ಡ್ರಗ್ಸ್ ವಿರುದ್ಧ ಭಾಷಣ ಮಾಡಿದ ನಟ, ಸಂಸದ, ಸ್ವತಃ ಗಾಂಜಾ ಪ್ರಿಯನಂತೆ!

ಬಾಲಿವುಡ್‌ನಲ್ಲಿ ಈಗ ಡ್ರಗ್ಸ್‌ನದ್ದೇ ಮಾತು. ಸುಶಾಂತ್ ಸಾವಿನ ಚರ್ಚೆ ಮೂಲೆಗೆ ಸರಿದು ಬಿಟ್ಟಿದೆ. ಪ್ರಸ್ತುತ ಮುಖ್ಯ ವಿಷಯ ಡ್ರಗ್ಸ್ ಮತ್ತು ಕಂಗನಾ ಎರಡೇ.

ಬಾಲಿವುಡ್‌ನಲ್ಲಿ ಡ್ರಗ್ಸ್‌ ಅವ್ಯಾಹತ ಎಂದು ಹಲವರು ಆರೋಪಿಸಿದ್ದಾರೆ. ಕಂಗನಾ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬಾಲಿವುಡ್‌ ಎಂಬುದು ಕೊಳಚೆ ಮೋರಿ, ಅದನ್ನು ಸ್ವಚ್ಛ ಮಾಡಬೇಕಿದೆ ಎಂದಿದ್ದಾರೆ.

ನಟ ಕಮ್ ಬಿಜೆಪಿ ಸಂಸದರಾಗಿರುವ ರವಿ ಕಿಶನ್ ಸಹ ಬಾಲಿವುಡ್‌ ವಿರುದ್ಧ ಲೋಕಸಭೆಯಲ್ಲಿ ಹರಿಹಾಯ್ದಿದ್ದಾರೆ. ಬಾಲಿವುಡ್‌ ಡ್ರಗ್ಸ್ ತಾಣವಾಗಿದೆ ಎಂಬಿತ್ಯಾದಿ ಮಾತುಗಳನ್ನು ಅವರು ಆಡಿದ್ದಾರೆ. ಅವರ ಭಾಷಣದ ಬಗ್ಗೆ ಜಯಾ ಬಚ್ಚನ್ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಸ್ವತಃ ರವಿ ಕಿಶನ್ ಗಾಂಜಾ ವ್ಯಸನಿಯಂತೆ!

ರವಿ ಕಿಶನ್ ಗಾಂಜಾ ವ್ಯಸನಿ ಎಂದ ಅನುರಾಗ್

ರವಿ ಕಿಶನ್ ಗಾಂಜಾ ವ್ಯಸನಿ ಎಂದ ಅನುರಾಗ್

ಹೌದು, ನಟ, ಸಂಸದ ರವಿ ಕಿಶನ್ ಗಾಂಜಾ ವ್ಯಸನಿಯಂತೆ. ಹಲವು ಬಾರಿ ಗಾಂಜಾ ಸೇವನೆ ಮಾಡಿದ್ದಾರಂತೆ. ಹೀಗೆಂದು ಹೇಳಿರುವುದು ರವಿ ಕಿಶನ್ ಅವರನ್ನು ಹತ್ತಿರದಿಂದ ಬಲ್ಲ ನಿರ್ದೇಶಕ ಅನುರಾಗ್ ಕಶ್ಯಪ್.

