ಹೊಸ ಕಾರು ಖರೀದಿಸಿದ ಕಾರ್ತಿಕ್ ಆರ್ಯನ್: ಬೆಲೆ ಎಷ್ಟು ಗೊತ್ತೆ?
ತೆಲುಗಿನ 'ಅಲಾ ವೈಕುಂಟಪುರಂಲೊ' ಸಿನಿಮಾದ ಹಿಂದಿ ರೀಮೇಕ್‌ನಲ್ಲಿ ನಟಿಸಲು ಸಜ್ಜಾಗಿರುವ ನಟ ಕಾರ್ತಿಕ್ ಆರ್ಯನ್‌ಗೆ ಕೆಲವು ದಿನಗಳ ಹಿಂದಷ್ಟೆ ಕೊರೊನಾ ಪಾಸಿಟಿವ್ ಆಗಿತ್ತು. ಆದರೆ ಅದರಿಂದ ಗುಣಮುಖರಾಗಿದ್ದಾರೆ ಕಾರ್ತಿಕ್.
ಕೊರೊನಾ ನೆಗೆಟಿವ್ ವರದಿ ಬರುತ್ತಿದ್ದಂತೆ ಕ್ವಾರಂಟೈನ್‌ನಿಂದ ಹೊರಗೆ ಬಂದಿರುವ ಕಾರ್ತಿಕ್ ಆರ್ಯನ್ ಬಹು ದುಬಾರಿ ಕಾರೊಂದನ್ನು ಖರೀದಿಸಿದ್ದಾರೆ. ಈ ಕಾರಿನ ಬೆಲೆ ಕೆಲವು ಕೋಟಿಗಳೇ ಇದೆ.
ಹೊಸ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಕಾರ್ತಿಕ್ ಆರ್ಯನ್ ಖರೀದಿಸಿದ್ದಾರೆ. ಜನರಿಗೆ ಖರೀದಿಗೆ ಲಭ್ಯವಿರುವ ಎಸ್‌ಯುವಿ ಮಾದರಿ ಕಾರುಗಳಲ್ಲಿ ಅತ್ಯಂತ ವೇಗದ ಎಸ್‌ಯುವಿ ಕಾರು ಎಂಬ ಖ್ಯಾತಿ ಈ ಲ್ಯಾಂಬೋರ್ಗಿನಿ ಉರುಸ್ ಕಾರಿನದ್ದು.

ಗಂಟೆಗೆ 305 ಕಿ.ಮೀ ವೇಗವಾಗಿ ಓಡಬಲ್ಲ ಈ ಕಾರಿನ ಬೆಲೆ 4.50 ಕೋಟಿ ರು. ಭಾರಿ ದುಬಾರಿ ಬೆಲೆಯನ್ನೇ ತೆತ್ತು ಕಾರು ಖರೀದಿಸಿದ್ದಾರೆ ಕಾರ್ತಿಕ್ ಆರ್ಯನ್. ಬಾಲಿವುಡ್‌ನಲ್ಲಿ ನಿಧಾನಕ್ಕೆ ಯಶಸ್ಸು ಗಳಿಸುತ್ತಿರುವ ಕಾರ್ತಿಕ್‌ಗೆ ಇದು ಬಹಳ ದೊಡ್ಡ ಮೊತ್ತವೇನಲ್ಲ ಬಿಡಿ.
ಕಾರಿನ ಪಕ್ಕ ನಿಂತು ಫೋಸು ನೀಡಿರುವ ಕಾರ್ತಿಕ್ ಆರ್ಯನ್, 'ಕಾರನ್ನೇನೋ ಖರೀದಿಸಿ ಬಿಟ್ಟೆ, ಆದರೆ ದುಬಾರಿ ವಸ್ತುಗಳು ನನ್ನ ಯೋಗ್ಯತೆಗಲ್ಲ ಎನಿಸುತ್ತದೆ' ಎಂದು ಕ್ಯಾಪ್ಷನ್ ಹಾಕಿದ್ದಾರೆ ಕಾರ್ತಿಕ್.
ಕಾರ್ತಿಕ್ ಆರ್ಯನ್ ಬಳಿ ಈ ಮುಂಚೆ ಮಿನಿ ಕೂಪರ್ ಎಸ್, ಬಿಎಂಡಬ್ಲು 520 ಡಿ, ಸ್ಕೋಡಾ ಕೋಡಿಯೇಕ್ ಇನ್ನೂ ಕೆಲವು ಕಾರುಗಳಿದ್ದರು. ಆದರೆ ಈಗ ಖರೀದಿಸಿರುವ ಲ್ಯಾಂಬೊರ್ಗಿನಿ ಉರುಸ್ ಕಾರು ಕಾರ್ತಿಕ್ ಬಳಿ ಇರುವ ಅತ್ಯಂತ ದುಬಾರಿ ಕಾರಾಗಿದೆ.
Recommended Video
ಕಾರ್ತಿಕ್ ಆರ್ಯನ್ ತೆಲುಗಿನ 'ಅಲಾ ವೈಕುಂಟಪುರಂಲೊ' ಸಿನಿಮಾದ ರೀಮೇಕ್‌ನಲ್ಲಿ ನಟಿಸಲಿದ್ದಾರೆ. ಅದರ ಹೊರತಾಗಿ, ಬೂಲ್ ಬುಲಯ್ಯ 2, ದೋಸ್ತಾನಾ 2, ಧಮಾಕಾ ಸಿನಿಮಾಗಳಲ್ಲಿಯೂ ನಟಿಸಲಿದ್ದಾರೆ ಕಾರ್ತಿಕ್


Click it and Unblock the Notifications











