For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ ಬಳಿಕ ಹಿರಿಯ ನಟ ಗೋವಿಂದಗೆ ಕೊರೊನಾ

  |

  ಕೊರೊನಾ ವೈರಸ್ ಬಾಲಿವುಡ್ ಸ್ಟಾರ್‌ಗಳ ಬೆನ್ನು ಬಿದ್ದಂತಿದೆ. ಹಿಂದಿ ಚಿತ್ರರಂಗದಲ್ಲಿ ಒಬ್ಬರ ಹಿಂದೆ ಮತ್ತೊಬ್ಬರಿಗೆ ಕೊವಿಡ್ ಸೋಂಕು ತಗುಲಿರುವುದು ತಿಳಿದು ಬರುತ್ತಿದೆ.

  ಇಂದು ಬೆಳಗ್ಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಕೊರೊನಾ ಸೋಂಕು ಧೃಡವಾಗಿತ್ತು. ಖುದ್ದು ಅಕ್ಷಯ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ, ಮತ್ತೊಬ್ಬ ಹಿಂದಿಯ ಹಿರಿಯ ಕಲಾವಿದ ಗೋವಿಂದ ಅವರಿಗೆ ಕೊವಿಡ್ ಅಂಟಿಕೊಂಡಿದೆ.

  ಗೋವಿಂದ ಅವರಿಗೆ ಕೊರೊನಾ ಸೋಂಕು ತಗುಲಿರುವುದನ್ನು ಅವರ ವಕ್ತಾರ ಖಚಿತಪಡಿಸಿದ್ದಾರೆ. 'ಗೋವಿಂದ ಅವರಿಗೆ ಇಂದು ಪಾಸಿಟಿವ್ ಬಂದಿದೆ. ಸೌಮ್ಯ ರೋಗ ಲಕ್ಷಣಗಳು ಇದೆ. ಹೋಮ್ ಕ್ವಾರಂಟೈನ್ ಆಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ' ಎಂದು ತಿಳಿಸಿದ್ದಾರೆ.

  'ವಕೀಲ್ ಸಾಬ್' ನಟಿ ಹಾಗೂ ನಿರ್ಮಾಪಕ ಅಲ್ಲು ಅರವಿಂದ್‌ಗೆ ಕೊರೊನಾ'ವಕೀಲ್ ಸಾಬ್' ನಟಿ ಹಾಗೂ ನಿರ್ಮಾಪಕ ಅಲ್ಲು ಅರವಿಂದ್‌ಗೆ ಕೊರೊನಾ

  'ತಮ್ಮ ಪತಿಯ ಸಂಪರ್ಕದಲ್ಲಿದ್ದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ, ಮತ್ತು ಸುರಕ್ಷಿತೆ ಕಾಪಾಡಿ ಎಂದು ಗೋವಿಂದ ಅವರ ಪತ್ನಿ ಸುನೀತಾ ಆಹುಜಾ ಮನವಿ ಮಾಡಿದ್ದಾರೆ.

  ಅಕ್ಷಯ್ ಕುಮಾರ್‌ಗೂ ಮೊದಲು ಆಲಿಯಾ ಭಟ್, ಫಾತಿಮಾ ಸನಾ ಶೇಖ್, ಪರೇಶ್ ರಾವಲ್, ಕಾರ್ತಿಕ್ ಆರ್ಯನ್, ರಣ್ಬೀರ್ ಕಪೂರ್, ರೋಹಿತ್ ಸರಾಫ್ ಕೊರೊನಾಗೆ ತುತ್ತಾಗಿದ್ದರು. ಅದಕ್ಕೂ ಮುಂಚೆ ಅಮಿತಾಭ್ ಬಚ್ಚನ್, ಐಶ್ವರ್ಯ ರೈ, ಅಭಿಷೇಕ್ ಬಚ್ಚನ್, ಕನಿಕಾ ಕಪೂರ್, ಮಲೈಕಾ ಆರೋರ, ಅರ್ಜುನ್ ಕಪೂರ್ ಸಹ ಸೋಂಕಿಗೆ ಒಳಗಾಗಿದ್ದರು.

  Recommended Video

  ಯುವರತ್ನ ಸಕ್ಸಸ್ ಪುನೀತ್ ರಾಜ್ ಕುಮಾರ್ ಗೆ ಸಾಥ್ ಕೊಟ್ಟ ಜಗ್ಗೇಶ್ | Filmibeat Kannada

  ಈ ಕಡೆ ದಕ್ಷಿಣ ಚಿತ್ರರಂಗದಲ್ಲೂ ಹಲವರಿಗೆ ಕೊರೊನಾ ತಗುಲಿದೆ. ಕನ್ನಡ ನಟ ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿಗೆ, ತಮಿಳು ನಟಿ ನಿವೇತಾ ಥಾಮಸ್, ತೆಲುಗಿನ ಹಿರಿಯ ನಿರ್ಮಾಪಕ ಅಲ್ಲು ಅರವಿಂದ್‌ಗೂ ಪ್ರಸ್ತುತ ಸೋಂಕು ತಗುಲಿದೆ.

  English summary
  After Actor Akshay Kumar, another bollywood actor Govinda has confirmed that he has tested positive for COVID-19.
  Monday, April 5, 2021, 10:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X