twitter
    For Quick Alerts
    ALLOW NOTIFICATIONS  
    For Daily Alerts

    ನಟಿ ಜಿಯಾ ಖಾನ್ ನಿಗೂಢ ಸಾವು: 8 ವರ್ಷದಿಂದ ಕೇಸ್ ಇನ್ನು ಜೀವಂತ

    |

    ಬಾಲಿವುಡ್ ನಟಿ ಜಿಯಾ ಖಾನ್ ಸಾವನ್ನಪ್ಪಿ 8 ವರ್ಷ ಕಳೆದಿದೆ. ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಆಕೆಯ ವಶ ಪತ್ತೆಯಾಗಿತ್ತು. ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಕುಟುಂಬಸ್ಥರು ಜಿಯಾ ಬಾಯ್‌ಫ್ರೆಂಡ್ ಮೇಲೆ ಅನುಮಾನ ವ್ಯಕ್ತಪಡಿಸಿದರು. ಈ ಕೇಸ್‌ನಲ್ಲಿ ಸೂರಜ್ ಪಾಂಚೋಲಿ ಜೈಲಿಗೆ ಸಹ ಹೋಗಿದ್ದರು. ಕೆಳಹಂತದ ನ್ಯಾಯಾಲಯ ಸೂರಜ್ ಪಾಂಚೋಲಿಗೆ ಈ ಕೇಸ್‌ನಿಂದ ಕ್ಲೀನ್ ಚಿಟ್ ಕೊಟ್ಟಿತ್ತು.

    ಇದರಿಂದ ತೀವ್ರವಾಗಿ ಬೇಸರ ಮಾಡಿಕೊಂಡ ಜಿಯಾ ಕುಟುಂಬದವರು ತನ್ನ ಮಗಳ ಕೇಸ್‌ನ್ನು ಸಿಬಿಐ ತನಿಖೆ ಮಾಡಲಿ ಎಂದು ಹೈ ಕೋರ್ಟ್ ಮೊರೆ ಹೋದರು. ಕುಟುಂಬದವರ ಮನವಿಯಂತೆ ಜಿಯಾ ಸಾವಿನ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಯಿತು. ಇದೀಗ, ಜಿಯಾ ಖಾನ್ ಸಾವಿನ ಕುರಿತು ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಕೈಗೆತ್ತಿಕೊಂಡಿದೆ ಎಂಬ ವಿಚಾರ ವರದಿಯಾಗಿದೆ.

    ನಟಿ ಜಿಯಾ ಖಾನ್ ಸಾವಿನ ಅಸಲಿ ರಹಸ್ಯ ಬಹಿರಂಗ

    ಇಷ್ಟು ವರ್ಷ ಜಿಯಾ ಸಾವಿನ ಸಂಬಂಧ ಮುಂಬೈ ಸೆಷನ್ಸ್ ಕೋರ್ಟ್ ವಿಚಾರಣೆ ಮಾಡ್ತಿತ್ತು. ಈಗ ಈ ಪ್ರಕರಣವನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ಕಳೆದ ಎಂಟು ವರ್ಷದಿಂದ ಜಿಯಾ ಖಾನ್ ಸಾವಿನ ಸಂಬಂಧ ನಡೆದ ಬೆಳವಣಿಗೆಗಳ ಸುತ್ತ ಒಂದು ನೋಟ. ಮುಂದೆ ಓದಿ...

    2013, ಜೂನ್ 3 ರಂದು ಸಾವು

    2013, ಜೂನ್ 3 ರಂದು ಸಾವು

    ಜೂನ್ 3, 2013 ರಂದು ರಾತ್ರಿ 11:00 ರಿಂದ 11:30ರ ಸಮಯದಲ್ಲಿ ನಟಿ ಜಿಯಾ ಖಾನ್ ಮುಂಬೈನ ಜುಹಾದಲ್ಲಿದ್ದ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ. ಆ ಸಮಯದಲ್ಲಿ ಆಕೆಯ ತಾಯಿ ಮತ್ತು ಸಹೋದರಿ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ನಂತರ ಬೈಕುಲ್ಲಾದ ಜೆಜೆ ಆಸ್ಪತ್ರೆಯಲ್ಲಿ ಜಿಯಾ ಖಾನ್ ಶವಪರೀಕ್ಷೆ ನಡೆಸಲಾಯಿತು. ಶವಪರೀಕ್ಷೆಯ ನಂತರ ಕುಟುಂಬದವರಿಗೆ ಶವ ಹಸ್ತಾಂತರಿಸಿದ್ದರು. ಜೂನ್ 5 ರಂದು ಅಂತ್ಯಕ್ರಿಯೆ ನಡೆಯಿತು.

