Dasara 2023: ರಾವಣ ದಹನ ಮಾಡಿ ಇತಿಹಾಸ ಬರೆಯಲಿದ್ದಾರೆ ನಟಿ ಕಂಗನಾ ರನೌತ್!

ಈಗಾಗಲೇ ಹಲವಾರು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಮಾಡಿಕೊಂಡಿರುವ ನಟಿ ಕಂಗನಾ ರನೌತ್, ಈಗ ಮತ್ತೊಂದು ಇತಿಹಾಸ ಬರೆಯಲಿದ್ದಾರೆ. ಮಂಗಳವಾರ (ಅಕ್ಟೋಬರ್​ 24) ದಸರಾ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಪ್ರಸಿದ್ಧ ಲವ್ ಕುಶ ರಾಮಲೀಲಾದಲ್ಲಿ ನಟಿ ಕಂಗನಾ ರನೌತ್ ರಾವಣ ದಹನ ಮಾಡಲಿದ್ದಾರೆ.

ರಾಮಲೀಲಾದಲ್ಲಿ ರಾವಣ ದಹನ ಮಾಡಲಿರುವ ಕಂಗನಾ ರನೌತ್

ದೆಹಲಿಯ ಕೆಂಪು ಕೋಟೆಯಲ್ಲಿ ವಾರ್ಷಿಕವಾಗಿ ನಡೆಯುವ ಈ ಕಾರ್ಯಕ್ರಮದ 50 ವರ್ಷಗಳ ಇತಿಹಾಸದಲ್ಲಿ, ಮಹಿಳೆಯೊಬ್ಬರು ರಾವಣನ ಪ್ರತಿಕೃತಿಯನ್ನು ದಹನ ಮಾಡುತ್ತಿರುವುದು ಇದೇ ಮೊದಲು ಎಂದು ಲವ್ ಕುಶ ರಾಮಲೀಲಾ ಸಮಿತಿಯ ಅಧ್ಯಕ್ಷ ಅರ್ಜುನ್ ಸಿಂಗ್ ಹೇಳಿದ್ದಾರೆ.

Actor Kangana Ranaut to burn Ravans effigy at ramleela

ಕಳೆದ ತಿಂಗಳು ಸಂಸತ್ತು ಅಂಗೀಕರಿಸಿದ ಮಹಿಳಾ ಮೀಸಲಾತಿ ಮಸೂದೆಗೆ ಒಪ್ಪಿಗೆ ನೀಡುವ ಮೂಲಕ ಲವ್ ಕುಶ ರಾಮಲೀಲಾ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅರ್ಜುನ್ ಸಿಂಗ್ ಹೇಳಿದ್ದಾರೆ. "ಅವರು ಚಲನಚಿತ್ರ ಕಲಾವಿದರಾಗಿರಲಿ ಅಥವಾ ರಾಜಕಾರಣಿಯಾಗಿರಲಿ, ಪ್ರತಿ ವರ್ಷ ನಾವು ನಮ್ಮ ಕಾರ್ಯಕ್ರಮಕ್ಕೆ ಸೆಲಬ್ರಿಟಿಯನ್ನು ಆಹ್ವಾನಿಸುತ್ತೇವೆ. ಈ ಹಿಂದೆ, ನಾವು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಿದ್ದೇವೆ. ಚಲನಚಿತ್ರ ನಟರಾದ ಅಜಯ್ ದೇವಗನ್ ಮತ್ತು ಜಾನ್ ಅಬ್ರಹಾಂ ಕೂಡ ಇಲ್ಲಿ ರಾವಣ ದಹನ ಮಾಡಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.

"ಕಳೆದ ವರ್ಷ ನಟ ಪ್ರಭಾಸ್ ರಾವಣ ದಹನ ಮಾಡಿದ್ದರು. ಈ ವರ್ಷ ನಟಿ ಕಂಗನಾ ರನೌತ್ ಬರಲಿದ್ದಾರೆ. ನಮ್ಮ ಕಾರ್ಯಕ್ರಮದಲ್ಲಿ 50 ವರ್ಷಗಳಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ರಾವಣ ದಹನ ಮಾಡಲಿದ್ದಾರೆ " ಎಂದು ಮಾಹಿತಿ ನೀಡಿದ್ದಾರೆ.

