ಕಟ್ಟಾ ಅಭಿಮಾನಿ ಕೊನೆಯುಸಿರೆಳೆದರೂ ಸಂತಾಪ ವ್ಯಕ್ತಪಡಿಸಲಿಲ್ಲ ಅಮಿತಾಬ್ ಬಚ್ಚನ್...!

ಅಮಿತಾಬ್ ಬಚ್ಚನ್ ಅವರನ್ನ ಅನುಕರಣೆ ಮಾಡಿ ಬದುಕು ಕಟ್ಟಿಕೊಂಡಿದ್ದವರು ಫಿರೋಜ್ ಖಾನ್. ಬಿಗ್ ಬಿ ಅವರ ಮಿಮಿಕ್ರಿ ಮಾಡುವುದರ ಮೂಲಕ ಜನ ಮನ ಗೆದ್ದಿದ್ದ ಫಿರೋಜ್ ಖಾನ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ ಬದೌನ್ ನಲ್ಲಿ ಕಳೆದ ಕೆಲ ದಿನಗಳಿಂದ ಇದ್ದ ಫಿರೋಜ್ ಖಾನ್, ಮೊನ್ನೆಯಷ್ಟೇ ಕಾರ್ಯಕ್ರಮವೊಂದನ್ನ ನೀಡಿದ್ದರು. ಫಿರೋಜ್ ಖಾನ್ ಅವರ ಈ ಕಾರ್ಯಕ್ರಮದಲ್ಲಿ ಜನ ಉಳ್ಳಾಡಿಕೊಂಡು ನಕ್ಕಿದ್ದರು. ಆದರೆ ಈಗ ಫಿರೋಜ್ ಖಾನ್ ಬಾರದ ಲೋಕಕ್ಕೆ ಎದ್ದು ನಡೆದಿದ್ದಾರೆ.

actor-firoz-khan-known-for-mimicking-amitabh-bachchan-dies-of-heart-attack

ಇನ್ನೂ ಫಿರೋಜ್ ಕೇವಲ ಮಿಮಿಕ್ರಿಯನ್ನಷ್ಟೇ ಮಾಡ್ತಿರಲಿಲ್ಲ. ಅವರಲ್ಲೊಬ್ಬ ಒಳ್ಳೇಯ ಆಕ್ಟರ್ ಕೂಡ ಇದ್ದ. ಹೀಗಾಗಿಯೇ ಹಿಂದಿ ಕಿರುತೆರೆ ಇವರನ್ನ ಅಪ್ಪಿಕೊಂಡಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಸಾಹೇಬ್ ಬಿವಿ ಔರ್ ಬಾಸ್, ಹಪ್ಪು ಕಿ ಉಲ್ಟನ್ ಪಲ್ಟನ್, ಜೀಜಾಜಿ ಚತ್ ಪರ್ ಹೈ ಸೇರಿ ಅನೇಕ ಧಾರಾವಾಹಿಯಲ್ಲಿ ಫೀರೋಜ್ ನಟಿಸಿದ್ದರು. ಇನ್ನೂ.. ಭಾಬಿ ಜೀ ಘರ್ ಪರ್ ಹೈ ಇವರಿಗೆ ಅಪಾರವಾದ ಕೀರ್ತಿಯನ್ನು ತಂದು ಕೊಟ್ಟಿತ್ತು.

ಅಮಿತಾಬ್ ಬಚ್ಚನ್ ಅವರ ಬಹುದೊಡ್ಡ ಅಭಿಮಾನಿಯಾಗಿದ್ದ ಫಿರೋಜ್ ಖಾನ್

ಅಮಿತಾಬ್ ಬಚ್ಚನ್ ಅವರ ದೊಡ್ಡ ಅಭಿಮಾನಿಯಾಗಿದ್ದರು ಫಿರೋಜ್ ಖಾನ್. ಹೀಗಾಗಿಯೇ ಎಲ್ಲಡೆ ಹೆಚ್ಚಾಗಿ ಅವರನ್ನ ಅನುಸರಿಸುತ್ತಿದ್ದರು. ಇನ್ನೂ ನೋಡಲು ಕೂಡ ಹೆಚ್ಚು ಕಡಿಮೆ ಅಮಿತಾಬ್ ಅವರಂತೆಯೇ ಇದ್ದ ಫಿರೋಜ್ ಅಮಿತಾಬ್ ಅಭಿನಯಿಸಿರುವ ಚಿತ್ರಗಳ ಸನ್ನಿವೇಶಗಳನ್ನ ಮರುಸೃಷ್ಟಿಸುತ್ತಿದ್ದರು. ಅಮಿತಾಬ್ ಅವರ ಬ್ಲಾಕ್ ಬಸ್ಟರ್ ಹಾಡುಗಳಿಗೆ ಥೇಟ್ ಅಮಿತಾಬ್ ಅವರಂತೆಯೇ ಹೆಜ್ಜೆ ಹಾಕುತ್ತಿದ್ದರು. ವಿಡಿಯೋಗಳನ್ನ ಇನ್ಸ್‌ಟಾಗ್ರಾಮ್‌ ನಲ್ಲಿ ಹಂಚಿಕೊಳ್ಳುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ತುಂಬಾ ಸಕ್ರಿಯರಾಗಿದ್ದ ಫಿರೋಜ್ 01 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನ ಹೊಂದಿದ್ದರು.

ಫಿರೋಜ್ ಖಾನ್ ಅವರ ಈ ಮಿಮಿಕ್ರಿಯನ್ನ ಜನ ಅಷ್ಟೇ ಇಷ್ಟ ಪಡುತ್ತಿದ್ದರು. ಅನೇಕ ಕಾರ್ಯಕ್ರಮಗಳಿಗೆ ಇವರನ್ನ ಆಹ್ವಾನಿಸಿ, ಅಮಿತಾಬ್ ಬಚ್ಚನ್ ಅವರ ಮಿಮಿಕ್ರಿ ಮಾಡುವಂತೆ ಕೇಳಿಕೊಳ್ಳುತ್ತಿದ್ದರು. ಇನ್ನೂ ಫಿರೋಜ್ ಕೇವಲ ಅಮಿತಾಬ್ ಬಚ್ಚನ್ ಅವರ ಧ್ವನಿಯನ್ನಷ್ಟೇ ಅಲ್ಲ ದಿಲೀಪ್ ಕುಮಾರ್, ಶಾರುಖ್ ಖಾನ್, ಧಮೇಂದ್ರ ಮತ್ತು ಸನ್ನಿ ಡಿಯೋಲ್ ಅವರ ಮಿಮಿಕ್ರಿಯನ್ನೂ ಕೂಡ ಮಾಡುತ್ತಿದ್ದರು

ಸದ್ಯಕ್ಕೆ ಫಿರೋಜ್ ಖಾನ್ ಅವರ ನಿಧನಕ್ಕೆ ಹಿಂದಿ ಕಿರುತೆರೆ ವಲಯ ಕಣ್ಣೀರಿಟ್ಟಿದೆ. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಸಂತಾಪ ಸೂಚಿಸಿದ್ದಾರೆ. ಆದರೆ ಅಪ್ಪಟ ಅಭಿಮಾನಿಯ ನಿಧನಕ್ಕೆ ಬಾಲಿವುಡ್ ಶೆಹನ್ ಷಾ ಮಾತ್ರ ಇನ್ನೂ ಸಂತಾಪ ಸೂಚಿಸಿಲ್ಲ. ಈ ಕಾರಣಕ್ಕೆ.. ಅನೇಕರು ಅಮಿತಾಬ್ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಇನ್ನೂ ಕೆಲವರು ಅಮಿತಾಬ್ ಬಚ್ಚನ್‌ಗೆ ಈ ದುಃಖಕರ ವಿಚಾರ ಗೊತ್ತಿಲ್ಲದಿರಬಹುದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
"Firoz Khan, an actor from 'Bhabhiji Ghar Par Hain' renowned for his mimicry skills, including his portrayal of Amitabh Bachchan, passes away from a heart attack."
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X