'ಎಮರ್ಜೆನ್ಸಿ' ಸಿನಿಮಾದಲ್ಲಿ ಕಾಂಗ್ರೆಸ್ ಪಕ್ಷವನ್ನು ಕೆಟ್ಟದಾಗಿ ತೋರಿಸಲಾಗಿದೆಯೇ?: ಕಂಗನಾ ಹೇಳಿದ್ದೇನು?
ಬಿಜೆಪಿ ಪರವಾಗಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನಟಿ ಕಂಗನಾ ರನೌತ್ ತಮ್ಮ 'ಎಮರ್ಜೆನ್ಸಿ' ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಈ ಸಿನಿಮಾ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಕಾಂಗ್ರೆಸ್ ಪಕ್ಷವನ್ನು ಕೆಟ್ಟದಾಗಿ ತೋರಿಸಲು ಪ್ರಯತ್ನಿಸಲಾಗಿದೆ ಎಂಬ ವದಂತಿಗಳು ಹಬ್ಬಿವೆ.
ಎಮರ್ಜೆನ್ಸಿ ಸಿನಿಮಾದಲ್ಲಿ ತುರ್ತು ಪರಿಸ್ಥಿತಿ ಸಂದರ್ಭ ಮತ್ತು ಇಂದಿರಾ ಗಾಂಧಿ ಅವರ ಸುತ್ತಲು ಸುತ್ತುತ್ತಿದೆ. ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಟ್ಟಾ ಬೆಂಬಲಿಗರಾಗಿರುವ ಕಂಗನಾ ಚಿತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕೆಟ್ಟದಾಗಿಯೇ ತೋರಿಸಿರುತ್ತಾರೆ. ಇದನ್ನು ಚುನಾವಣಾ ಕಾರಣಕ್ಕೆ 2024 ರ ಲೋಕಸಭಾ ಚುನಾವಣೆಯ ಹೊತ್ತಿಗೆ ಬಿಡುಗಡೆ ಮಾಡಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇದರ ಬೆನ್ನಲ್ಲೇ ನಟಿ ಕಂಗನಾ ರನೌತ್ ಪ್ರತಿಕ್ರಿಯಿಸಿದ್ದಾರೆ.

