For Quick Alerts
  ALLOW NOTIFICATIONS  
  For Daily Alerts

  ಉಸಿರಾಟದ ಸಮಸ್ಯೆ: ಆಸ್ಪತ್ರೆಗೆ ದಾಖಲಾದ ಹಿರಿಯ ನಟ ದಿಲೀಪ್ ಕುಮಾರ್

  |

  ಹಿಂದಿ ಸಿನಿಮಾದ ಹಿರಿಯ ನಟ ದಿಲೀಪ್ ಕುಮಾರ್ ಅನ್ನು ಮುಂಬೈನ ಹಿಂದೂಜಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  98 ವರ್ಷ ವಯಸ್ಸಿನ ದಿಲೀಪ್ ಕುಮಾರ್‌ ಕೆಲವು ದಿನಗಳಿಂದಲೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಸಮಸ್ಯೆ ತೀವ್ರವಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲಾದ ವಿಷಯವನ್ನು ಅವರ ವ್ಯವಸ್ಥಾಪಕ, ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ದಿಲೀಪ್ ಕುಮಾರ್ ಅವರನ್ನು ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಕೆಲವು ದಿನದಿಂದಲೂ ಉಸಿರಾಟದ ಸಮಸ್ಯೆ ಅನುಭವಿಸುತ್ತಿದ್ದಾರೆ. ದಿಲೀಪ್ ಕುಮಾರ್ ಅನ್ನು ವೈದ್ಯ ನಿತಿನ್ ಗೋಖಲೆ ನೇತೃತ್ವದ ವೈದ್ಯ ತಂಡ ಪರೀಕ್ಷಿಸುತ್ತಿದೆ' ಎಂದಿದ್ದಾರೆ.

  ಪತ್ನಿ ಸಾಯಿರಾ ಬಾನು ಜೊತೆಗೆ ದಿಲೀಪ್ ಕುಮಾರ್ ವಾಸಿಸುತ್ತಿದ್ದು ಲಾಕ್‌ಡೌನ್ ಆದಾಗಿನಿಂದಲೂ ತಮ್ಮನ್ನು ತಾವು ಐಸೋಲೇಷನ್‌ಗೆ ಒಳಪಡಿಸಿಕೊಂಡಿದ್ದರು. ಆದರೆ ಕೆಲವು ವಯೋಸಹಜ ಆರೋಗ್ಯ ಸಮಸ್ಯೆಗಳು ದಿಲೀಪ್ ಕುಮಾರ್ ಅವರನ್ನು ಕಾಡುತ್ತಲೇ ಇದ್ದವು.

  ದಿಲೀಪ್ ಕುಮಾರ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಪತ್ನಿ ಸಾಯಿರಾ ಬಾನು, 'ಎಲ್ಲವೂ ಸರಿಯಾಗಿದೆ. ದೇವರ ದಯೆ ಹಾಗೂ ಅಭಿಮಾನಿಗಳ ಹಾರೈಕೆಯಿಂದ ಅವರಿಗೆ ಏನೂ ಆಗುವುದಿಲ್ಲ' ಎಂದಿದ್ದಾರೆ.

  ದಿಲೀಪ್ ಕುಮಾರ್ ಅವರ ಸಹೋದರರಾದ ಎಶಾನ್ ಖಾನ್ ಹಾಗೂ ಅಸ್ಲಂ ಖಾನ್ ಅವರುಗಳು ಕಳೆದ ವರ್ಷ ಕೋವಿಡ್‌ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಇಬ್ಬರೂ ಸಹ ಮುಂಬೈನಲ್ಲಿಯೇ ವಾಸಿಸುತ್ತಿದ್ದರು.

  ಚಿರು ಸಾವಿಗೆ ಒಂದು ವರ್ಷ, ಅಣ್ಣನಿಗೆ ಪತ್ರ ಬರೆದು ನೋವನ್ನು ಹಂಚಿಕೊಂಡ ಧ್ರುವ | Filmibeat Kannada

  'ಮುಘಲ್-ಎ-ಅಜಮ್', 'ರಾಮ್ ಔರ್ ಶ್ಯಾಮ್', 'ಕೋಹಿನೂರ್' ಸೇರಿದಂತೆ ನೂರಾರು ಸಿನಿಮಾಗಳಲ್ಲಿ ನಟಿಸಿರುವ ದಿಲೀಪ್ ಕುಮಾರ್ 1998 ರಿಂದ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ದಿಲೀಪ್ ಕುಮಾರ್ ನಿಜವಾದ ಹೆಸರು ಮೊಹಮ್ಮದ್ ಯೂಸಫ್ ಖಾನ್.

  English summary
  Senior actor of Hindi movie industry Dilip Kumar today admitted to Hinduja hospital Mumbai. He is facing breathing problem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X