twitter
    For Quick Alerts
    ALLOW NOTIFICATIONS  
    For Daily Alerts

    ಜನಿವಾರ ಧರಿಸುವ ಮನೆಯಲ್ಲಿ ಶಿಲುಬೆ ಯಾಕೆ? ಗರಂ ಆದ ನೆಟ್ಟಿಗರಿಗೆ ಮಾಧವನ್ ಖಡಕ್ ಉತ್ತರ

    |

    ಬಹುಭಾಷ ನಟ ಮಾಧವನ್ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಕಾರಣ ಇತ್ತೀಚಿಗೆ ಮಾಧವನ್ ಮಗ ಮತ್ತು ತಂದೆಯ ಜೊತೆ ಕುಳಿತು ಉಪಕರ್ಮ ಆಚರಿಸಿಕೊಳ್ಳುತ್ತಿರುವ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

    2 ವರ್ಷಗಳ ಬಳಿಕ ಈ ಪಾತ್ರಕ್ಕಾಗಿ ಶೇವ್ ಮಾಡಿದ ಮಾಧವನ್ 2 ವರ್ಷಗಳ ಬಳಿಕ ಈ ಪಾತ್ರಕ್ಕಾಗಿ ಶೇವ್ ಮಾಡಿದ ಮಾಧವನ್

    ಜೊತೆಗ ರಕ್ಷಾಬಂಧನ ಆಚರಿಸಿಕೊಳ್ಳುವ ಫೊಟೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಅವರು ಶೇರ್ ಮಾಡಿರುವ ಫೊಟೋದ ಹಿಂದೆ ಏಸುವಿನ ಶಿಲುಬೆ ಕಾಣಿಸುತ್ತಿದೆ. ಹಾಗಾಗಿ ಜನಿವಾರ ಧರಿಸುವ ನಿಮ್ಮ ಮನೆಯ ದೇವರ ಮನೆಯಲ್ಲಿ ಏಸುವಿನ ಶಿಲುಬೆ ಯಾಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಹಿಂಬಾಲಕರ ಪ್ರಶ್ನೆಗೆ ಮಾಧವನ್ ಖಡಕ್ ಉತ್ತರ ನೀಡಿದ್ದಾರೆ.

    ಮಾಧವನ್ ಗೆ ನೆಟ್ಟಿಗರ ಪ್ರಶ್ನೆ

    ಮಾಧವನ್ ಗೆ ನೆಟ್ಟಿಗರ ಪ್ರಶ್ನೆ

    "ನೀವು ಬ್ರಾಹ್ಮಣರು. ಹಿಂದೀ ಎಂದ ಮೇಲೆ ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ಏಸುವಿನ ಶಿಲುಬೆಯಾಕಿದೆ. ಚರ್ಚ್ ಗಳಲ್ಲಿ ಹಿಂದೂ ದೇವರ ಮೂರ್ತಿಯಾಗಲಿ, ಫೊಟೋ ಆಗಲಿ ಇರುತ್ತದೆಯಾ. ನಿಮ್ಮ ಮೇಲಿನ ಗೌರವ ಕಳೆದುಹೋಯಿತು. ನಕಲಿ ಮುಖವನ್ನು ಯಾಕೆ ತೋರಿಸುತ್ತೀರಿ" ಎಂದು ನೆಟ್ಟಿಗರು ರೊಚ್ಚಿಗೆದ್ದಿದ್ದರು.