Actor Kangana Ranaut to burn Ravans effigy at ramleela

"ಮಹಿಳೆಯೂ ರಾವಣ ದಹನ ಮಾಡಬಹುದು"

ತಮ್ಮ ಸಮಿತಿ ಬಗ್ಗೆ ಮಾತನಾಡಿರುವ ಅವರು, "ಲವ್ ಕುಶ ರಾಮಲೀಲಾ ಸಮಿತಿಯು ಸಹ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಬಯಸುತ್ತದೆ. ಇಂದು ಜೀವನದ ಪ್ರತಿಯೊಂದು ರಂಗದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತಿದೆ. ಆದರೆ, ಇನ್ನೂ ಬಹಳ ದೂರ ಸಾಗಬೇಕಾಗಿದೆ. ಮಸೂದೆಯು ದೇಶ ಮತ್ತು ಸಮಾಜದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಸಮಾನತೆಗೆ ನಾಂದಿ ಹಾಡುತ್ತದೆ. ಸಂಕುಚಿತ ಮನೋಭಾವ ತೊಲಗಬೇಕಿದೆ" ಎಂದಿದ್ದಾರೆ.

"ಈಗ, ಮಹಿಳೆ ರಾವಣನ ದಹನ ಮಾಡಬಹುದು, ಕೆಟ್ಟದ್ದನ್ನು ಸಹ ನಾಶ ಮಾಡಬಹುದು. ಮಹಿಳೆಯರಿಗೂ ಈ ಹಕ್ಕನ್ನು ನೀಡಬೇಕು. ಅದಕ್ಕಾಗಿಯೇ ನಾವು ಕಂಗನಾ ಅವರನ್ನು ಆಯ್ಕೆ ಮಾಡಿದ್ದೇವೆ" ಎಂದು ಅರ್ಜುನ್ ಸಿಂಗ್ ಹೇಳಿದ್ದಾರೆ.

ನಟಿ ಕಂಗನಾ ರನೌತ್ ಕೂಡ, ತಾವು ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. "ನಮಸ್ಕಾರ ಗೆಳೆಯರೇ, ಅಕ್ಟೋಬರ್​ 24 ರಂದು ರಾವಣ ದಹನ ಮಾಡಲು, ಕೆಟ್ಟದ್ದರ ಮೇಲೆ ಒಳ್ಳೆಯದರ ಗೆಲುವು ಸ್ಥಾಪಿಸಲು ನಾನು ಬರುತ್ತಿದ್ದೇನೆ. ನೀವೂ ಬನ್ನಿ. ಹಾಗೆ, ಅಕ್ಟೋಬರ್​ 27ರಂದು ನನ್ನ ತೇಜಸ್​ ಸಿನಿಮಾ ರಿಲೀಸ್​ ಆಗಲಿದೆ. ಭಾರತೀಯ ವಾಯುಸೇನೆಯ ಕಥೆಯನ್ನು ನೋಡಲು ಮರೆಯದಿರಿ. ಜೈ ಶ್ರೀರಾಮ್​" ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಕಂಗನಾ ರನೌತ್ ಪ್ರಸ್ತುತ ತಮ್ಮ "ತೇಜಸ್" ಚಿತ್ರದ ಪ್ರಚಾರದಲ್ಲಿದ್ದಾರೆ. ಶುಕ್ರವಾರ (ಅಕ್ಟೋಬರ್​ 27) ಬಿಡುಗಡೆಯಾಗಲಿದೆ. ಸರ್ವೇಶ್ ಮೇವಾರಾ ಅವರು ಬರೆದು ನಿರ್ದೇಶಿಸಿದ ಚಲನಚಿತ್ರದಲ್ಲಿ ನಟಿ ಭಾರತೀಯ ವಾಯುಪಡೆಯ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Actor Kangana Ranaut to perform Ravan Dahan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X