ತನಗಿಂತ 22 ವರ್ಷದ ಕಿರಿಯ ಯುವತಿಯೊಂದಿಗೆ 2ನೇ ಮದುವೆಯಾದ ನಟ ಅರ್ಬಾಜ್ ಖಾನ್
ಬಾಲಿವುಡ್ ನಟ ಅರ್ಬಾಜ್ ಖಾನ್ ಮತ್ತು ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಡಿಸೆಂಬರ್ 24 ರಂದು (ಭಾನುವಾರ) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ವದಂತಿಗಳ ನಡುವೆಯೇ ಈ ಜೋಡಿ ಮುಂಬೈನಲ್ಲಿ ಕುಟುಂಬ ಸದಸ್ಯರು ಮತ್ತು ಕೆಲವೇ ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ.
56 ವರ್ಷದ ನಟ ಅರ್ಬಾಜ್ ಖಾನ್ ಮತ್ತು ಮೇಕಪ್ ಆರ್ಟಿಸ್ಟ್ ಶುರಾ ಖಾನ್ ನಡುವೆ ಕನಿಷ್ಠ 22 ವರ್ಷಗಳ ವಯಸ್ಸಿನ ಅಂತರವಿದೆ. ಆದರೂ ಇಬ್ಬರ ನಡುವೆ ವಯಸ್ಸು ಮುಖ್ಯವಾಗಿಲ್ಲ. ಮದುವೆ ಬಗ್ಗೆ ಮಾಧ್ಯಮಗಳಿಗೆ ಹೆಚ್ಚು ಮಾಹಿತಿ ನೀಡಿರಲಿಲ್ಲ. ತುಂಬಾ ಕಡಿಮೆ ಜನರ ನಡುವೆ ಸಿಂಪಲ್ ಆಗಿ 'ನಿಖಾ' ಕಾರ್ಯಕ್ರಮ ನಡೆದಿದೆ. ವಿವಾಹಿತ ದಂಪತಿಯ ಮೊದಲ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ರೌಂಡ್ ಹೊಡೆಯುತ್ತಿದೆ.

ಅರ್ಬಾಜ್ ಖಾನ್ ಮತ್ತು ಶುರಾ ಖಾನ್ ಅವರ ಮದುವೆ
ಅರ್ಬಾಜ್ ಖಾನ್ ತಮ್ಮ ಅಧಿಕೃತ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಮೇಕಪ್ ಕಲಾವಿದೆ ಶುರಾ ಖಾನ್ ಅವರನ್ನು ಮುಂಬೈನಲ್ಲಿರುವ ಸಹೋದರಿ ಅರ್ಪಿತಾ ಖಾನ್ ಅವರ ಮನೆಯಲ್ಲಿ ಭಾನುವಾರ ವಿವಾಹವಾದರು. ಮದುವೆಯಲ್ಲಿ ನಿಕಟ ಕುಟುಂಬ ಸದಸ್ಯರು ಮತ್ತು ಕೆಲವು ಸ್ನೇಹಿತರು ಮಾತ್ರ ಹಾಜರಿದ್ದರು.
ವಧು ಶುರಾ ಖಾನ್ ತಮ್ಮ ನಿಕಾಹ್‌ಗಾಗಿ ಲೈಟ್ ವೈಟ್ ಪೀಚ್ ಲೆಹೆಂಗಾದಲ್ಲಿ ಸುಂದರವಾಗಿ ಕಾಣುತ್ತಿದ್ದರು. ಮದುವೆಯ ಎರಡು ಚಿತ್ರಗಳನ್ನು ಹಂಚಿಕೊಂಡ ಅರ್ಬಾಜ್ ಖಾನ್, ಇನ್‌ಸ್ಟಾಗ್ರಾಮ್‌ನಲ್ಲಿ ಹೀಗೆ ಬರೆದಿದ್ದಾರೆ, "ನಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ, ಈ ದಿನದಿಂದ ನಾನು ಮತ್ತು ನನ್ನವರ ಜೀವನಪೂರ್ತಿ ಪ್ರೀತಿ ಮತ್ತು ಒಗ್ಗಟ್ಟಿನ ಆರಂಭವಾಗಿದೆ. ನಮ್ಮ ವಿಶೇಷ ದಿನದಂದು ನಿಮ್ಮೆಲ್ಲರ ಆಶೀರ್ವಾದ ಮತ್ತು ಶುಭಾಶಯಗಳು ಬೇಕು" ಎಂದಿದ್ದಾರೆ.
ಮಾಜಿ ಪತಿಯ ಮದುವೆಯಲ್ಲಿ ನಟಿ ಮಲೈಕಾ ಅರೋರಾ
ಇನ್ನು ಮದುವೆಯಲ್ಲಿ ನಟ ಅರ್ಬಾಜ್ ಖಾನ್ ಅವರ ಮಾಜಿ ಪತ್ನಿ ಮಲೈಕಾ ಅರೋರಾ ಮತ್ತು ಅವರ ಮಗ ಅರ್ಹಾನ್ ಖಾನ್ ಹಾಜರಿದ್ದರು. ನಟಿ ಮಲೈಕಾ ಅರೋರಾ ತಮ್ಮ ಮಾಜಿ ಪತಿಯ ಮದುವೆಗೆ ಕಪ್ಪು ಸೂಟ್‌ನಲ್ಲಿ ಸಕತ್ ಮುದ್ದಾಗಿ ಅಲಂಕಾರ ಮಾಡಿಕೊಂಡು ಬಂದಿದ್ದರು. ಇಬ್ಬರು 19 ವರ್ಷಗಳ ದಾಂಪತ್ಯಕ್ಕೆ ವಿಚ್ಛೇಧನಸ ಬ್ರೇಕ್ ಹಾಕಿದ್ದರು.

