ಮಲಯಾಳಂ ಸಿನಿಮಾವನ್ನು ಹೊಗಳಿ ಬಾಲಿವುಡ್‌ನ ಕಾಲೆಳೆದ ನಟ

'ಬದಾಯಿ ಹೋ' ಸೇರಿದಂತೆ ಹಲವು ಬಾಲಿವುಡ್‌ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿರುವ ನಟ ಗಜರಾಜ್‌ ರಾವ್ ಅವರು ಮಲಯಾಳಂ ಸಿನಿಮಾವನ್ನು ಹೊಗಳಿ ಬಾಲಿವುಡ್‌ ಸಿನಿಮಾಗಳನ್ನು ವ್ಯಂಗ್ಯ ಮಾಡಿದ್ದಾರೆ.

ಇತ್ತೀಚೆಗಷ್ಟೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ಸದ್ದು ಮಾಡುತ್ತಿರುವ 'ಜೋಜಿ' ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ನಟ ಗಜರಾಜ ರಾವ್, 'ಪ್ರಿಯ, 'ದಿಲೇಶ್ ಪೂತನ್ (ಜೋಜಿ ಸಿನಿಮಾದ ನಿರ್ದೇಶಕ) ಹಾಗೂ ಮಲಯಾಳಂ ಸಿನಿಮಾ ಕರ್ಮಿಗಳೇ, ಇತ್ತೀಚೆಗಷ್ಟೆ ನಾನು 'ಜೋಜಿ' ಸಿನಿಮಾ ನೋಡಿದೆ. ನನಗೆ ನಿಮ್ಮೊಂದಿಗೆ ಒಂದು ತಕರಾರಿದೆ' ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಹಿರಂಗ ಪತ್ರವನ್ನು ಆರಂಭಿಸಿದ್ದಾರೆ.

'ಇದು ಸರಿಯಲ್ಲ, ಅದು ಹೇಗೆ ನೀವು ಪ್ರತಿಬಾರಿಯೂ ಸ್ವಂತದ ಐಡಿಯಾಗಳನ್ನು, ವಿಷಯ ವಸ್ತುಗಳನ್ನು ತೆಗೆದುಕೊಂಡು ಒಳ್ಳೆಯ ಸಿನಿಮಾ ಮಾಡುತ್ತೀರಿ. ಇದು ಸರಿಯಲ್ಲ. ನೀವು ಇತರೆ ಪ್ರಾದೇಶಿಕ ಭಾಷಾ ಸಿನಿಮಾಗಳು ವಿಶೇಷವಾಗಿ ಬಾಲಿವುಡ್‌ ಸಿನಿಮಾಗಳಿಂದ ಕೆಲವು ವಿಷಯಗಳನ್ನು ಕಲಿಯಬೇಕಿದೆ' ಎಂದಿದ್ದಾರೆ ಗಜರಾಜ್.

Actor Gajraj Rao Slams Bollywood And Praised Malayalam Movie Joji

'ನೀವು ಕೆಲವು ಕಳಪೆ ಸಿನಿಮಾಗಳನ್ನು ಸಹ ಮಾಡಬೇಕಾಗುತ್ತದೆ. ಕೆಟ್ಟ ರೀಮೇಕ್‌ಗಳು. ಅರ್ಥಹೀನ ಸಿನಿಮಾ ಪ್ರೊಮೋಷನ್‌ಗಳು. ಕೆಟ್ಟ ಮಾರುಕಟ್ಟೆ ಕ್ಯಾಂಪೇನ್‌ಗಳು, ವೀಕೆಂಡ್ ಕಲೆಕ್ಷನ್‌ ಲೆಕ್ಕಾಚಾರಗಳು ಇವೆಲ್ಲವನ್ನೂ ನೀವು ಮಾಡುವುದಿಲ್ಲ ಏಕೆ? ನಮ್ಮ ಬಾಲಿವುಡ್‌ನಿಂದ ಇವನ್ನೆಲ್ಲಾ ನೋಡಿ ಕಲಿಯಿರಿ' ಎಂದು ಪರೋಕ್ಷವಾಗಿ ಬಾಲಿವುಡ್‌ ಅನ್ನು ವ್ಯಂಗ್ಯ ಮಾಡಿದ್ದಾರೆ ಗಜರಾಜ್ ರಾವ್.

ಕೊನೆಯದಾಗಿ, 'ಇದನ್ನೆಲ್ಲಾ ನೀವು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಭಾವಿಸಿದ್ದೇನೆ. ನೀವು ನಿಮ್ಮ ಉತ್ತಮ ಕಾರ್ಯವನ್ನು ಹೀಗೆಯೇ ಮುಂದುವರೆಸುತ್ತೀರೆಂದು ನಂಬಿದ್ದೇನೆ. ಕೊರೊನಾ ಇಲ್ಲವಾದ ಮೇಲೆ ನಿಮ್ಮ ಸಿನಿಮಾದ ಮೊದಲ ಶೋ ನೋಡಲು ಚಿತ್ರಮಂದಿರಕ್ಕೆ ತೆರಳಲು ಕಾತರನಾಗಿದ್ದೇನೆ' ಎಂದಿದ್ದಾರೆ ಗಜರಾಜ್‌ ರಾವ್.

ಇಷ್ಟೇ ಅಲ್ಲದೆ, 'ಜೋಜಿ' ಸಿನಿಮಾದಲ್ಲಿ ಫಹಾದ್ ಫಾಸಿಲ್ ನಟನೆಗೆ ಮಾರುಹೋಗಿರುವ ಗಜರಾಜ್ ರಾವ್, ತಮ್ಮನ್ನು ತಾವು 'ಫಹಾದ್ ಫಾಸಿಲ್ ಫ್ಯಾನ್‌ ಕ್ಲಬ್‌ನ ಅಧ್ಯಕ್ಷ' ಎಂದು ಕರೆದುಕೊಂಡಿದ್ದಾರೆ. ಗಜರಾಜ್ ಅವರ ಪೋಸ್ಟ್‌ಗೆ ಸಾಕಷ್ಟು ಜನ ಸಮ್ಮತಿ ಸೂಚಿಸಿದ್ದಾರೆ. ಬಾಲಿವುಡ್‌ ಸಿನಿಮಾಗಳ ಬಗ್ಗೆ ವ್ಯಂಗ್ಯ ಮಾಡಿದ್ದಕ್ಕೆ ಶಹಭಾಷ್ ಎಂದಿದ್ದಾರೆ.

Recommended Video

ಅನಾರೋಗ್ಯ ಸಮಸ್ಯೆಯಿಂದ ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ ವಿಧಿವಶ | Filmibeat Kannada

'ಜೋಜಿ' ಮಲಯಾಳಂ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಫಹಾದ್ ಫಾಸಿಲ್ ನಟಿಸಿ ದಿಲೇಶ್ ಪೂತನ್ ನಿರ್ದೇಶಿಸಿರುವ ಈ ಸಿನಿಮಾದ ಬಗ್ಗೆ ಭಾರಿ ಒಳ್ಳೆಯ ವಿಮರ್ಶೆ ಕೇಳಿಬರುತ್ತಿದೆ.

More from Filmibeat

English summary
Actor Gajraj slams bollywood movies and praised Malayalam movie 'Joji'. He also said became fan of Fahadh Faasil.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X