For Quick Alerts
  ALLOW NOTIFICATIONS  
  For Daily Alerts

  215 ಕೋಟಿ ಸುಲಿಗೆ ಪ್ರಕರಣ: 'ರಕ್ಕಮ್ಮ' ಆರೋಪಿ, ಬಂಧನ ಭೀತಿ

  |

  'ವಿಕ್ರಾಂತ್ ರೋಣ' ಸಿನಿಮಾದಲ್ಲಿ ರಾ ರಾ ರಕ್ಕಮ್ಮ ಎಂದು ಕುಣಿದ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಈಗ ಬಂಧನ ಭೀತಿ ಎದುರಾಗಿದೆ.

  ಕಳೆದ ವರ್ಷದಿಂದಲೂ ಚರ್ಚೆಯಲ್ಲಿರುವ ವಂಚಕ ಸುಖೇಶ್ ಚಂದ್ರಶೇಖರ್‌ನ ಸುಲಿಗೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದವನ್ನು ಇಡಿ (ಜಾರಿ ನಿರ್ದೇಶನಾಲಯ) ತನಿಖೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಆರೋಪಿಯೆಂದು ಇಡಿ ಪರಿಗಣಿಸಿದೆ.

  ಇಷ್ಟು ದಿನಗಳ ಕಾಲ ಸುಖೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಜಾಕ್ವೆಲಿನ್ ಅನ್ನು ಸಾಕ್ಷಿ ಎಂದು ಪರಿಗಣಿಸಲಾಗಿತ್ತು. ಆದರೆ ಆಕೆ ಆರೋಪಿಯೆಂದು ಇಡಿ ಇದೀಗ ಹೇಳಿದೆ.

  ಸುಖೇಶ್ ಚಂದ್ರಶೇಖರ್ 215 ಕೋಟಿ ಹಣವನ್ನು ಸುಲಿಗೆ ಮಾಡಿದ್ದ ಹಾಗೂ ಅದನ್ನು ಅಕ್ರಮವಾಗಿ ವರ್ಗವಣೆ ಮಾಡಿದ್ದ. ಇದೇ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಆರೋಪಿ ಎಂದು ಜಾರಿ ನಿರ್ದೇಶನಾಲಯ ಪರಿಗಣಿಸಿದೆ.

  ಸುಖೇಶ್ ಚಂದ್ರಶೇಖರ್ ಸುಲಿಗೆ ಮಾಡಿದ್ದ ಹಣದಲ್ಲಿ ಜಾಕ್ವೆಲಿನ್‌ಗೆ ಪಾಲು ಅಥವಾ ಕೆಲವು ಉಡುಗೊರೆಗಳನ್ನು ನೀಡಲಾಗಿತ್ತು. ಹಾಗೂ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸುಖೇಶ್ ಚಂದ್ರಶೇಖರ್ ಒಬ್ಬ ಅಪರಾಧಿ, ಸುಲಿಗೆಕೋರ, ಸುಲಿಗೆ ಹಣದಿಂದಲೇ ತನಗೆ ಉಡುಗೊರೆಗಳನ್ನು ಆತ ನೀಡುತ್ತಿರುವ ವಿಷಯ ಗೊತ್ತಿತ್ತು ಎಂದು ಇಡಿ ಹೇಳಿದೆ.

  ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ವಂಚಕ ಸುಖೇಶ್, ಜೈಲಿನಿಂದಲೇ ಹಲವು ಉದ್ಯಮಿಗಳು, ಪ್ರತಿಷ್ಠಿತರಿಗೆ ಕೋಟ್ಯಂತರ ರುಪಾಯಿ ಹಣ ವಂಚನೆ ಮಾಡಿದ್ದ ಹಾಗೂ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದ ಎಂದು ಆರೋಪಿಸಲಾಗಿದೆ.

  ವಂಚಕ ಸುಖೇಶ್, ಜಾಕ್ವೆಲಿನ್ ಫರ್ನಾಂಡೀಸ್‌ರ ಆಪ್ತ ಗೆಳೆಯನಾಗಿದ್ದು, ಇಬ್ಬರು ಅತ್ಯಾಪ್ತವಾಗಿರುವ ಕೆಲವು ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಸುಖೇಶ್, ಸುಮಾರು 6 ಕೋಟಿ ಮೌಲ್ಯದ ವಿವಿಧ ಉಡುಗೊರೆಗಳನ್ನು ಜಾಕ್ವೆಲಿನ್ ಫರ್ನಾಂಡೀಸ್‌ಗೆ ನೀಡಿದ್ದಾನೆ ಎನ್ನಲಾಗುತ್ತಿದೆ. ಅಲ್ಲದೆ ಜಾಕ್ವೆಲಿನ್ ಮೂಲಕ ಸುಖೇಶ್ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದಾಗಿಯೂ ಇಡಿ ಅನುಮಾನಿಸಿದೆ.

  ಇದೇ ಕಾರಣಕ್ಕೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಸತತವಾಗಿ ವಿಚಾರಣೆಗೆ ಒಳಪಡಿಸುತ್ತಿದೆ ಇಡಿ. ಈಗಾಲಗೇ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸೇರಿದ ಸುಮಾರು 7 ಕೋಟಿಯ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿದೆ. ಇದರ ಜೊತೆಗೆ ಸುಮಾರು ಮೂರು ಬಾರಿ ಸಮನ್ಸ್ ನೀಡಿ ವಿಚಾರಣೆಯನ್ನೂ ಮಾಡಿದೆ. ಇದೀಗ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಆರೋಪಿಯನ್ನಾಗಿ ಮಾಡಿದೆ.

  English summary
  Actor Jacqueline Fernandes Named accused by ED in Sukesh Chandrashekhar Scandal. Ed says she well know that Sukesh is a criminal.
  Wednesday, August 17, 2022, 12:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X