ಬಾಲಿವುಡ್ ಖ್ಯಾತ ನಟ ಆಸಿಫ್ ಬಾಸ್ರಾ ಆತ್ಮಹತ್ಯೆಗೆ ಶರಣು
ಬಾಲಿವುಡ್ ಖ್ಯಾತ ನಟ ಆಸಿಫ್ ಬಾಸ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುವಾರ ಹಿಮಾಚಲ ಪ್ರದೇಶದ ಕಾಂಗ್ರಾ ಜೆಲ್ಲೆಯ ಧರ್ಮಶಾಲಾದ ಖಾಸಗಿ ಕಾಂಪ್ಲೆಕ್ಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ನಟ ಆಸಿಫ್ ಮೃತ ದೇಹ ಪತ್ತೆಯಾಗಿದೆ.
ಆಸಿಫ್ ಈ ನಿರ್ಧಾರಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ಮಾಡುತ್ತಿದ್ದಾರೆ.
ನಟ ಆಸಿಫ್ ಬಾಸ್ರಾ ಕಳೆದ 5 ವರ್ಷಗಳಿಂದ ಹಿಮಾಚಲ ಪ್ರದೇಶದ ಮೆಕ್ಲಿಯೋಡ್ ಗಂಜ್ ನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಆಸಿಫ್ ಜೊತೆ ವಿದೇಶಿ ಗೆಳತಿ ಸಹ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.

Recommended Video
ಆಸಿಫ್ ಬಾಸ್ರಾ ಹಿಂದಿ ಸಿನಿಮಾ ಸೇರಿದಂತೆ ವೆಬ್ ಸೀರಿಸ್ ಮತ್ತು ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ. ಬ್ಲಾಕ್ ಫ್ರೈಡೇ, ಜಬ್ ವಿ ಮೆಟ್, ಕ್ರಿಶ್-3, ಏಕ್ ವಿಲನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಆಸಿಫ್ ನಟಿಸಿದ್ದಾರೆ.


Click it and Unblock the Notifications











