For Quick Alerts
  ALLOW NOTIFICATIONS  
  For Daily Alerts

  ದಿವಂಗತ ನಟ ದಿಲೀಪ್ ಕುಮಾರ್ ಆಸ್ತಿ ಮೌಲ್ಯ ಎಷ್ಟಿದೆ?

  |

  ಬಾಲಿವುಡ್ ಚಿತ್ರರಂಗದ ದಿಗ್ಗಜ ನಟ ದಿಲೀಪ್ ಕುಮಾರ್ ಸುಮಾರು ಐದು ದಶಕಗಳ ಕಾಲ ಬೆಳ್ಳಿತೆರೆಯಲ್ಲಿ ಮಿಂಚಿ ಮರೆಯಾದರು. ಸುಮಾರು 65ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಹಿಂದಿಯಲ್ಲಿ ಅತಿ ಹೆಚ್ಚು ಫಿಲಂ ಫೇರ್ ಪ್ರಶಸ್ತಿ ನಟ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

  ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ದಿಲೀಪ್ ಕುಮಾರ್ ಗುರುತಿಸಿಕೊಂಡಿದ್ದರು. ದಿಲೀಪ್ ಕುಮಾರ್, ಪೃಥ್ವಿರಾಜ್ ಕಪೂರ್, ಮಧುಬಾಲ ನಟಿಸಿ, 1960ರಲ್ಲಿ ತೆರೆಕಂಡಿದ್ದ ಮೊಘಲ್-ಎ-ಅಝಾಮ್ ಸಿನಿಮಾ ಅಂದಿನ ಸಮಯಕ್ಕೆ ಅತಿ ಹೆಚ್ಚು ಗಳಿಕೆ ಕಂಡಿತ್ತು. ಬಹುಶಃ ಇಂದಿನ ಲೆಕ್ಕಾಚಾರದಲ್ಲಿ ನೋಡಿದ್ರೆ ಈ ಸಿನಿಮಾ ಆಗಲೇ 1000 ಕೋಟಿ ಮಾಡಿತ್ತು ಎನ್ನುತ್ತಾರೆ ವಿಶ್ಲೇಷಕರು.

  ಪಾಕಿಸ್ತಾನದಲ್ಲಿರುವ ದಿಲೀಪ್ ಕುಮಾರ್ ಪೂರ್ವಜರ ಮನೆ ಈಗ ಏನಾಗಿದೆ?ಪಾಕಿಸ್ತಾನದಲ್ಲಿರುವ ದಿಲೀಪ್ ಕುಮಾರ್ ಪೂರ್ವಜರ ಮನೆ ಈಗ ಏನಾಗಿದೆ?

  ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದರು. ಮಹಾರಾಷ್ಟ್ರದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಹೀಗೆ, ಸಿನಿಮಾ ಮತ್ತು ರಾಜಕೀಯವಾಗಿ ಯಶಸ್ಸು ಕಂಡಿದ್ದ ದಿಲೀಪ್ ಕುಮಾರ್ ಒಟ್ಟು ಆಸ್ತಿ ಮೌಲ್ಯ ಎಷ್ಟು ಎನ್ನುವುದು ಕುತೂಹಲ ಮೂಡಿಸಿದೆ. ದಿಲೀಪ್ ಕುಮಾರ್ ಒಟ್ಟಾರೆ ಆಸ್ತಿ ಬಗ್ಗೆ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಹಾಗಾದ್ರೆ, 'ಟ್ರಾಜಿಡಿ ಕಿಂಗ್' ಆಸ್ತಿ ಎಷ್ಟಿದೆ? ಮುಂದೆ ಓದಿ...

  ಮಹಮ್ಮದ್ ಯೂಸುಫ್ ಖಾನ್ ಆಗಿದ್ದವರು ದಿಲೀಪ್ ಕುಮಾರ್ ಆಗಿ ಬದಲಾಗಿದ್ದೇಕೆ? ಮಹಮ್ಮದ್ ಯೂಸುಫ್ ಖಾನ್ ಆಗಿದ್ದವರು ದಿಲೀಪ್ ಕುಮಾರ್ ಆಗಿ ಬದಲಾಗಿದ್ದೇಕೆ?

