»   » ಸಲ್ಮಾನ್ ಪರ ವಕಾಲತ್ತು ವಹಿಸಿದ ಸಹೋದರ ಅರ್ಬಾಜ್ ಖಾನ್

ಸಲ್ಮಾನ್ ಪರ ವಕಾಲತ್ತು ವಹಿಸಿದ ಸಹೋದರ ಅರ್ಬಾಜ್ ಖಾನ್

Posted By: Sonu Gowda
Subscribe to Filmibeat Kannada

ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಅವರು ತಮ್ಮ 'ಸುಲ್ತಾನ್' ಚಿತ್ರದ ಕುಸ್ತಿ ದೃಶ್ಯದ ಶೂಟಿಂಗ್ ಬಗ್ಗೆ ವಿಭಿನ್ನವಾಗಿ ಹೇಳಿಕೆ ಕೊಟ್ಟು ವ್ಯಾಪಕ ಟೀಕೆಗೆ ಗುರಿಯಾದ ವಿಚಾರ ಎಲ್ಲಾ ಕಡೆ ಟ್ರೆಂಡಿಂಗ್ ಆಗಿದೆ.

ಈ ಬಗ್ಗೆ ನಿನ್ನೆ ತಾನೆ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ತಮ್ಮ ಮಗನ ಪರವಾಗಿ ಎಲ್ಲರ ಮುಂದೆ ಬಹಿರಂಗವಾಗಿ ಟ್ವಿಟ್ಟರ್ ನಲ್ಲಿ ಕ್ಷಮೆ ಯಾಚಿಸಿದ್ದರು. ಇದೀಗ ಸಲ್ಮಾನ್ ಅವರ ಸಹೋದರ ನಟ ಅರ್ಬಾಜ್ ಖಾನ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.[ಮಗನ ಪರವಾಗಿ ಕ್ಷಮೆ ಯಾಚಿಸಿದ ಸಲ್ಮಾನ್ ತಂದೆ ಸಲೀಂ]

Actor Arbaaz Khan Gives Clarification On Salman's 'Raped Woman' Comment

"ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಬೇಡ. ಶೂಟಿಂಗ್ ಸಂದರ್ಭದಲ್ಲಿ ದುಡಿದು ದುಡಿದು ವಿಪರೀತ ದಣಿವಾಗುತ್ತಿತ್ತು ಎಂದು ಹೇಳಲು ಹೋದ ಸಲ್ಮಾನ್ ತಪ್ಪಾಗಿ ಹೇಳಿದ್ದಾರೆ. ಆದರೆ ಅವರಿಗೆ ಮಹಿಳೆಯರ ಬಗ್ಗೆ ಅನ್ಯಥಾ ಭಾವನೆ ಇರಲಿಲ್ಲ. ಆದರೂ ಅವರು ಆ ತರ ಹೇಳಿಕೆ ಕೊಟ್ಟಿದ್ದು ಖಂಡನೀಯ. ಆದ್ದರಿಂದ ಅವರು ಹೆಣ್ಣುಮಕ್ಕಳಲ್ಲಿ ಕ್ಷಮೆ ಯಾಚಿಸಬೇಕು" ಎಂದು ಅರ್ಬಾಜ್ ಖಾನ್ ತಿಳಿಸಿದ್ದಾರೆ.['ರೇಪ್ ಆದ ಮಹಿಳೆ ಪರಿಸ್ಥಿತಿ ನನ್ನದಾಗಿತ್ತು': ಸಲ್ಲು ವಿವಾದಾತ್ಮಕ ಹೇಳಿಕೆ]

Actor Arbaaz Khan Gives Clarification On Salman's 'Raped Woman' Comment

"ನಾವು ಏನು ಹೇಳಲು ಉದ್ದೇಶಿಸಿದ್ದೆವು ಎಂಬುದರತ್ತ ಮೊದಲು ಗಮನ ಹರಿಸಬೇಕು. ನಾನೇನಾದ್ರೂ ಒಂದೊಮ್ಮೆ 'ಕತ್ತೆ ದುಡಿದ ಹಾಗೆ' ಅಂತ ಕತ್ತೆಗೆ ಹೋಲಿಸಿ ಹೇಳಿದಲ್ಲಿ ಆವಾಗ ಪ್ರಾಣಿದಯಾ ಸಂಘದವರು ಸಿಟ್ಟಿಗೇಳಬಹುದು. ಹಾಗಂತ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಗಣಿಸಿದರೆ, ಎಲ್ಲವೂ ತಪ್ಪಾಗಿಯೇ ಕಾಣುತ್ತದೆ". ಎಂದು ನಟ ಅರ್ಬಾಜ್ ಖಾನ್ ಅವರು 'ಜೀನಾ ಇಸಿ ಕಾ ನಾಮ್ ಹೈ' ಎಂಬ ಚಿತ್ರದ ಲೋಗೋ ಲಾಂಚ್ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ಸನ್ನಿ ಜೊತೆ ಸಲ್ಮಾನ್ ಸೋದರ ಅರ್ಬಾಜ್ ಖಾನ್ ರೋಮ್ಯಾನ್ಸ್]

Actor Arbaaz Khan Gives Clarification On Salman's 'Raped Woman' Comment

'ಈಗಾಗಲೇ ಸಲ್ಮಾನ್ ಅವರಿಗೆ ತಮ್ಮ ತಪ್ಪಿನ ಅರಿವಾಗಿರುತ್ತದೆ ಆದ್ದರಿಂದ ಅವರು ಖಂಡಿತ ಕ್ಷಮೆ ಕೇಳುತ್ತಾರೆ. ಜೊತೆಗೆ ಅವರು ನೀಡಿದ ಹೇಳಿಕೆಗೆ ಸ್ಪಷ್ಟನೆ ನೀಡುತ್ತಾರೆ' ಎಂದು ಅರ್ಬಾಜ್ ಖಾನ್ ಸಹೋದರನ ಪರವಾಗಿ ವಕಾಲತ್ತು ವಹಿಸಿದ್ದಾರೆ.

Actor Arbaaz Khan Gives Clarification On Salman's 'Raped Woman' Comment

'ಸುಲ್ತಾನ್' ಚಿತ್ರದ ಶೂಟಿಂಗ್ ಮುಗಿಸಿದ ನಂತರ ನನಗೆ ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಪರಿಸ್ಥಿತಿ ಹೇಗಾಗುತ್ತೋ, ಅದೇ ಅನುಭವ ನನಗೂ ಆಗುತ್ತಿತ್ತು' ಎಂದು ಸಲ್ಮಾನ್ ಖಾನ್ ಅವರು ನೀಡಿದ ಹೇಳಿಕೆ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಹುಟ್ಟು ಹಾಕಿದೆ.

English summary
After Salman Khan's dad, brother Arbaaz Khan talks about Salman Khan's controversy and says that he hopes his superstar brother Salman Khan gives a clarification on his 'raped woman' statement due to his massive fan following.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada