ಸಾಕು ನಿಲ್ಲಿಸು, ಹೊರಡು ಇಲ್ಲಿಂದ ; ಕಾರ್ಯಕ್ರಮದಲ್ಲಿ ನಟಿಗೆ ಅವಮಾನ-ಕೆರಳಿದ ಮಾಜಿ ಸಂಸದೆ
ಬಣ್ಣದ ಲೋಕದ ಮಿಂಚಿನ ಬಳ್ಳಿ ಅವರು. ತೆರೆಯ ಮೇಲೆ ಕಾಣಿಸಿಕೊಂಡರೆ ಸಾಕು, ಅಭಿಮಾನಿಗಳ ಎದೆಯಲ್ಲಿ ಸಂಚಲನ ಮೂಡುತ್ತದೆ. ಕೇವಲ ನಟನೆಯಷ್ಟೇ ಅಲ್ಲ, ರಾಜಕೀಯ ರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದವರು. ಎಲ್ಲಿಯೇ ಹೋದರೂ ಅವರಿಗೆ ಸಿಗುವ ಗೌರವ, ಪ್ರೀತಿ ಅಪಾರ. ಆದರೆ ಇತ್ತೀಚೆಗೆ ನಡೆದ ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಇವರಿಗೆ ಸಂಕಟ ಎದುರಾಗಿದೆ.
ಹೊಳೆಯುವ ಬೆಳಕು, ಸುತ್ತಲೂ ಜೈಕಾರ ಹಾಕುವ ಸಾವಿರಾರು ಅಭಿಮಾನಿಗಳು. ಈ ಸಂಭ್ರಮದ ನಡುವೆಯೇ ಏನೋ ಒಂದು ಘಟನೆ ನಡೆದುಹೋಗಿದೆ. ಆ ಕ್ಷಣದವರೆಗೂ ನಗುನಗುತಿದ್ದ ಆ ಸುಂದರಿ, ದಿಢೀರನೆ ಅಸಹಾಯಕಳಾಗಿದ್ದಾರೆ. ವೇದಿಕೆಯ ಮೇಲೆ ನಡೆದ ಆ ಒಂದು ಕೃತ್ಯ ಈಗ ಇಡೀ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಆದರೆ ಆ ಪ್ರೀತಿ ಮಿತಿ ಮೀರಿದಾಗ ಏನಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಆ ನಟಿಗೆ ಅಂದು ನಡೆದ ಅವಮಾನ ಅಂತಿಮವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರುವಂತೆ ಮಾಡಿದೆ. ಅಷ್ಟಕ್ಕೂ ಆ ರಾತ್ರಿ ನಡೆದಿದ್ದಾದರೂ ಏನು? ಎಲ್ಲರೂ ದಂಗಾಗುವಂತಹ ಆ ಕಹಿಸತ್ಯ ಇಲ್ಲಿದೆ ಓದಿ.
ಸಾರ್ವಜನಿಕ ಸಮಾರಂಭದಲ್ಲಿ ಘನತೆಗೆ ಧಕ್ಕೆ
ಹೌದು, ಅಸಲಿಗೆ ಬಂಗಾಳದ ನಟಿ ಮತ್ತು ಮಾಜಿ ಸಂಸದೆ ಮಿಮಿ ಚಕ್ರವರ್ತಿ ಪರಗಣ ಜಿಲ್ಲೆಯ ಬೊಂಗಾವ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಾಯಗೋಪಾಲ್‌ಗಂಜ್ ಯುವಕರ ಸಂಘ ಆಯೋಜನೆ ಮಾಡಿದ್ದ ಕಾರ್ಯಕ್ರಮ ಇದು. ಈ ಕಾರ್ಯಕ್ರಮದಲ್ಲಿ ಮಿಮಿ ಮೈ ಬಳುಕಿಸುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಓರ್ವ ವ್ಯಕ್ತಿ ವೇದಿಕೆ ಏರಿದ್ದಾನೆ. ಹಾಡಿಗೆ ಅಡ್ಡಿಪಡಿಸಿದ್ದಾನೆ. ಇಷ್ಟೇ ಅಲ್ಲ ನೆರೆದ ಜನಸ್ತೋಮದ ಎದುರಲ್ಲೇ ವೇದಿಕೆಯಿಂದ ಹೊರಡುವಂತೆ ಹೇಳಿದ್ದಾನೆ.
ವ್ಯಕ್ತಿಯ ಈ ವರ್ತನೆಯಿಂದ ಸಹಜವಾಗಿ ಮಿಮಿ ಘನತೆಗೆ ಧಕ್ಕೆ ಆಗಿದೆ. ಇನ್ನು ಮಿಮಿ ಚಕ್ರವರ್ತಿ ಕೇವಲ ನಟಿಯಲ್ಲ. ಮಾಜಿ ಸಂಸದೆ ಕೂಡ ಹೌದು. ಆದರೂ ಕೂಡ ಕೊಡಬೇಕಾದ ಕನಿಷ್ಠ ಗೌರವವನ್ನು ಕೂಡ ಆ ವ್ಯಕ್ತಿ ನೀಡಿಲ್ಲ. ಈ ಹಿನ್ನೆಲೆ ಎಷ್ಟೇ ಕೋಪ ಬಂದರೂ ಅಲ್ಲಿಂದ ಶಾಂತವಾಗಿಯೇ ಹೊರ ಬಂದ ಮಿಮಿ ಚಕ್ರವರ್ತಿ ಸದ್ಯ ಬೊಂಗಾವ್ ಪೊಲೀಸರಿಗೆ ಮಾನಸಿಕ ಕಿರುಕುಳದ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಕ್ಲಬ್‌ನ ಪದಾಧಿಕಾರಿ ತನ್ಮಯ್ ಶಾಸ್ತ್ರಿ ಅವರನ್ನು ಉಲ್ಲೇಖಿಸಿದ್ದಾರೆ.
ತಮ್ಮ ಈ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಿಮಿ ಚಕ್ರವರ್ತಿ, "ಇಂತಹ ಅನುಭವ ನನಗೆ ಇದೇ ಮೊದಲ ಬಾರಿಯಾಗಿದೆ. ವೇದಿಕೆಯನ್ನೇರಿದ ಕಲಾವಿದರನ್ನು ಜನರು ಈಗ ತಮ್ಮ 'ಸ್ವತ್ತು' ಎಂದು ಭಾವಿಸಲು ಶುರುಮಾಡಿದ್ದಾರೆ. ತನ್ಮಯ್ ಶಾಸ್ತ್ರಿ ಎಂಬುವವರು ದಿಢೀರನೆ ಪ್ರದರ್ಶನ ನಿಲ್ಲಿಸುವಂತೆ ಹೇಳಿದರು. ಸಾಕು ನಿಲ್ಲಿಸು ನೀನು ಹೊರಡು ಎಂದರು. ನನಗೆ ಅಚ್ಚರಿಯಾಯ್ತು'' ಎಂದು ಹೇಳಿದ್ದಾರೆ. ''ಅವರು ನನ್ನನ್ನೇ ಉದ್ದೇಶಿಸಿ ಮಾತನಾಡುತ್ತಿದ್ದಾರೆಂದು ಮೊದಲಿಗೆ ನನಗೆ ಅರ್ಥವಾಗಲಿಲ್ಲ'' ಎಂದು ಚಕ್ರವರ್ತಿ ಹೇಳಿದ್ದಾರೆ.

ಮುಂದುವರೆದು ''ನಡೆದ ಈ ವಿದ್ಯಮಾನದಿಂದ ನಾನು ದಿಗ್ಭ್ರಾಂತಳಾಗಿ, ಗೊಂದಲಕ್ಕೊಳಗಾಗಿದ್ದೆ'' ಎಂದು ಹೇಳಿರುವ ಮಿಮಿ ಚಕ್ರವರ್ತಿ ''ಆ ವ್ಯಕ್ತಿ ಪ್ರೇಕ್ಷಕರಿಗೆ ಶುಭರಾತ್ರಿ ಹೇಳಿ ಅಲ್ಲಿಂದ ಏನೂ ನಡೆದೇ ಇಲ್ಲ ಎಂಬಂತೆ ಹೊರ ನಡೆದ'' ಎಂದಿದ್ಧಾರೆ.
ಆಧಾರ ರಹಿತ ಆರೋಪ
ಆದರೆ ಮಿಮಿ ಚಕ್ರವರ್ತಿ ಅವರ ಈ ಆರೋಪ ಎಲ್ಲವೂ ಆಧಾರ ರಹಿತ ಎನ್ನುವ ವಾದವನ್ನು ತನ್ಮಯ್ ಶಾಸ್ತ್ರೀ ಮಾಡಿದ್ಧಾರೆ.ಮಿಮಿ ಚಕ್ರವರ್ತಿ ಅವರ ಕಾರ್ಯಕ್ರಮ 10-30ಕ್ಕೆ ನಿಗದಿಯಾಗಿತ್ತು. ಆದರೆ ಅವರು 10:30ಕ್ಕೆ ಬರುವ ಬದಲು ರಾತ್ರಿ 11:45 ರ ಸುಮಾರಿಗೆ, ಒಂದೂವರೆ ಗಂಟೆ ತಡವಾಗಿ ಆಗಮಿಸಿದ್ದರು. ಆದರೂ ಅವರಿಗೆ ಸೂಕ್ತ ಗೌರವ ನೀಡಿ ವೇದಿಕೆಗೆ ಕರೆತರಲಾಗಿತ್ತು ಎಂದು ಹೇಳಿದ್ದಾರೆ. ಬೊಂಗಾವ್‌ಗೆ ಅವಮಾನ ಮಾಡುವ ಉದ್ದೇಶದಿಂದ ಆರೋಪ ಮಾಡಿದ್ದಾರೆ ಎಂದಿದ್ದಾರೆ.
ನಮ್ಮ ಬಡಾವಣೆಯಲ್ಲಿ ಶಿಸ್ತು ಇದೆ, ಅದನ್ನು ನಾವು ಪಾಲಿಸಬೇಕು ಎಂದು ಹೇಳಿರುವ ತನ್ಮಯ್ ಶಾಸ್ತ್ರೀ ಮಧ್ಯರಾತ್ರಿ 12 ರವರೆಗೆ ಮಾತ್ರ ಕಾರ್ಯಕ್ರಮಕ್ಕೆ ಪೊಲೀಸರ ಅನುಮತಿ ನಮಗೆ ನೀಡಿದ್ದರು, ಈ ಹಿನ್ನೆಲೆ ಅವರಲ್ಲಿ ವೇದಿಕೆಯಿಂದ ಇಳಿಯುವಂತೆ ಕೇಳಲಾಯಿತು. ಯಾವುದೇ ತೊಂದರೆ ಇರಲಿಲ್ಲ. ನಾವು ನಿಯಮಗಳನ್ನು ಪಾಲಿಸಿದ್ದೆವು ಎಂದಿದ್ದಾರೆ. ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿ ಪ್ರಕರಣ ಪರಿಶೀಲಿಸುತ್ತಿದ್ದಾರೆ.


Click it and Unblock the Notifications