  1 ಲಕ್ಷ ಸಂಭಾವನೆ ಪಡೆದ ಮೊದಲ ನಟ

  1 ಲಕ್ಷ ಸಂಭಾವನೆ ಪಡೆದ ಮೊದಲ ನಟ

  1950ರ ದಶಕದಲ್ಲಿ ಯಶಸ್ವಿ ನಟ ಎನಿಸಿಕೊಂಡಿದ್ದ ದಿಲೀಪ್ ಕುಮಾರ್ ಒಂದು ಸಿನಿಮಾ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರಂತೆ. ಭಾರತೀಯ ಚಿತ್ರ ಪ್ರಪಂಚದಲ್ಲಿ ಆಗಿನ ಸಮಯದಲ್ಲೇ ಒಂದು ಲಕ್ಷ ಸಂಭಾವನೆ ಪಡೆದ ಮೊದಲ ನಟ ಎಂಬ ಹೆಗ್ಗಳಿಕೆಯೂ ದಿಲೀಪ್‌ ಕುಮಾರ್‌ಗೆ ಸಲ್ಲುತ್ತದೆ ಎಂದು ಹೇಳಲಾಗುತ್ತದೆ.

  ದಿಲೀಪ್ ಕುಮಾರ್ ಆಸ್ತಿ ಎಷ್ಟಿದೆ?

  ದಿಲೀಪ್ ಕುಮಾರ್ ಆಸ್ತಿ ಎಷ್ಟಿದೆ?

  ಸೆಲೆಬ್ರಿಟಿ ನೆಟ್ ವರ್ತ್ ಪ್ರಕಾರ, ದಿವಂಗತ ನಟ ದಿಲೀಪ್ ಕುಮಾರ್ ಅವರ ನಿವ್ವಳ ಆಸ್ತಿ ಮೌಲ್ಯ $ 85 ಮಿಲಿಯನ್, ಅಂದ್ರೆ ಸುಮಾರು 627 ಕೋಟಿ ರೂ ಎಂದು ವರದಿಯಾಗಿದೆ.

  ಪಾಕಿಸ್ತಾನದ ಪೂರ್ವಜರ ಮನೆ ಏನಾಯ್ತು?

  ಪಾಕಿಸ್ತಾನದ ಪೂರ್ವಜರ ಮನೆ ಏನಾಯ್ತು?

  ದಿಲೀಪ್ ಕುಮಾರ್ ಡಿಸೆಂಬರ್ 11, 1922 ರಂದು ಬ್ರಿಟಿಷ್ ಆಡಳಿತದಲ್ಲಿ ಭಾರತದ ಪೇಶಾವರದಲ್ಲಿ (ಈಗಿನ ಪಾಕಿಸ್ತಾನ) ಜನಿಸಿದ್ದರು. ದಿಲೀಪ್ ಕುಮಾರ್ ಅವರು ಹುಟ್ಟಿ ಬೆಳೆದ ಪೂರ್ವಜರ ಮನೆಯನ್ನು ಪಾಕಿಸ್ತಾನ ಸರ್ಕಾರ ರಾಷ್ಟ್ರೀಯ ಸ್ಮಾರಕವನ್ನಾಗಿಸಲು ಘೋಷಣೆ ಮಾಡಿತ್ತು. ದಿಲೀಪ್ ಪೂರ್ವಜರ ಬಂಗಲೆಯನ್ನು ಖೈಬರ್ ಫಕ್ತುಂಖ್ವಾ ಪ್ರಾಂತ್ಯದ ಸರ್ಕಾರ ವಸ್ತುಸಂಗ್ರಹಾಲಯವನ್ನಾಗಿ ಮಾಡಲು ತೀರ್ಮಾನಿಸಿದೆ.

  Rockline Venkatesh : ಅಂಬರೀಶ್ ಬಗ್ಗೆ ಮಾತನಾಡೋದಕ್ಕೆ ಅವರು ಯಾರು? | Filmibeat Kannada
  ವಕ್ಫ್ ಮಂಡಳಿ, ಚಾರಿಟಿಗಳಿಗೆ ದಾನ

  ವಕ್ಫ್ ಮಂಡಳಿ, ಚಾರಿಟಿಗಳಿಗೆ ದಾನ

  ದಿಲೀಪ್ ಕುಮಾರ್ ಸಂಪಾದನೆ ಮಾಡಿದ ಆಸ್ತಿಯಲ್ಲಿ ವಕ್ಫ್ ಮಂಡಳಿ ಮತ್ತು ಹಲವು ಚಾರಿಟಿ, ಪ್ರಾರ್ಥನ ಮಂದಿರಗಳಿಗೆ ದಾನ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಇಲ್ಲ.

  English summary
  Bollywood Actor Dilip Kumar was among the first actor to charge Rs 1 lakh remuneration per movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X