ಮದುವೆಯಲ್ಲಿ ಅರ್ಬಾಜ್ ಅವರ ಪೋಷಕರು ಸಲೀಂ ಖಾನ್ ಮತ್ತು ಸಲ್ಮಾ ಖಾನ್, ಹೆಲೆನ್, ಸಹೋದರರಾದ ಸಲ್ಮಾನ್ ಖಾನ್, ಸೊಹೈಲ್ ಖಾನ್ ಇದ್ದರು. ನಿರ್ವಾನ್ ಮತ್ತು ಯೋಹಾನ್ ಮತ್ತು ಸಹೋದರಿ ಅಲ್ವಿರಾ ಖಾನ್ ಸೇರಿ ಎಲ್ಲರೂ ಮದುವೆಗೆ ಮುನ್ನ ಅರ್ಪಿತಾ ಖಾನ್ ನಿವಾಸವನ್ನು ತಲುಪಿದರು.
ರವೀನಾ ಟಂಡನ್ ಮತ್ತು ಮಗಳು ರಾಶಾ ಥಡಾನಿ, ರಿದ್ಧಿಮಾ ಪಂಡಿತ್, ರಿತೇಶ್ ದೇಶ್‌ಮುಖ್ ಮತ್ತು ಪತ್ನಿ ಜೆನಿಲಿಯಾ ದೇಶಮುಖ್ ಸಹ ನಿಖಾದಲ್ಲಿ ಭಾಗಯಾಗಿದ್ದರು. ಸಮಾರಂಭದಲ್ಲಿ ಹರ್ಷದೀಪ್ ಕೌರ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು .
ಅರ್ಬಾಜ್ ಖಾನ್ ಮತ್ತು ಶುರಾ ಖಾನ್ ಅವರ ಪ್ರೇಮಕಥೆ
ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅವರ ಇತ್ತೀಚಿನ ಚಿತ್ರ ಪಾಟ್ನಾ ಶುಕ್ಲಾದಲ್ಲಿ ಕೆಲಸ ಮಾಡುವಾಗ ಅರ್ಬಾಜ್ ಖಾನ್ ಮತ್ತು ಶುರಾ ಖಾನ್ ನಡುವೆ ಪ್ರೇಮಾಂಖುರವಾಗಿದೆ ಎಂದು ಹೇಳಲಾಗುತ್ತಿದೆ. ಅರ್ಬಾಜ್ ಅವರ ಮದುವೆಗೆ ಅಭಿನಂದಿಸಿದವರಲ್ಲಿ ರವೀನಾ ಟಂಡನ್ ಮೊದಲಿಗರು. 'ಪಾಟ್ನಾ ಶುಕ್ಲಾ' ಸೆಟ್‌ಗಳಲ್ಲಿ ಅರ್ಬಾಜ್ ಅವರೊಂದಿಗೆ ನೃತ್ಯ ಮಾಡುವ ವೀಡಿಯೊವನ್ನು ಅವರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಶುರಾ ಖಾನ್ ಕೂಡ ಇದ್ದಾರೆ.
ಅರ್ಬಾಜ್ ಖಾನ್ ಈ ಹಿಂದೆ ಮಲೈಕಾ ಅರೋರಾ ಅವರನ್ನು ಮದುವೆಯಾಗಿದ್ದರು. ಅವರು 2016 ರಲ್ಲಿ ಬೇರ್ಪಟ್ಟರು ಮತ್ತು 2017 ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದರು. ಈ ಜೋಡಿಗೆ ಅರ್ಹಾನ್ ಖಾನ್ ಎಂಬ ಮಗನಿದ್ದಾನೆ. ಅರ್ಬಾಜ್ ಜಾರ್ಜಿಯಾ ಆಂಡ್ರಿಯಾನಿ ಅವರೊಂದಿಗೆ ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ನಟಿ ಮಲೈಕಾ ಅರೋರಾ ಅರ್ಜುನ್ ಕಪೂರ್ ಜೊತೆಗೆ ಸಹಜೀವನ ನಡೆಸುತ್ತಿದ್ದಾರೆ.


Click it and Unblock the Notifications










