ಬಾಯ್‌ಫ್ರೆಂಡ್ ಜೊತೆಗೆ ಗಣಪತಿ ವಿಸರ್ಜನೆಯಲ್ಲಿ ಸಕತ್ ಸ್ಟೆಪ್ಸ್ ಹಾಕಿದ ಜಾಹ್ನವಿ ಕಪೂರ್
ದೇಶದ ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಗಣೇಶ ಚತುರ್ಥಿಯನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಗಣೇಶೋತ್ಸವದಲ್ಲಿ ಬಾಲಿವುಡ್ ತಾರೆಯರ ಮಹಾ ಸಂಗಮವೇ ನಡೆದಿದೆ. ಮುಂಬೈನಲ್ಲಿ ನಡೆದ ಅತಿದೊಡ್ಡ ಗಣಪತಿ ಸಂಭ್ರಮಾಚರಣೆ ಇದು ಎಂದರೆ ತಪ್ಪಾಗದು.
ಮುಂಬೈನಲ್ಲಿರುವ ನೀತಾ ಮತ್ತು ಮುಖೇಶ್ ಅಂಬಾನಿ ಅವರ ಮನೆಯಲ್ಲಿ ನಡೆದ ಗಣೇಶ ಚತುರ್ಥಿ ಆಚರಣೆಯಲ್ಲಿ, ಅಂಬಾನಿ ಕುಟುಂಬ ಸೆಪ್ಟೆಂಬರ್ 19 ರಂದು ಮನೆಯಲ್ಲಿ ಗಣೇಶನನ್ನು ಕೂರಿಸಿದ್ದರು. ದೇವರ ಆಶೀರ್ವಾದ ಪಡೆಯಲು ಬಾಲಿವುಡ್‌ನ ತಾರೆಯರು ಹಾಜರಾಗಿದ್ದರು. ಒಂದೂವರೆ ದಿನಗಳ ಕಾಲ ತಮ್ಮ ನಿವಾಸದಲ್ಲಿ ಗಣಪತಿ ಬಪ್ಪನಿಗೆ ಪೀಜೆ ನಡೆಸಿದ್ದರು. ಇದಾದ ಬಳಿಕ ವಿಸರ್ಜನೆ ಕಾರ್ಯಕ್ರಮ ನಡೆದಿದೆ.

ಗಣಪತಿ ವಿಸರ್ಜನೆಯಲ್ಲಿ ಸಮಾರಂಭದಲ್ಲಿ ಹಲವು ಬಾಲಿವುಡ್ ನಟ, ನಟಿಯರು ಭಾಗಿಯಾಗಿದ್ದರು. ಅದರಲ್ಲಿ ಜಾನ್ವಿ ಕಪೂರ್ ಕೂಡ ಇಬ್ಬರು. ತಮ್ಮ ಬಾಯ್‌ಫ್ರೆಂಡ್ ಜೊತೆಗೆ ಬಂದಿದ್ದ ಅವರು ಸಕತ್ ಸ್ಟೆಪ್ಟ್ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಗಣಪತಿ ವಿಸರ್ಜನೆಯಲ್ಲಿ ಶಿಖರ್ ಪಹಾರಿಯಾ ಜೊತೆ ಜಾನ್ವಿ ಕಪೂರ್
ಅಂಬಾನಿಯವರ ಗಣಪತಿ ವಿಸರ್ಜನೆಗೆ ಹಾಜರಾಗಿದ್ದ ತಾರೆಯರಲ್ಲಿ ನಟಿ ಜಾನ್ವಿ ಕಪೂರ್ ಕೂಡ ಸೇರಿದ್ದಾರೆ. ಆಕೆಯ ಬಾಯ್‌ಫ್ರೆಂಡ್ ಎಂದು ಹೇಳಲಾಗುತ್ತಿರುವ ಗೆಳೆಯ ಶಿಖರ್ ಪಹಾರಿಯಾ ಜೊತೆಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಗಣಪತಿ ಬಪ್ಪನ ವಿಸರ್ಜನೆಯನ್ನು ಅಂಟಿಲಿಯಾದಿಂದ ಬೃಹತ್ ಮೆರವಣಿಗೆ ಮೂಲಕ ಹೊರ ತರಲಾಗಿತ್ತು. ಇದರಲ್ಲಿ ಹಲವಾರು ಗಣ್ಯರು ಭಾಗವಹಿಸಿದ್ದರು.

ಈ ವೇಳೆ ಬಿಳಿ ಬಟ್ಟೆಯಲ್ಲಿ ಬಣ್ಣಗಳಿಂದ ಅಲಂಕಾರಗೊಂಡಿದ್ದ ನಟಿ ಜಾಹ್ನವಿ ಕಪೂರ್ ತನ್ನ ಗೆಳೆಯ ಶಿಖರ್ ಪಹಾರಿಯಾ ಅವರೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಿದ್ದ ರಸ್ತೆಯಲ್ಲಿ ಎರಡು ಕೈಗಳನ್ನು ಮೇಲೆತ್ತಿ ಪಕ್ಕಾ ಟಪಾಂಗುಚ್ಚಿ ಸ್ಟೆಪ್ಸ್ ಹಾಕಿದ್ದಾರೆ.
ಜಾನ್ವಿ ಕಪೂರ್
ನಟಿ ಜಾನ್ವಿ ಕಪೂರ್ ಕೊನೆಯದಾಗಿ ವರುಣ್ ಧವನ್ ಜೊತೆ 'ಬವಾಲ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ರಾಜ್‌ಕುಮಾರ್ ರಾವ್ ಅವರೊಂದಿಗೆ 'ಮಿಸ್ಟರ್ ಅಂಡ್ ಮಿಸಸ್ ಮಹಿ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು 'ದೇವರ' ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ಸೈಫ್ ಅಲಿ ಖಾನ್ ಜೊತೆಗೆ ತೆಲುಗಿಗೆ ಪಾದಾರ್ಪಣೆ ಮಾಡಲಿದ್ದಾರೆ.


Click it and Unblock the Notifications