    ನೆಟ್ಟಿಗರ ಪ್ರಶ್ನೆಗೆ ಮಾಧವನ್ ಖಡಕ್ ಉತ್ತರ

    ನೆಟ್ಟಿಗರ ಪ್ರಶ್ನೆಗೆ ಮಾಧವನ್ ಖಡಕ್ ಉತ್ತರ

    "ನಿಮ್ಮಂತವರಿಂದ ಗೌರವ ತೆಗೆದುಕೊಳ್ಳಬೇಕೆಂದು ನನಗನಿಸುವುದಿಲ್ಲ. ನನ್ನ ಮನೆಯಲ್ಲಿರುವವರು ಎಲ್ಲಾ ಧರ್ಮದ ಮಲೆ ನಂಬಿಕೆಯನ್ನು ಇಟ್ಟವರು. ಎಲ್ಲಾ ಜಾತಿ ಧರ್ಮದ ಮೇಲೆ ಗೌರವವಿದೆ. ನಿಮ್ಮ ರೋಗಗ್ರಸ್ತ ಮನಸ್ಥಿಗೆ ಶೀಘ್ರವೇ ಪರಿಹಾರ ಸಿಗಲಿ" ಎಂದು ಮಾಧವನ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಪಾತ್ರಕ್ಕಾಗಿ ಈ ರೀತಿ ಬದಲಾದ ನಟ ಯಾರೆಂದು ಗುರುತಿಸಿಪಾತ್ರಕ್ಕಾಗಿ ಈ ರೀತಿ ಬದಲಾದ ನಟ ಯಾರೆಂದು ಗುರುತಿಸಿ

    ಸಿಖ್ ಧರ್ಮಕ್ಕೆ ಮತಾಂತರಗೊಂಡಿದ್ದೀರಾ ಎಂದು ಕೇಳಿಲ್ಲವಲ್ಲಾ?

    ಸಿಖ್ ಧರ್ಮಕ್ಕೆ ಮತಾಂತರಗೊಂಡಿದ್ದೀರಾ ಎಂದು ಕೇಳಿಲ್ಲವಲ್ಲಾ?

    "ನಾನು ದರ್ಗಾಕ್ಕೂ ಹೋಗುತ್ತೇನೆ, ಚರ್ಚಿಗೂ ಹೋಗುತ್ತೇನೆ, ಗುರುದ್ವಾರಕ್ಕೂ ಹೋಗುತ್ತೇನೆ. ನನ್ನ ಪೂಜಾ ಕೋಣೆಯಲ್ಲಿ ಗೋಲ್ಡನ್ ಟೆಂಪಲ್ ಕೂಡ ಇದೆ. ಅದನ್ನು ನೋಡಿ ಸಿಖ್ ಧರ್ಮಕ್ಕೆ ಮತಾಂತರ ಗೊಂಡಿದ್ದೀರಾ ಎಂದು ಕೇಳಲ್ಲವಲ್ಲಾ?" ಎಂದು ಕೇಳಿದ್ದಾರೆ

    ಬೇರೆಯವರ ಆಚರಣೆ, ನಂಬಿಕೆಗಳಿಗೆ ಗೌರವಕೊಡಿ

    ಬೇರೆಯವರ ಆಚರಣೆ, ನಂಬಿಕೆಗಳಿಗೆ ಗೌರವಕೊಡಿ

    "ನನ್ನ ಅಸ್ಮಿತೆ ಬಗ್ಗೆ ಹೆಮ್ಮೆ ಪಡುತ್ತಾ, ಅದನ್ನು ಆಚರಿಸುತ್ತಾ ಬೇರೆಯವರ ಆಚರಣೆ, ನಂಬಿಕೆಗಳಿಗೆ ಗೌರವ ಕೊಡುವಂತೆ ನಮ್ಮ ಹಿರಿಯರು ಹೇಳಿಕೊಂಡಿದ್ದಾರೆ. ನನ್ನ ಮಗನಿಗೂ ಅದನ್ನೇ ಪಾಲಿಸುವಂತೆ ಹೇಳಿಕೊಟ್ಟಿದ್ದೇನೆ. ಪಾಲಿಸುತ್ತಿದ್ದಾನೆ. ನಂಬಿಕೆ, ಆಚರಣೆ, ಸಂಪ್ರದಾಯ ಇವೆಲ್ಲಾ ಅವರವರ ವೈಯಕ್ತಿಕ ಅಭಿಪ್ರಾಯ. ನಮ್ಮ ಅಸ್ಮಿತೆಯನ್ನು ಉಳಿಸಿಕೊಂಡು ಬೇರೆಯವರ ನಂಬಿಕೆ, ಆಚರಣೆಗಳನ್ನು ಗೌರವಿಸುವುದೆ ನಿಜವಾದ ಧರ್ಮ" ಎಂದು ಖಾರವಾಗಿ ಉತ್ತರಿಸಿದ್ದಾರೆ.

    English summary
    Actor Madhavan reaction to netizens about to keep Jesus Cross in his house.
    Sunday, August 18, 2019, 12:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X