Dalip Tahil: ಹಿಟ್ ಅನ್ ರನ್ ಪ್ರಕರಣದಲ್ಲಿ ಫ್ಯಾಮಿಲಿ ಮ್ಯಾನ್ ನಟ ದಲೀಪ್ ತಾಹಿಲ್‌ಗೆ ಎರಡು ತಿಂಗಳ ಜೈಲು

ಬಾಲಿವುಡ್ ನಟ ದಲೀಪ್ ತಾಹಿಲ್ ಅವರು 2018 ರಲ್ಲಿ ಕುಡಿದು ವಾಹನ ಚಲಾಯಿಸಿದ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಸಿಕ್ಕಿದೆ. ವೈದ್ಯಕೀಯ ತಜ್ಞರ ಸಾಕ್ಷ್ಯದ ನಂತರ ಐದು ವರ್ಷಗಳ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅಂತಿಮವಾಗಿ ತೀರ್ಪು ನೀಡಲಾಗಿದೆ. ಇದರ ಪರಿಣಾಮವಾಗಿ ನಟನಿಗೆ 2 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

2018 ರ ಹಿಟ್ ಅಂಡ್ ರನ್ ಪ್ರಕರಣವೇನು?

ಟೈಮ್ಸ್ ಆಫ್ ಇಂಡಿಯಾದ ಇತ್ತೀಚಿನ ವರದಿಯಲ್ಲಿ, ಬಾಜಿಗರ್, ಫ್ಯಾಮಿಲಿ ಮ್ಯಾನ್ ನಟ ದಲೀಪ್ ತಾಹಿಲ್ 2018 ರ ಹಿಂದಿನ ಪ್ರಕರಣದಲ್ಲಿ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದೆ. ಪ್ರಕರಣದಲ್ಲಿ ಎರಡು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿ ಆಟೋರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದ ಆರೋಪದಲ್ಲಿ ನಟನನ್ನು ತಪ್ಪಿತಸ್ಥರೆಂದು ಗುರುತಿಸಲಾಗಿದೆ.

Actor Dalip Tahil sentenced to two months jail in drunk driving case

ವರದಿಯ ಪ್ರಕಾರ, ವೈದ್ಯಕೀಯ ತಜ್ಞರು ಒದಗಿಸಿದ ಪುರಾವೆಗಳಲ್ಲಿ ಅಪಘಾತ ಉಮಟಾದ ಸಮಯದಲ್ಲಿ ನಟ ದಲೀಪ್ ತಾಹಿಲ್ ಮಧ್ಯಪಾನ ಮಾಡಿದ್ದರು ಎಂಬುದನ್ನು ತಿಳಿಸಿದೆ. ತಜ್ಞರ ಸಾಕ್ಷಿಯಲ್ಲಿ ಆಲ್ಕೋಹಾಲ್ ವಾಸನೆ, ಅಸ್ಥಿರವಾದ ನಡಿಗೆ ಮತ್ತು ತೊದಲು ಮಾತುಗಳಿಂದ ಅವರು ಕಾಎಉ ಚಲಾಯಿಸುತ್ತಿದ್ದ ಸಮಯದಲ್ಲಿ ಮಧ್ಯಪಾನ ಮಾಡಿದ್ದರು ಎಂಬುದನ್ನು ತಿಳಿಸಿದೆ.

