಿಲ್ ದ್ವಿವೇದಿ.

  ಹೌದು ನಿಖಿಲ್ ದ್ವಿವೇದಿ ಹೊಸ ಸಿನಿಮಾ ಘೋಷಣೆ ಮಾಡಿದ್ದು, ಚಿತ್ರಕ್ಕೆ 1971 ಎಂದು ಟೈಟಲ್ ಇಡಲಾಗಿದೆ. ಹೊಸ ಸಿನಿಮಾ ಅನೌನ್ ಮಾಡಿ, 'ಭಾರತ ನಿಜವಾದ ಯುದ್ಧದ ಸಿನಿಮಾವನ್ನು ನೋಡಿಲ್ಲ. ಈ ಸಿನಿಮಾ ನೈಜ ಮತ್ತು ಅಧಿಕೃತವಾಗಿರುತ್ತೆ. ಯಾವುದೇ ಅತಿರೇಕ ಇಲ್ಲದೆ, ನಾವು ಅಂತರಾಷ್ಟ್ರೀಯ ಮಾನದಂಡಗಳ ಪ್ರಕಾರ ವಿನ್ಯಾಸಗೊಳಿಸಲು ಬಯಸುತ್ತೇವೆ' ಎಂದು ಹೇಳಿದ್ದಾರೆ.

  ಈ ಸಿನಿಮಾದಲ್ಲಿ ದೇಶದ ಶಕ್ತಿಯುತ ಮಹಿಳೆ, ಅಂದಿನ ಪ್ರಧಾನ ಮಂತ್ರಿ ಇಂದಿರ ಗಾಂಧಿ ಮತ್ತು ಸ್ಯಾಮ್ ಮಾಣಿಕ್ ಷಾ ಅವರ ಬಗ್ಗೆ ಸಿನಿಮಾದಲ್ಲಿ ಹೆಚ್ಚು ಒತ್ತು ನೀಡಲಾಗುತ್ತೆ ಎನ್ನಲಾಗುತ್ತಿದೆ.

  ಸ್ನೇಹಿತರ ಮಾತು ಕೇಳದೆ ಇದ್ದಿದ್ರೆ ಜಯಶ್ರೀ ಬದುಕಿರ್ತಾ ಇದ್ರು | Oneindia Kannada

  ಸದ್ಯ ಸಿನಿಮಾ ಅನೌನ್ಸ್ ಮಾಡಿರುವ ನಿಖಿಲ್ ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದ್ದಾರೆ. ಚಿತ್ರದಲ್ಲಿ ಯಾರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಯಾರು ಎನ್ನುವ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರಲಿಲ್ಲ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಬಹಿರಂಗ ಪಡಿಸಲಿದ್ದಾರೆ.

  English summary
  Actor And Producer Nikhil Dwivedi announces new film 1971 on indo pak war.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X