    ಜಿಯಾ ಖಾನ್ ಸಾವಿನ ಪ್ರಕರಣದ ತನಿಖೆಯಲ್ಲಿ ಸಲ್ಮಾನ್ ಖಾನ್ ಪ್ರಭಾವ: ತಾಯಿ ಆರೋಪಜಿಯಾ ಖಾನ್ ಸಾವಿನ ಪ್ರಕರಣದ ತನಿಖೆಯಲ್ಲಿ ಸಲ್ಮಾನ್ ಖಾನ್ ಪ್ರಭಾವ: ತಾಯಿ ಆರೋಪ

    ಡೆತ್‌ನೋಟ್ ಬಹಿರಂಗ, ಸೂರಜ್ ಆರೋಪಿ

    ಡೆತ್‌ನೋಟ್ ಬಹಿರಂಗ, ಸೂರಜ್ ಆರೋಪಿ

    ಜಿಯಾ ಖಾನ್ ಸಾವಿನ ಬಳಿಕ ಆಕೆಯ ಮನೆಯಲ್ಲಿ ಆರು ಪುಟಗಳ ಡೆತ್‌ನೋಟ್ ಸಿಕ್ಕಿತು. ಜಿಯಾ ಸಹೋದರಿ ಆ ಡೆತ್ ನೋಟ್ ಬಗ್ಗೆ ಮಾಹಿತಿ ನೀಡಿದರು. ಜಿಯಾ ಖಾನ್ ಸಾವಿಗೆ ತನ್ನ ಗೆಳೆಯ ಸೂರಜ್ ಪಾಂಚೋಲಿ ಕಾರಣ ಎಂದು ಕುಟುಂಬದವರು ದೂರಿದರು. ಡೆತ್‌ನೋಟ್ ಆಧರಿಸಿ ಜೂನ್ 10 ರಂದು ಮುಂಬೈ ಪೊಲೀಸರು ಸೂರಜ್ ಪಾಂಚೋಲಿಯನ್ನು ಬಂಧಿಸಿದರು. ನಂತರ 2013 ಜುಲೈ 2 ರಂದು ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದರು.

    ಗರ್ಭಪಾತ ಮಾಡಿಸಿದ್ದರಾ ಸೂರಜ್?

    ಗರ್ಭಪಾತ ಮಾಡಿಸಿದ್ದರಾ ಸೂರಜ್?

    ನಟಿ ಜಿಯಾ ಖಾನ್ ಸಾಯುವ ಮುನ್ನವೂ ಗರ್ಭಿಣಿಯಾಗಿದ್ದರು ಎನ್ನುವ ವಿಚಾರ ವರದಿಯಾಗಿತ್ತು. ಹಲವು ಬಾರಿ ಸೂರಜ್‌ನಿಂದ ಗರ್ಭಿಣಿಯಾಗಿದ್ದೇ ಎಂದು ಜಿಯಾ ಖಾನ್ ಹೇಳಿಕೊಂಡಿದ್ದರು ಎಂಬ ಅಂಶವೂ ಪತ್ರದಲ್ಲಿತ್ತು. ಉದ್ದೇಶಪೂರ್ವಕವಾಗಿ ಜಿಯಾ ಖಾನ್ ಜೀವನ ಅಂತ್ಯಗೊಳಿಸಲು ಸೂರಜ್ ಪ್ಲಾನ್ ಮಾಡಿದ್ದ ಎಂದು ಜಿಯಾ ತಾಯಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

