ಎನ್‌ಸಿಬಿ ಅಧಿಕಾರಿಗಳ ವಿಚಾರಣೆಗೆ ಹಾಜರಾದ ನಟ ಅರ್ಜುನ್ ರಾಂಪಾಲ್

ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೆ ಬರುವಂತೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್‌ಗೆ ಎನ್‌ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಸಮನ್ಸ್ ನೀಡಿದ್ದ ಹಿನ್ನೆಲೆ ಶುಕ್ರವಾರ ಬೆಳಗ್ಗೆ ಮುಂಬೈನ ಎನ್‌ಸಿಬಿ ಕಚೇರಿಗೆ ಆಗಮಿಸಿದ್ದಾರೆ.

ಬೆಳಗ್ಗೆ 11 ಗಂಟೆಗೆ ಕಚೇರಿ ತಲುಪಿದ ನಟನಿಗೆ ಎನ್‌ಸಿಬಿ ಅಧಿಕಾರಿಗಳು ಡ್ರಿಲ್ ಮಾಡಿದ್ದಾರೆ. ಇದಕ್ಕೂ ಮುಂಚೆ ಬುಧವಾರ ಮತ್ತು ಗುರುವಾರ ಎರಡು ದಿನ ಅರ್ಜುನ ರಾಂಪಾಲ್ ಅವರ ಗೆಳತಿ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಅವರನ್ನು ಎನ್‌ಸಿಬಿ ವಿಚಾರಣೆಗೆ ಒಳಪಡಿಸಿತ್ತು.

ಅಂದ್ಹಾಗೆ, ನವೆಂಬರ್ 9 ರಂದು ನಟ ಅರ್ಜುನ್ ರಾಂಪಾಲ್ ಅವರ ಅಂಧೇರಿ, ಖಾರ್ ಮತ್ತು ಬಾಂದ್ರಾದಲ್ಲಿನ ಕಚೇರಿ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕೆಲವು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Actor Arjun Rampal arrives at Narcotics Control Bureau

ಕಳೆದ ತಿಂಗಳು, ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಗೇಬ್ರಿಯೆಲ್ಲಾ ಸಹೋದರ ಅಗಿಸಿಲಾಸ್ ಡೆಮೆಟ್ರಿಯೇಡ್ಸ್ ಅವರನ್ನು ಎನ್‌ಸಿಬಿ ಬಂಧಿಸಿತ್ತು.

ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲಾ ಅವರ ಮನೆಯ ಮೇಲೂ ದಾಳಿ ನಡೆಸಿದ್ದ ಎನ್‌ಸಿಬಿ, ಫಿರೋಜ್ ಪತ್ನಿ ಶಬಾನಾ ಸಯೀದ್ ಅವರನ್ನು ಬಂಧಿಸಿದ್ದರು. ನಂತರ ನವೆಂಬರ್ 10 ರಂದು ಆಕೆಗೆ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ.

Recommended Video

ಪ್ರಿಯಾಂಕಾ ಉಪೇಂದ್ರ ಕಯ್ಯಲ್ಲಿ ಲಾಂಗ್ | Filmibeat Kannada

More from Filmibeat

English summary
Actor Arjun Rampal arrives at Narcotics Control Bureau. NCB had conducted a raid at his premises on November 9.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X