ಇದು ಇಂದಿರಾಗಾಂಧಿ ಅವರ ಜೀವನಾಧಾರಿತ ಚಿತ್ರವಲ್ಲ!
ಬಿಜೆಪಿಯ ಕಟ್ಟಾ ಬೆಂಬಲಿಗರಾಗಿರುವ ಅವರು, ಈ ಚಿತ್ರ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜೀವನಾಧಾರಿತ ಚಿತ್ರವಲ್ಲ, ಒಂದು ಅವಧಿಯ ನಾಟಕ. ತನ್ನ ಚಿತ್ರದ ಮೂಲಕ ಯಾವುದೇ ರಾಜಕೀಯ ಪಕ್ಷಕ್ಕೆ ಒಲವು ತೋರಿಲ್ಲ ಎಂದು ಕಂಗನಾ ರನೌತ್ 'ಟೈಮ್ಸ್ ನೌ ನವಭಾರತ'ದ ಸಂದರ್ಶನದಲ್ಲಿ ತಿಳಿಸಿದ್ದಾರೆ.
"ನೀವು ಒಬ್ಬ ವ್ಯಕ್ತಿಯನ್ನು ತಿಳಿದುಕೊಳ್ಳಲು ಬಯಸಿದರೆ, ಅವರ ಕೆಲಸಗಳ ಬಗ್ಗೆ ತಿಳಿಯಬೇಕು. ಆದರೆ, ಅವರ ಮಾತುಗಳನ್ನು ಅಲ್ಲ. ನೀವು ಸಿನಿಮಾ ನೋಡಿ. ಸಿನಿಮಾ ರಿಲೀಸ್ ಆಗುತ್ತೆ. ಆದರೆ, ಲೋಕಸಭಾ ಚುನಾವಣೆ ಆಸುಪಾಸಿನಲ್ಲಿ ರಿಲೀಸ್ ಆಗುತ್ತೆ ಅಂತ ಖಚಿತವಾಗಿಲ್ಲ. ಚುನಾವಣೆಗೂ ಈ ಸಿನಿಮಾಕ್ಕೂ, ಯಾವುದೇ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ" ಎಂದು ಹೇಳಿದ್ದಾರೆ.
" ಸಿನಿಮಾ ಮೂರು ಬಾರಿ ಚುನಾಯಿತರಾಗಿರುವ ನಮ್ಮ ಪ್ರಧಾನಿಯವರಿಗೆ ಸಲ್ಲಿಸುವ ಗೌರವ ಎಂದು ನಾನು ಹೇಳಲು ಬಯಸುತ್ತೇನೆ. ಇದು ಇಂದಿರಾ ಗಾಂಧೀ ಅವರ ಜೀವನದ ಕಥೆ. ಇದರಲ್ಲಿ ಅವರು ಮಾಡಿದ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು ಇರಲಿವೆ. ನಾನು ಹೇಳಿದಂತೆ, ಮಹಿಳೆ ತನ್ನ ಸ್ವಂತ ಹಕ್ಕಿನ ಪ್ರತಿನಿಧಿ. ಇದರ ನಡುವೆ ನಾನು ಈಗಾಗಲೇ ರಾಜಕೀಯ ಪಕ್ಷದ ಬಗ್ಗೆ ಒಲವು ತೋರಿದ್ದೇನೆ ಎಂದು ಭಾವಿಸುವುದು ತಪ್ಪು ಗ್ರಹಿಕೆ" ಎಂದು ಕಂಗನಾ ರನೌತ್ ತಿಳಿಸಿದ್ದಾರೆ.

ಎಮರ್ಜೆನ್ಸಿ ಸಿನಿಮಾ
ಎಮರ್ಜೆನ್ಸಿ ಸಿನಿಮಾ ಬಾಲಿವುಡ್ ನಟಿ ಕಂಗನಾ ರನೌತ್ ಅವರ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. ಚಿತ್ರದಲ್ಲಿ ಅವರು ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಅನುಪಮ್ ಖೇರ್, ಮಿಲಿಂದ್ ಸೋಮಣ್ಣ, ಮಹಿಮಾ ಚೌಧರಿ, ದಿವಂಗತ ಸತೀಶ್ ಕೌಶಿಕ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾದ ನಿರ್ಮಾಣದಲ್ಲೂ ಕಂಗನಾ ರನೌತ್ ಪಾಲುದಾರಿಕೆ ಹೊಂದಿದ್ದಾರೆ.
ಢಕಾಡ್ ಖ್ಯಾತಿಯ ರಿತೇಶ್ ಶಾ ಬರೆದಿರುವ ಈ ಚಿತ್ರವನ್ನು 2021 ರಲ್ಲಿ ಘೋಷಿಸಲಾಯಿತು. ಈ ಹಿಂದೆ, ಕಂಗನಾ ರನೌತ್ ಪ್ರಧಾನ ಮಂತ್ರಿಯಾಗಿ ನಟಿಸಿರುವ ಟೀಸರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಇಂದಿರಾ ಗಾಂಧಿಯಾಗಿ ಕಂಗನಾ ಅವರ ಲುಕ್ ಭರ್ಜರಿ ಮೆಚ್ಚುಗೆ ಪಡೆದಿತ್ತು. ಚಿತ್ರವು ನವೆಂಬರ್ 24, 2023 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಆದರೆ, ಲೋಕಸಭಾ ಚುನಾವಣೆ ಹತ್ತಿರದಲ್ಲಿರುವಾಗ ಬಿಡುಗಡೆಯಾಗುತ್ತದೆ ಎಂಬ ವದಂತಿಯಿದೆ.


Click it and Unblock the Notifications











