ಬಾಲಿವುಡ್‌ ಖ್ಯಾತ ನಟ ಚಂದ್ರಶೇಖರ್ ವೈದ್ಯ ನಿಧನ

ಹಿಂದಿ ಚಿತ್ರರಂಗದ ಖ್ಯಾತ ಕಲಾವಿದ, ಸಾಮಾಜಿಕ ಹೋರಾಟಗಾರ ಚಂದ್ರಶೇಖರ್ ವೈದ್ಯ ಬುಧವಾರ (ಜೂನ್ 16) ಬೆಳಗ್ಗೆ 7 ಗಂಟೆಗೆ ಮುಂಬೈನಲ್ಲಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

98 ವರ್ಷದ ಚಂದ್ರಶೇಖರ್ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3 ಗಂಟೆಗೆ ಮುಂಬೈನ ವಿಲೇ ಪಾರ್ಲೆ ಶವಾಗಾರದಲ್ಲಿ ನಡೆಯಲಿದೆ ಎಂದು ಪುತ್ರ ಅಶೋಕ್ ಚಂದ್ರಶೇಖರ್ ಮಾಹಿತಿ ನೀಡಿದರು. ಅಂದ್ಹಾಗೆ, ಹಿರಿಯ ನಟ ಚಂದ್ರಶೇಕರ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದರು.

ಚಂದ್ರಶೇಖರ್ ವೈದ್ಯ 1950 ರ ದಶಕದ ಜನಪ್ರಿಯ ನಟರಾಗಿದ್ದರು. ಕಾಳಿ ಟೋಪಿ ಲಾಲ್ ರುಮಾಲ್, ಬಾರದಾರಿ, ಸ್ಟ್ರೀಟ್ ಸಿಂಗರ್ ಮತ್ತು ರುಸ್ತೋಮ್ ಇ ಬಾಗ್ದಾದ್ ಅಂತಹ ಚಿತ್ರಗಳಲ್ಲಿ ನಟಿಸಿದ್ದಾರೆ.

Veteran actor Chandrashekhar Vaidya Passes Away in Mumbai

1954ರಲ್ಲಿ ವಿ ಶಾಂತಾರಾಮ್ ನಿರ್ದೇಶನದ 'ಔರತ್ ಥೇರಿ ಯೆಹಿ ಕಹಾನಿ' ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು. ಬಳಿಕ ಚಿತ್ರರಂಗದಲ್ಲಿ ಸಕ್ರಿಯರಾದ ಚಂದ್ರಶೇಖರ್ ಸುಮಾರು 112ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ರಾಮಾನಂದ್ ಸಾಗರ್ ಅವರ ರಾಮಾಯಣ ಟಿವಿ ಸರಣಿಯಲ್ಲೂ ಚಂದ್ರ ಭಾಗವಾಗಿದ್ದರು.

ಇನ್ನು ಚಂದ್ರಶೇಖರ್ ವೈದ್ಯರ ಅವರ ಮಗಳ ಮಗ ಶಕ್ತಿ ಆರೋರ ಸಹ ಚಿತ್ರರಂಗದಲ್ಲಿದ್ದಾರೆ. ಅಜ್ಜನ ಸಾವಿಗೆ ಸಂತಾಪ ಸೂಚಿಸಿರುವ ಶಕ್ತಿ ಆರೋರ ಹಳೆಯ ಫೋಟೋ ಶೇರ್ ಮಾಡಿ ನೆನಪು ಮೆಲುಕು ಹಾಕಿದ್ದಾರೆ.

Recommended Video

Sanchari Vijay ಅದ್ಬುತ ನಟನೆಗೆ ಸಾಕ್ಷಿಯಾಯ್ತು ತಲೆದಂಡ ಚಿತ್ರದ ಟ್ರೈಲರ್ | Filmibeat Kannada

More from Filmibeat

English summary
Bollywood Veteran actor Chandrashekhar Vaidya Passes Away in Mumbai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X