ಲೈಂಗಿಕ ಕಿರುಕುಳ ಆರೋಪ: 'ಸ್ಲಮ್ ಡಾಗ್ ಮಿಲಿಯನೇರ್' ನಟ ಮಧುರ್ ಮಿತ್ತಲ್ ಗೆ ಜಾಮೀನು

ಮಾಜಿ ಗರ್ಲ್ ಫ್ರೆಂಡ್ ಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಆಸ್ಕರ್ ಪ್ರಶಸ್ತಿ ಪುರಸ್ಕೃತ ಚಿತ್ರ ಸ್ಲಂ ಡಾಗ್ ಮಿಲಿಯನೇರ್ ಖ್ಯಾತಿಯ ನಟ ಮಧುರ್ ಮಿತ್ತಲ್ ಗೆ ಮುಂಬೈ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.

ಮಧುರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ. ಮಾಜಿ ಗೆಳತಿ, ಮಧುರ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಹಲ್ಲೆ ಆರೋಪ ಮಾಡಿ ದೂರು ನೀಡಿದ್ದರು.

ಜಾಮೀನು ಅರ್ಜಿಯ ಪ್ರಕಾರ, ಡಿಸೆಂಬರ್ ನಲ್ಲಿ ಮಾಜಿ ಗೆಳತಿ ಜೊತೆ ಗೋವಾಗೆ ಭೇಟಿ ನೀಡಿದ್ದ ಮಧುರ್, ಪ್ರಪೋಸ್ ಮಾಡಿದ್ದರು. ಬಳಿಕ ಮುಂಬೈಗೆ ಬಂದ ನಂತರ ಗೆಳತಿ, ಮಧುರ್ ಮತ್ತು ಕುಟುಂಬದವರ ಜೊತೆ 4 ದಿನಗಳು ಮಧುರ್ ಮನೆಯಲ್ಲೇ ಕಾಲಕಳೆದಿದ್ದಾರೆ. ಬಳಿಕ ಮನೆಯವರ ಜೊತೆ ಕಿತ್ತಾಡಿಕೊಂಡು ಮನೆಯಿಂದ ಹೊರಹೋಗಿದ್ದಾಳೆ ಎಂದು ಮಧುರ್ ಹೇಳಿದ್ದಾರೆ.

 Actor Madhur Mittal grants pre-arrest bail for Sexual assault case

ಕುಟುಂಬದವರನ್ನು ಬಿಟ್ಟು ಬರುವಂತೆ ಒತ್ತಾಯ ಮಾಡಿದ್ದಲ್ಲದೆ, ಇಬ್ಬರು ಪ್ರತ್ಯೇಕವಾಗಿ ಇರಲು ಅಪಾರ್ಟ್ಮೆಂಟ್ ಅನ್ನು ಬಾಡಿಗೆ ಪಡೆದು ಒಟ್ಟಿಗೆ ಇರುವಂತೆ ಒತ್ತಡ ಹೇರುತ್ತಿದ್ದರು ಎಂದು ಮಧುರ್ ಆರೋಪಿಸಿದ್ದಾರೆ. ಜೊತೆಗೆ ಆರ್ಥಿಕ ಲಾಭವನ್ನು ತನ್ನ ಕುಟುಂಬಕ್ಕೆ ನೀಡದಂತೆ ಒತ್ತಡ ಹೇರುತ್ತಿದ್ದಳು ಎಂದು ಮಧುರ್ ಹೇಳಿದ್ದಾರೆ.

ಫೆಬ್ರವರಿಯಲ್ಲಿ ಜೈಪುರದಲ್ಲಿ ಚಿತ್ರೀಕರಣದಲ್ಲಿದ್ದ ಸಮಯದಲ್ಲಿ ಮಾಜಿ ಗೆಳತಿ ಮಧುರ್ ಗೆ ಬೆದರಿಕೆ ಹಾಕಿ, ಸಂಬಂಧ ಕಡಿದುಕೊಳ್ಳುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ ಎಂದಿದ್ದಾರೆ. ಬಳಿಕ ಮಧುರ್ ಮುಂಬೈಗೆ ಮರಳಿದ ನಂತರ ಮಾಜಿ ಗೆಳತಿ ಮತ್ತು ಮಧುರ್ ನಡುವೆ ಜಗಳವಾಗಿದೆ. ಜಗಳದ ನಂತರ ದೂರ ಆಗಿದ್ದಾಳೆ ಎಂದು ಮಧುರ್ ಹೇಳಿದ್ದಾರೆ.

ಇಬ್ಬರು ದೂರ ಆಗಿ 10 ದಿನಗಳಲ್ಲೇ ಮಧರ್ ವಿರುದ್ಧ ಮುಂಬೈನ ಖಾರ್ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದಾರೆ. ಆದರೆ ಆಕೆಯನ್ನು ಮದುವೆಯಾಗಲು ತಯಾರಾಗಿದ್ದೆ ಎಂದು ಮಧುರ್ ಹೇಳಿದ್ದಾರೆ.

ಎರಡು ಕಡೆ ವಾದ ಆಲಿಸಿದ ನ್ಯಾಯಾಧೀಶರು ಮಾರ್ಚ್ 26, 2021ರ ವರೆಗೂ ಬಂಧನದಿಂದ ಮುಕ್ತಿ ನೀಡಿ, ಆದೇಶವನ್ನು ಕಾಯ್ದಿರಿಸಿದ್ದಾರೆ.

More from Filmibeat

English summary
Slumdog Millionaire Actor Madhur Mittal grants pre-arrest bail for sexual assault case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X