    ಸಿಬಿಐಗೆ ಆದೇಶಿಸಿದ ಮುಂಬೈ ಹೈ ಕೋರ್ಟ್

    ಸಿಬಿಐಗೆ ಆದೇಶಿಸಿದ ಮುಂಬೈ ಹೈ ಕೋರ್ಟ್

    ಜಿಯಾ ಖಾನ್ ಸಾವಿನ ಪ್ರಕರಣದಲ್ಲಿ ಸೂರಜ್ ಪಾಂಚೋಲಿಯ ಪಾತ್ರ ಇರುವ ಬಗ್ಗೆ ಮುಂಬೈ ಕೆಳಹಂತದ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ತೀವ್ರವಾಗಿ ಬೇಸರಕೊಂಡ ಜಿಯಾ ಖಾನ್ ತಾಯಿ, ಈ ಕೇಸ್‌ ಸಿಬಿಐಗೆ ವರ್ಗಾವಣೆ ಮಾಡಲು ಕೋರ್ಟ್ ಮೂಲಕ ಒತ್ತಾಯಿಸಿದರು. ಜಿಯಾ ಖಾನ್ ಸಾವನ್ನಪ್ಪಿದ ಒಂದು ವರ್ಷದ ನಂತರ (ಜುಲೈ, 2014) ಈ ಕೇಸ್ ಸಂಬಂಧ ಸಿಬಿಐ ತನಿಖಗೆ ಹೈ ಕೋರ್ಟ್ ಆದೇಶ ನೀಡಿತು.

    ಆತ್ಮಹತ್ಯೆ ಎಂದ ಸಿಬಿಐ

    ಆತ್ಮಹತ್ಯೆ ಎಂದ ಸಿಬಿಐ

    2016ರಲ್ಲಿ ಜಿಯಾ ಖಾನ್ ಸಾವು ಕೊಲೆಯಲ್ಲ, ಆತ್ಮಹತ್ಯೆ ಎಂದು ಸಿಬಿಐ ನಿರ್ಧರಿಸಿತು. ಸಿಬಿಐ ತನಿಖೆ ಪ್ರಕಾರ, ಜಿಯಾ ಖಾನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿ ನೀಡಿತು. ಜಿಯಾ ಖಾನ್ ಅವರ ತಾಯಿ ರಬಿಯಾ ಸ್ವತಂತ್ರವಾಗಿ ಬ್ರಿಟಿಷ್ ವಿಧಿವಿಜ್ಞಾನ ತಜ್ಞ ಜೇಸನ್ ಪೇನ್-ಜೇಮ್ಸ್ ಅವರನ್ನು ನೇಮಿಸಿಕೊಂಡಿದ್ದರು. 2016ರ ಸೆಪ್ಟೆಂಬರ್‌ ಅವರು ನೀಡಿದ ವರದಿ ಪ್ರಕಾರ, 'ಜಿಯಾ ಖಾನ್ ಕುತ್ತಿಗೆ ಮತ್ತು ಅವರ ಮುಖದ ಮೇಲೆ ಆಗಿರುವ ಗಾಯಗಳನ್ನು ಗಮನಿಸಿದರೆ ಇದು ಸಹಜ ಆತ್ಮಹತ್ಯೆಯಲ್ಲ' ಎಂದಿದ್ದರು.

    ಲೈಂಗಿಕ ದೌರ್ಜನ್ಯ ಕೇಸ್ ದಾಖಲು

    ಲೈಂಗಿಕ ದೌರ್ಜನ್ಯ ಕೇಸ್ ದಾಖಲು

    2017ರಲ್ಲಿ ಜಯಾ ಖಾನ್ ಸಾವಿನ ಸಂಬಂಧ ನಟ ಸೂರಜ್ ಪಾಂಚೋಲಿ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಬೆದರಿಕೆ ಆರೋಪದಡಿ ಕೇಸ್ ದಾಖಲಿಸಿಕೊಳ್ಳಲು ಕೋರ್ಟ್ ಮೂಲಕ ವಿನಂತಿಸಲಾಯಿತು. 2018ರಲ್ಲಿ ಮುಂಬೈನ ನ್ಯಾಯಾಲಯವು ಸೂರಜ್ ಪಂಚೋಲಿ ವಿರುದ್ಧ ಜಿಯಾ ಖಾನ್ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಹೊರಿಸಿತು. ಈ ಕೇಸ್ ತನಿಖೆಗೆ ಈಗ ಮುಂಬೈ ಸೆಷನ್ಸ್ ನ್ಯಾಯಾಲಯದಿಂದ ಸಿಬಿಐ ವಿಶೇಷ ಕೋರ್ಟ್‌ಗೆ ವರ್ಗಾವಣೆ ಆಗಿದೆ.