ವೈದ್ಯರ ಸಾಕ್ಷ್ಯವನ್ನು ಅವಲಂಬಿಸಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನಟ ದಲಿಪ್ ತಾಹಿಲ್‌ಗೆ ಶಿಕ್ಷೆ ವಿಧಿಸಿದೆ. 2018 ರಲ್ಲಿ ಬಂಧನದ ಸಮಯದಲ್ಲಿ, ನಟ ತನ್ನ ರಕ್ತದ ಮಾದರಿಗಳನ್ನು ಪೊಲೀಸರಿಗೆ ಆಲ್ಕೋಹಾಲ್ ಪರೀಕ್ಷೆಗೆ ನೀಡಲು ನಿರಾಕರಿಸಿದ್ದರು. ಅವರ ಕಾರು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಸಮಯದಲ್ಲಿ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದರು. ಘಟನೆ ನಂತರ ಅವರು ಪಲಾಯನ ಮಾಡಲು ಪ್ರಯತ್ನಿಸಿದ್ದರು. ಆದರೆ ಗಣೇಶ ವಿಸರ್ಜನಾ ಮೆರವಣಿಗೆಗಳಿಂದ ಉಂಟಾದ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಬಿದ್ದಿದ್ದರು. ಈ ವೇಳೆ ಅಲ್ಲಿದ್ದ ಪ್ರಯಾಣಿಕರು ನಟ ದಲೀಪ್ ತಾಹಿಲ್ ಅವರ ಕಾರನ್ನು ಹಿಡಿದಿದ್ದರು. ಬಳಿಕ ಪೊಲೀಸರು ಸಮನ್ಸ್ ನೀಡಿದ ನಂತರ ನಟನನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಪೊಲೀಸರು ಹೇಳಿದ್ದೇನು..?

"ಗಾಯಗೊಂಡ ಪ್ರಯಾಣಿಕರನ್ನು ಜೆನಿತಾ ಗಾಂಧಿ (21) ಮತ್ತು ಗೌರವ್ ಚುಗ್ (22) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಜೆನಿತಾ ಗಾಂಧಿ ಅವರ ಬೆನ್ನು ಮತ್ತು ಕುತ್ತಿಗೆಗೆ ತೀವ್ರವಾದ ಗಾಯಗಳಾಗಿವೆ. ಗಣೇಶೋತ್ಸವದ ಮೆರವಣಿಗೆಗಳಿಂದಾಗಿ ರಸ್ತೆಯಲ್ಲಿ ಜನಸಂದಣಿ ಇದ್ದ ಕಾರಣ ಕಾರು ಹೆಚ್ಚು ದೂರ ಹೋಗಲು ಸಾಧ್ಯವಾಗಲಿಲ್ಲ" ಎಂದು ಖಾರ್ ಪೊಲೀಸ್ ಅಧಿಕಾರಿಯೊಬ್ಬರು ಹಿಂದೂಗೆ ತಿಳಿಸಿದ್ದಾರೆ.

ನಟ ದಲೀಪ್ ತಾಹಿಲ್ ತನಗೆ ವಿಧಿಸಲಾಗಿರುವ ಶಿಕ್ಷೆಯ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಕಳೆದ ಕೆಲವು ತಿಂಗಳುಗಳಿಂದ ನಟ ತಮ್ಮ ಹಾಸ್ಯಮಯ ವೀಡಿಯೊಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯರಾಗಿದ್ದಾರೆ.

ನಟ ದಲೀಪ್ ತಾಹಿಲ್

ನಟ ದಲೀಪ್ ತಾಹಿಲ್ ಬಾಜಿಗರ್ (1993) ರಾಜಾ (1995) ಹಮ್ ಹೈ ರಾಹಿ ಪ್ಯಾರ್ ಕೆ (1993) ಕಯಾಮತ್ ಸೆ ಕಯಾಮತ್ ತಕ್ (1988), ಕಹೋ ನಾ ಪ್ಯಾರ್ ಹೈ (2000), ಅಜ್ನಬೀ (2001), ರಾಕ್ ಆನ್!! (2008), ರಾ.ಒನ್ (2011) ಭಾಗ್ ಮಿಲ್ಕಾ ಭಾಗ್ (2013) ಮತ್ತು ಮಿಷನ್ ಮಂಗಲ್ (2019) ಸೇರಿದಂತೆ 100 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ರಾಜ್‌ಕುಮಾರ್ ರಾವ್ ಮತ್ತು ಸನ್ಯಾ ಮಲ್ಹೋತ್ರಾ ಅವರೊಂದಿಗೆ ಹಿಟ್: ದಿ ಫಸ್ಟ್ ಕೇಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರು ಮೈಂಡ್ ದಿ ಮಲ್ಹೋತ್ರಾಸ್ ಸೀಸನ್ 2 ರ ಭಾಗವಾಗಿದ್ದಾರೆ.

More from Filmibeat

English summary
Actor Dalip Tahil sentenced to 2 months jail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X