For Quick Alerts
  ALLOW NOTIFICATIONS  
  For Daily Alerts

  ಬನ್ಸಾಲಿ ಸಿನಿಮಾದಿಂದ ಸಲ್ಮಾನ್ ಔಟ್: ಖಾನ್ ಜಾಗಕ್ಕೆ ಮತ್ತೋರ್ವ ಸ್ಟಾರ್ ಎಂಟ್ರಿ

  |

  ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಮತ್ತು ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಒಟ್ಟಿಗೆ ಸಿನಿಮಾ ಮಾಡಲಿ ಎನ್ನುವುದು ಅಭಿಮಾನಿಗಳ ಆಸೆಯಾಗಿತ್ತು. ಅದರಂತೆ ಬನ್ಸಾಲಿ, ಸಲ್ಮಾನ್ ಜೊತೆ 'ಇನ್ಶಲ್ಲಾ' ಸಿನಿಮಾ ಘೆೋಷಣೆ ಮಾಡಿದ್ರು. ಚಿತ್ರದಲ್ಲಿ ಸಲ್ಮಾನ್ ಖಾನ್ ಗೆ ನಾಯಕಿಯಾಗಿ ಅಲಿಯಾ ಭಟ್ ಆಯ್ಕೆಯಾಗಿದ್ದರು.

  ಈ ಸಿನಿಮಾ ಘೋಷಣೆಯಾಗಿ ಕೆಲವೇ ದಿನಗಳಲ್ಲಿ ಸಿನಿಮಾ ನಿಂತುಹೋಗಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಅಲಿಯಾ ಜೊತೆ ನಟಿಸಲು ಸಲ್ಮಾನ್ ಗೆ ಇಷ್ಟವಿಲ್ಲ, ಬನ್ಸಾಲಿ ಜೊತೆಗಿನ ಸೃಜನಶೀಲ ಭಿನ್ನಾಭಿಪ್ರಾಯದಿಂದ ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಬಳಿಕ ಸಲ್ಮಾನ್ ಮತ್ತು ಬನ್ಸಾಲಿ ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದರು.

  ಸೆಟ್ಟೇರುವ ಮೊದಲೇ ಹಿಂದಿ 'ವಿಕ್ರಂ ವೇದ' ರಿಲೀಸ್ ದಿನಾಂಕ ಘೋಷಣೆಸೆಟ್ಟೇರುವ ಮೊದಲೇ ಹಿಂದಿ 'ವಿಕ್ರಂ ವೇದ' ರಿಲೀಸ್ ದಿನಾಂಕ ಘೋಷಣೆ

  ಇದೀಗ 'ಇನ್ಶಲ್ಲಾ' ಸಿನಿಮಾ ಮತ್ತೆ ಸದ್ದು ಮಾಡುತ್ತಿದೆ. ಸಿನಿಮಾದಿಂದ ಸಲ್ಮಾನ್ ಖಾನ್ ಅಧಿಕೃತವಾಗಿ ಹೊರನಡೆದಿದ್ದು ಸಲ್ಲು ಜಾಗಕ್ಕೆ ಮತ್ತೋರ್ವ ಸ್ಟಾರ್ ನಟ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅಂದಹಾಗೆ ಸಲ್ಮಾನ ಖಾನ್ ಜಾಗಕ್ಕೆ ಬಂದ ಆ ಸ್ಟಾರ್ ಮತ್ಯಾರು ಅಲ್ಲ ಗ್ರೀಕ್ ಗಾಡ್ ಹೃತಿಕ್ ರೋಷನ್.

  ಇದೀಗ ಹೃತಿಕ್ ರೋಷನ್, ನಟಿ ಅಲಿಯಾ ಭಟ್ ಜೊತೆ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸಂಜಯ್ ಲೀಲಾ ಬನ್ಸಾಲಿ ಸದ್ಯ ಅಲಿಯಾ ಭಟ್ ಜೊತೆಗಿನ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾವನ್ನು ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಬನ್ಸಾಲಿ ನಿರ್ಮಾಣದಲ್ಲಿ ಹೀರಾ ಮಂಡಿ ವೆಬ್ ಸೀರಿಸ್ ಮೂಡಿಬರುತ್ತಿದೆ. ಗಂಗೂಬಾಯಿ ಮುಗಿಸುತ್ತಿದ್ದಂತೆ 'ಹೀರಾ ಮಂಡಿ' ಪ್ರಾರಂಭ ಮಾಡಿದ್ದಾರೆ. ಜೊತೆಗೆ 'ಇನ್ಶಲ್ಲಾ' ಚಿತ್ರದ ಮೇಲೆಯೂ ಕೆಲಸ ಮಾಡುತ್ತಿದ್ದಾರೆ.

  ರಾಕ್ ಲೈನ್ ವೆಂಕಟೇಶ್ ಮನೆಗೆ ಬಿಯರ್ ಬಾಟಲ್ ಎಸೆದ ಕಿಡಿಗೇಡಿಗಳು | FILMIBEAT KANNADA

  ಹೃತಿಕ್ ರೋಷನ್ ಮತ್ತು ಸಂಜಯ್ ಲೀಲಾ ಬನ್ಸಾಲಿ ಈ ಮೊದಲು 'ಗುಜಾರಿಶ್' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಸಿನಿಮಾ 2010ರಲ್ಲಿ ಬಿಡುಗಡೆಯಾಗಿತ್ತು. ಇದೀಗ 11 ವರ್ಷಗಳ ಬಳಿಕ ಮತ್ತೆ ಹೃತಿಕ್ ಮತ್ತ ಸಂಜಯ್ ಲೀಲಾ ಬನ್ಸಾಲಿ ಒಟ್ಟಿಗೆ ಸಿನಿಮಾ ಮಾಡುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

  English summary
  Hrithik Roshan, Salman Khan, Sanjay Leela Bhansali, Inshallah movie, Hrithik Roshan Replaces Salman Khan in Sanjay Leela Bhansali's Inshallah, Alia Bhatt and salman Khan,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X