    ಜಿಯಾ ಖಾನ್‌ಗೆ ನ್ಯಾಯ ಸಿಗುತ್ತದೆ

    ಜಿಯಾ ಖಾನ್‌ಗೆ ನ್ಯಾಯ ಸಿಗುತ್ತದೆ

    ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಈ ಕೇಸ್ ವರ್ಗಾವಣೆ ಆದ ಬಳಿಕ ಪ್ರತಿಕ್ರಿಯಿಸಿರುವ ಜಿಯಾ ಖಾನ್ ತಾಯಿ ರಬಿಯಾ, ಸೆಷನ್ಸ್ ಕೋರ್ಟ್ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಜಿಯಾ ಯಾವುದೇ ತಪ್ಪು ಮಾಡಿಲ್ಲ. ಅವಳ ಸಾವಿಗೆ ನ್ಯಾಯಾ ಸಿಗುತ್ತದೆ ಎಂದಿದ್ದಾರೆ. ಸೂರಜ್ ಹಾಗೂ ಜಿಯಾ ಖಾನ್ ಸಂಬಂಧ ಚೆನ್ನಾಗಿರಲಿಲ್ಲ. ಜಿಯಾ ಗರ್ಭಿಣಿಯಾಗಿದ್ದರು. ಗರ್ಭಪಾತ ಸಹ ಮಾಡಿಸಲಾಗಿದೆ. ಇದರಿಂದ ತನ್ನ ಇಮೇಜ್ ಕಳೆದುಕೊಳ್ಳುವ ಭೀತಿಯಿಂದ ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂದು ತಾಯಿ ಆರೋಪಿಸಿದ್ದಾರೆ.

    ಬೇಗ ಈ ಕೇಸ್ ಮುಗಿಯುವ ಭರವಸೆ

    ಬೇಗ ಈ ಕೇಸ್ ಮುಗಿಯುವ ಭರವಸೆ

    ''ಸೆಷನ್ಸ್ ಕೋರ್ಟ್‌ನಿಂದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಆಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸೂರಜ್, ಈ ಕೇಸ್ ಆದಷ್ಟೂ ಬೇಗ ಮುಗಿಯುವ ಭರವಸೆ ನಮ್ಮ ಕುಟುಂಬಕ್ಕಿದೆ. ಈ ಮುಂಚೆಯೇ ಸಿಬಿಐ ಕೋರ್ಟ್‌ಗೆ ಬರಬೇಕಿತ್ತು. ನಾನು ಇಷ್ಟು ವರ್ಷದಿಂದ ಎದುರಿಸಿ ನೋವಿಗೆ ಬೇಗ ಪರಿಹಾರ ಸಿಗುವ ಸಾಧ್ಯತೆ ಇದೆ. ನಾನು ತಪ್ಪಿತಸ್ಥ ಎಂದಾದರೆ ದಂಡ ಸಿಗಲಿ, ಇಲ್ಲವಾದಲ್ಲಿ ಆರೋಪ ಮುಕ್ತನಾಗುವೆ'' ಎಂದು ಹೇಳಿದ್ದಾರೆ.

    25ನೇ ವರ್ಷದಲ್ಲಿ ನಿಗೂಢ ಸಾವು

    25ನೇ ವರ್ಷದಲ್ಲಿ ನಿಗೂಢ ಸಾವು

    ನಟಿ ಜಿಯಾ ಖಾನ್ ಸಾವನ್ನಪ್ಪಿದಾಗ ಆಕೆಗೆ ಕೇವಲ 25 ವರ್ಷ ವಯಸ್ಸು. ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ನಿಶ್ವಬ್ದ್' ಸಿನಿಮಾ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದರು. ನಂತರ ಅಮೀರ್ ಖಾನ್ ನಟನೆಯ 'ಗಜಿನಿ' ಹಾಗೂ 'ಹೌಸ್‌ಫುಲ್' ಚಿತ್ರದಲ್ಲಿ ನಟಿಸಿದ್ದರು.

    English summary
    Actor Jiah Khan death case: CBI court will now hear the case pending for 8 years.
    Monday, August 2, 2021, 16:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X