ರವಿ ಗಾಂಜಾ ಸೇದುವುದು ಎಲ್ಲರಿಗೂ ಗೊತ್ತು: ಅನುರಾಗ್

ರವಿ ಗಾಂಜಾ ಸೇದುವುದು ಎಲ್ಲರಿಗೂ ಗೊತ್ತು: ಅನುರಾಗ್

'ನನ್ನ ಕೊನೆಯ ಸಿನಿಮಾ ಮುಕ್ಕೇಬಾಜ್‌ ನಲ್ಲಿ ರವಿ ಕಿಶನ್ ನಟಿಸಿದ್ದರು. ಅವರು ತಮ್ಮ ಜೀವನದಲ್ಲಿ ಅನೇಕ ವರ್ಷಗಳು ಗಾಂಜಾ ಸೇದಿದ್ದಾರೆ. ಅದು ಅವರನ್ನು ಕಂಡಿರುವ ಅನೇಕರಿಗೆ ಗೊತ್ತು, ಇದು ರಹಸ್ಯವೂ ಅಲ್ಲ, ಬಹಿರಂಗವಾಗಿಯೇ ಅವರು ಗಾಂಜಾ ಸೇದಿದ್ದಾರೆ' ಎಂದಿದ್ದಾರೆ ಅನುರಾಗ್ ಕಶ್ಯಪ್.

'ತಮ್ಮನ್ನು ತಾವು ಸತ್ಯವಂತ ಎಂದುಕೊಂಡುಬಿಟ್ಟಿದ್ದಾರೆ'

'ತಮ್ಮನ್ನು ತಾವು ಸತ್ಯವಂತ ಎಂದುಕೊಂಡುಬಿಟ್ಟಿದ್ದಾರೆ'

ಅವರು ಈಗ ಸಂಸದ ಹಾಗಾಗಿ ಈಗ ಗಾಂಜಾ ಸೇದುವುದು ಬಿಟ್ಟಿರಬಹುದೇನೋ ಆದರೆ ಅವರು ಗಾಂಜಾ ಸೇದುತ್ತಿದ್ದುದು ಅಪ್ಪಟ ಸತ್ಯ. ಈಗ ಸತ್ಯವಂತರಂತೆ ಫೋಸು ಕೊಡುತ್ತಿದ್ದಾರೆ, ರವಿ ಕಿಶನ್, ಅವರನ್ನು ಅವರು ಸತ್ಯವಂತ ಎಂದುಕೊಂಡು, ಉಳಿದವರೆಲ್ಲಾ ಕೆಟ್ಟವರು ಎಂಬ ಭಾವನೆಯನ್ನು ತಳೆದು ಮಾತನಾಡುತ್ತಾರೆ. ಇದು ನನಗೆ ವೈಯಕ್ತಿಕವಾಗಿ ಇಷ್ಟವಾಗುವುದಿಲ್ಲ ಎಂದಿದ್ದಾರೆ ಕಶ್ಯಪ್.

Recommended Video

ನಾನು ರಕ್ಷಿತ್ ಶೆಟ್ಟಿ ಇಬ್ರು ಹೀಗೆ ಆಗುತ್ತೆ ಅಂತ ಅಂದುಕೊಂಡಿರ್ಲಿಲ್ಲ | Filmibeat Kannada
ರವಿಕಿಶನ್ ಕೆಟ್ಟ ವ್ಯಕ್ತಿಯಲ್ಲ: ಅನುರಾಗ್

ರವಿಕಿಶನ್ ಕೆಟ್ಟ ವ್ಯಕ್ತಿಯಲ್ಲ: ಅನುರಾಗ್

'ಹಾಗೆಂದು ನಾನು ರವಿ ಕಿಶನ್ ಕೆಟ್ಟ ವ್ಯಕ್ತಿ ಎಂದು ಹೇಳುತ್ತಿಲ್ಲ. ನಾನು ಸ್ವತಃ ಗಾಂಜಾ ವನ್ನು ಡ್ರಗ್ಸ್‌ ವಿಭಾಗಕ್ಕೆ ಸೇರಿಸುವುದಿಲ್ಲ. ರವಿ ಕಿಶನ್ ಗಾಂಜಾ ಸೇದಿದ್ದಾಗ ಸಹ ಮಾಮೂಲಿನಂತೆಯೇ ಇರುತ್ತಿದ್ದ, ಕೆಲಸ ಮಾಡುತ್ತಿದ್ದ, ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ' ಎಂದಿದ್ದಾರೆ ಅನುರಾಗ್ ಕಶ್ಯಪ್.

More from Filmibeat

English summary
Director Anurag Kashyap said actor, BJP MP Ravi Kishan used to smoke weed everyday. But he is now talking against drugs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X