For Quick Alerts
  ALLOW NOTIFICATIONS  
  For Daily Alerts

  ಹಿಂದಿಗೆ ಕಾಲಿಟ್ಟ ಕಿಶೋರ್; ಚಿತ್ರತಂಡದವರು ಬಹುತೇಕ ಬೆಂಗಳೂರಿನವರೇ!

  |

  ಮೂಲತಃ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕಿಶೋರ್ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಚಿತ್ರಗಳಲ್ಲಿಯೂ ಅಭಿನಯಿಸಿ ಜೈ ಎನಿಸಿಕೊಂಡಿದ್ದರು. 2004ರಲ್ಲಿ ಬಿಡುಗಡೆಗೊಂಡಿದ್ದ ಶ್ರೀಮುರಳಿ ಅಭಿನಯದ ಕಂಠಿ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿದ್ದ ಕಿಶೋರ್ ಶಿವ ರಾಜ್‌ಕುಮಾರ್‌ ಅಭಿನಯದ ರಾಕ್ಷಸ ಚಿತ್ರದಲ್ಲಿ ಅಭಿನಯಿಸಿದ್ದರು ಹಾಗೂ ತಮ್ಮ ಮೂರನೇ ಸಿನಿಮಾ ಆಕಾಶ್‌ನಲ್ಲಿ ಕಿಶೋರ್ ಹೆಚ್ಚಾಗಿ ಗುರುತಿಸಿಕೊಂಡರು.

  ಹೀಗೆ ಕನ್ನಡದ ಒಂದೊಳ್ಳೆ ಖಳನಾಯಕನಾದ ಕಿಶೋರ್ ಬಿರುಗಾಳಿ ಹಾಗೂ ದುನಿಯಾ ಚಿತ್ರಗಳಲ್ಲಿನ ತಮ್ಮ ನಟನೆಯಿಂದಾಗಿ ಇಂದೂ ಕನ್ನಡ ಸಿನಿ ರಸಿಕರ ಮನದಲ್ಲಿದ್ದಾರೆ. ಈ ಮಧ್ಯೆ ಹೆಚ್ಚಾಗಿ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದ ಕಿಶೋರ್ ಸಾಲು ಸಾಲು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ಮಲಯಾಳಂ ಮತ್ತು ತೆಲುಗು ಚಿತ್ರಗಳಿಗೂ ಕಿಶೋರ್ ಬಣ್ಣ ಹಚ್ಚಿದ್ದಾರೆ.

  ಹೀಗೆ ದಕ್ಷಿಣ ಭಾರತ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ್ದ ಕಿಶೋರ್ ಇದೀಗ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಹಿಂದಿಯ ರೆಡ್ ಕಾಲರ್ ಎಂಬ ಚಿತ್ರದಲ್ಲಿ ನಟ ಕಿಶೋರ್ ಅಭಿನಯಿಸುತ್ತಿದ್ದಾರೆ. ಶ್ರೀ ಮುರಳಿ ಹಾಗೂ ರಚಿತಾ ರಾಮ್ ಅಭಿಯನದ ರಥಾವರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ರೆಡ್ ಕಾಲರ್ ಚಿತ್ರವನ್ನು ನಿರ್ದೇಶಿಸಿದ್ದು, ರಥಾವರ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಧರ್ಮ ವಿಶ್ ರೆಡ್ ಕಾಲರ್ ಕತೆಯನ್ನು ಬರೆದಿದ್ದಾರೆ.

  ಇನ್ನು ಕಿಶೋರ್ ಅವರ ಕಲೆ ಸ್ನೇಹಿತರ ಗುಂಪು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಿತ್ರತಂಡ ಬೆಂಗಳೂರಿನವರಿಂದ ಕೂಡಿದ್ದು, ದೇಶದ ವಿವಿಧ ಭಾಗದ ಕಲಾವಿದರು ಚಿತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ.

  ಕಳೆದ ವರ್ಷ ಬಯ್ ಒನ್ ಗೆಟ್ ಒನ್ ಫ್ರೀ ಎಂಬ ಕನ್ನಡ ಚಿತ್ರದಲ್ಲಿ ಕಡೆಯದಾಗಿ ಅಭಿನಯಿಸಿದ್ದ ಕಿಶೋರ್ ಸದ್ಯ ಇದೇ ತಿಂಗಳ 30 ರಂದು ಬಿಡುಗಡೆಯಾಗಲಿರುವ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾದಲ್ಲಿ ಅರಣ್ಯ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  ಮಣಿರತ್ನಂ ನಿರ್ದೇಶನದ ಬಹು ನಿರೀಕ್ಷಿತ ತಮಿಳು ಚಿತ್ರ 'ಪೊನ್ನಿಯಿನ್ ಸೆಲ್ವನ್ ಪಾರ್ಟ್ 1'ನಲ್ಲಿಯೂ ಕಿಶೋರ್ ಅಭಿನಯಿಸಿದ್ದು, ಈ ಚಿತ್ರವೂ ಇದೇ ತಿಂಗಳ 30ಕ್ಕೆ ತೆರೆಗೆ ಅಪ್ಪಳಿಸಲಿದೆ.

  English summary
  Kannada actor Kishore is debuting into Bollywood with Red Collar movie
  Saturday, September 24, 2022, 17:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X