For Quick Alerts
  ALLOW NOTIFICATIONS  
  For Daily Alerts

  'ಡಾಕ್ಟರ್' ಆದ ಬಾಲಿವುಡ್ ನ ಖ್ಯಾತ ನಟ ಆಯುಷ್ಮಾನ್ ಖುರಾನ

  |

  ಬಾಲಿವುಡ್ ನ ಯಶಸ್ವಿ ನಟ ಆಯುಷ್ಮಾನ್ ಖುರಾನ ಇದೀಗ ಡಾಕ್ಟರ್ ಆಗಿದ್ದಾರೆ. ಅಂದಹಾಗೆ ಸಿನಿಮಾ ಬಿಟ್ಟು ವೈದ್ಯಕೀಯ ವೃತ್ತಿ ಆರಂಭಿಸಿದ್ರಾ ಅಂತ ಅಚ್ಚರಿ ಪಡಬೇಡಿ, ಆಯುಷ್ಮಾನ್ ಡಾಕ್ಟರ್ ಆಗಿದ್ದು ಸಿನಿಮಾದಲ್ಲಿ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ, ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಆಯುಷ್ಮಾನ್ ಬಾಲಿವುಡ್ ನ ಸ್ಟಾರ್ ನಟರ ಸಾಲಿನಲ್ಲಿದ್ದಾರೆ.

  ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಆಯುಷ್ಮಾನ್ ಇದೀಗ ಡಾಕ್ಟರ್ ಆಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು, ಆಯುಷ್ಮಾನ್ ಹೊಸ ಸಿನಿಮಾಗೆ 'ಡಾಕ್ಟರ್ ಜಿ' ಎಂದು ಟೈಟಲ್ ಇಡಲಾಗಿದೆ. ಡಾಕ್ಟರ್ ಜಿ ಕಾಮಿಡಿ ಸಿನಿಮಾವಾಗಿದೆ. ಈ ಬಗ್ಗೆ ಮಾತನಾಡಿರುವ ಆಯುಷ್ಮಾನ್, ಇದೊಂದು ಫ್ರೆಶ್ ಕಥೆಯಾಗಿದ್ದು, ತುಂಬಾ ಇಷ್ಟವಾಗಿದೆ. ಮೊದಲ ಬಾರಿಗೆ ಡಾಕ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದೀನಿ. ಈ ಸಿನಿಮಾದಲ್ಲಿ ನಟಿಸಲು ಸಖತ್ ಎಕ್ಸಾಯಿಟ್ ಆಗಿದ್ದೀನಿ ಎಂದು ಹೇಳಿದ್ದಾರೆ.

  2020: ಅತಿ ಹೆಚ್ಚು ಹಣ ಗಳಿಸಿದ ವಿಶ್ವದ 100 ಸೆಲೆಬ್ರಿಟಿಗಳಲ್ಲಿ ಒಬ್ಬ ಭಾರತೀಯ!

  ವಿಶೇಷ ಎಂದರೆ ಚಿತ್ರಕ್ಕೆ ಅನುರಾಗ್ ಕಶ್ಯಪ್ ಸಹೋದರಿ ಅನುಭೂತಿ ಕಶ್ಯಪ್ ನಿರ್ದೇಶನ ಮಾಡುತ್ತಿದ್ದಾರೆ. ಹಲವು ಕಿರು ಸಿನಿಮಾಗಳನ್ನು ಮಾಡಿರುವ ಅನುಭೂತಿ ಕಶ್ಯಪ್ ಡಾಕ್ಟರ್ ಜಿ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕಿಯಾಗಿ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.

  ರೈತರಿಗಾಗಿ ತ್ಯಾಗ ಮಾಡಿದ ಮೋಹಕ ತಾರೆ Ramya | Filmibeat Kannada

  ಜಂಗ್ಲಿ ಪಿಕ್ಟರ್ಸ್ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ಈ ಹಿಂದೆ ಬರೇಲಿ ಕೀ ಬರ್ಫಿ, ಬದಾಯಿ ಹೋ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಈ ಸಂಸ್ಥೆ ಮತ್ತ ಆಯುಷ್ಮಾನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಸಿನಿಮಾ ಅನೌನ್ಸ್ ಮಾಡಿರುವ ಚಿತ್ರತಂಡ ಉಳಿದ ಪಾತ್ರ ವರ್ಗವನ್ನು ಸದ್ಯದಲ್ಲೇ ಬಹಿರಂಗ ಪಡಿಸಲಿದೆ. ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆ.

  English summary
  Bollywood Actor Ayushmann Khurrana announces new movie Doctor G. This movie is directed by Anubhuti Bhushan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X