ಇಂದಿರಾ ಗಾಂಧಿ ಪಾತ್ರದಲ್ಲಿ ನಟಿ ಕಂಗನಾ ರನೌತ್: ಎಮರ್ಜೆನ್ಸಿ ರಿಲೀಸ್ ಡೇಟ್ ಫಿಕ್ಸ್
ನಾಲ್ಕು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ನಟಿ ಕಂಗನಾ ರನೌತ್ ಅವರ ಸಾಲು ಸಾಲು ಸಿನಿಮಾಗಳು ಸೋಲಿನ ಬೆನ್ನತ್ತಿವೆ. ಈಗೇನಿದ್ದರು ತಮ್ಮ ಬಹುನಿರೀಕ್ಷಿತ ಸಿನಿಮಾ 'ಎಮರ್ಜೆನ್ಸಿ' ಮೇಲೆ ಕಂಗನಾ ರನೌತ್ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ ಹಲವು ವರ್ಷಗಳಿಂದ ಕಷ್ಟ ಪಡುತ್ತಿದ್ದು, ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.
'ಬಾಲಿವುಡ್ ಕ್ವೀನ್' ಎಂದೇ ಖ್ಯಾತರಾದ ನಟಿ ಕಂಗನಾ ರನೌತ್ ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದರು. ರಾಮನೂರಿನಿಂದ ಬಂದ ಒಂದು ದಿನದ ನಂತರ ತಮ್ಮ ಮುಂಬರುವ ಚಿತ್ರ 'ಎಮರ್ಜೆನ್ಸಿ' ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ.

ಎಮರ್ಜೆನ್ಸಿ ರಿಲೀಸ್ ಡೇಟ್ ಫಿಕ್ಸ್
ಕಂಗನಾ ರನೌತ್, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿರುವ ಈ ರಾಜಕೀಯ ಡ್ರಾಮಾ ಜೂನ್ 14, 2024 ರಂದು ಥಿಯೇಟರರ್‌ಗಳಿಗೆ ಬರಲಿದೆ ಎಂದು ನಟಿ ಘೋಷಿಸಿದ್ದಾರೆ. ಜೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲ್ಮ್ಸ್ ಚಿತ್ರಕ್ಕೆ ಬಂಡವಾಳ ಹಾಕಿವೆ.
ಇದೊಂದು ದೊಡ್ಡ ಬಜೆಟ್ ಚಿತ್ರವಾಗಿದ್ದು, ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕರಾಳ ಘಟನೆ ಎಂದು ಕರೆಯಲಾಗುವ 'ಎಮರ್ಜೆನ್ಸಿ' ಸುತ್ತ ಸುತ್ತಲಿದೆ. ಮಂಗಳವಾರ ಇನ್‌ಸ್ಟಾಗ್ರಾಮ್‌ನಲ್ಲಿ ಕಂಗನಾ ರನೌತ್ 'ಎಮರ್ಜೆನ್ಸಿ' ಯ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಕಂಗನಾ ಅವರೇ ನಿರ್ದೇಶಿಸಿದ್ದು, ಕಥೆ ಕೂಡ ಅವರೇ ಬರೆದಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯಾದ ಕಂಗನಾ
ಸಿನಿಮಾದಲ್ಲಿ ಕಂಗನಾ ರನೌತ್ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರ ನಿರ್ವಹಿಸುತ್ತಿದ್ದು, ಪೋಸ್ಟರ್‌ಗಳಲ್ಲಿಯೂ ಅವರಂತೆಯೇ ಕಾಣಿಸಿಕೊಂಡಿದ್ದಾರೆ. ಹೊಸ ಪೋಸ್ಟ್‌ಗೆ "ಭಾರತದ ಕರಾಳ ಘೋಷಣೆಯ ಹಿಂದಿನ ಕಥೆಯನ್ನು ಅನ್ಲಾಕ್ ಮಾಡಿ. 14ನೇ ಜೂನ್, 2024 ರಂದು 'ಏಮರ್ಜೆನ್ಸಿ'ಯನ್ನು ಘೋಷಿಸಲಾಗುತ್ತಿದೆ. ಅತ್ಯಂತ ಭಯಭೀತ ಮತ್ತು ಉಗ್ರ ಪ್ರಧಾನಿ ಇಂದಿರಾಗಾಂಧಿ ಚಿತ್ರಮಂದಿರಗಳಲ್ಲಿ ಗುಡುಗಿದಾಗ ಇತಿಹಾಸವು ಜೀವಂತ ಸಾಕ್ಷಿಯಾಗಲಿದೆ" ಎಂದು ಶೀರ್ಷಿಕೆ ನೀಡಿದ್ದಾರೆ.

'ಎಮರ್ಜೆನ್ಸಿ' ಬಗ್ಗೆ ಕಂಗನಾ ರನೌತ್
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ನಟಿ ಕಂಗನಾ ರನೌತ್ ತಮ್ಮ ಹೇಳಿಕೆಯಲ್ಲಿ, "ಎಮರ್ಜೆನ್ಸಿ ನನ್ನ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಮತ್ತು ಮಣಿಕರ್ಣಿಕಾ ನಂತರ ನನ್ನ ಎರಡನೇ ನಿರ್ದೇಶನದ ಸಿನಿಮಾ. ಈ ದೊಡ್ಡ ಬಜೆಟ್, ಗ್ರ್ಯಾಂಡ್ ಅವಧಿಯ ಸಿನಿಮಾದಲ್ಲಿ ನಾವು ಅತ್ಯುತ್ತಮ ಭಾರತೀಯ ಮತ್ತು ಅಂತರರಾಷ್ಟ್ರೀಯ ಪ್ರತಿಭೆಗಳನ್ನು ಒಟ್ಟುಗೂಡಿಸಿದ್ದೇವೆ" ಎಂದಿದ್ದಾರೆ.
ಎಮರ್ಜೆನ್ಸಿ ಚಿತ್ರವನ್ನು ಈ ಹಿಂದೆ ನವೆಂಬರ್ 24, 2023 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಕಂಗನಾ ಅವರ ಶೆಡ್ಯೂಲ್‌ನಿಂದಾಗಿ ವೇಳಾಪಟ್ಟಿಯನ್ನು ಬದಲಾಯಿಸಲಾಗಿತ್ತು. ಇನ್ನು, ಚಿತ್ರದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಕೂಡ ಇದ್ದಾರೆ.
ಝೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲ್ಮ್ಸ್ ನಿರ್ಮಿಸಿರುವ 'ಎಮರ್ಜಿನ್ಸಿ' ಸಿನಿಮಾ ಮೆಗಾ ಬಜೆಟ್ ಚಿತ್ರಣವಾಗಿದೆ. ರಿತೇಶ್ ಶಾ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಈ ಚಿತ್ರವು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜೀವನದ ಸುತ್ತ ಸುತ್ತುತ್ತದೆ. ಎಮರ್ಜೆನ್ಸಿಗೆ ಮೊದಲ ಬಾರಿಗೆ ಕಂಗನಾ ರನೌತ್ ಒಬ್ಬರೇ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











