ಈ ಸ್ಟಾರ್ ನಟನ ಕಾರಣಕ್ಕಾಗಿ ಅಮಿತಾಬ್ ಜೊತೆ ಮಾಧುರಿ ದೀಕ್ಷಿತ್ ಕೊನೆಗೂ ಸಿನಿಮಾ ಮಾಡಲೇ ಇಲ್ಲ

ಬಾಲಿವುಡ್ ನ ಖ್ಯಾತ ನಟಿ ಮಾಧುರಿ ದೀಕ್ಷಿತ್ ಸದ್ಯ ಅಪರೂಪಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಕಳಂಕ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಮಾಧುರಿ ಆ ನಂತರ ಮತ್ತೆ ಬಣ್ಣಹಚ್ಚಿಲ್ಲ. ಲಾಕ್ ಡೌನ್ ಸಮಯದಲ್ಲಿ ಮಾಧುರಿ ದೀಕ್ಷಿತ್ ಬಗ್ಗೆ ಹಳೆಯ ಸುದ್ದಿಯೊಂದು ವೈರಲ್ ಆಗಿದೆ.

Recommended Video

777 Charlie Rakshit shetty character revealed | Teaser Breakdown | Pushkar Mallikarjunaiah

ಮಾಧುರಿ ದೀಕ್ಷಿತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸುಮಾರು 40 ವರ್ಷಗಳಾಗುತ್ತಿದೆ. ಆದರೆ ಅವರ ವೃತ್ತಿ ಜೀವನದಲ್ಲಿ ಬಾಲಿವುಡ್ ನ ಖ್ಯಾತ ನಟ ಅಮಿತಾಬ್ ಜೊತೆ ತೆರೆಹಂಚಿಕೊಂಡಿಲ್ಲ. ಬಿಗ್ ಬಿ ಜೊತೆ ನಟಿಸಲು ಸಾಕಷ್ಟು ನಟಿಯರು ತುದಿಗಾಲಿನಲ್ಲಿ ನಿಂತಿರುತ್ತಿರುತ್ತಾರೆ. ಆದರೆ ಮಾಧುರಿ ದೀಕ್ಷಿತ್ ಮಾತ್ರ ಇದುವರೆಗೂ ಅಮಿತಾಬ್ ಜೊತೆ ಸಿನಿಮಾ ಮಾಡಿಲ್ಲ. ಅವಕಾಶ ಸಿಕ್ಕರು ಮಾಧುರಿ ನಟಿಸಿಲ್ಲ. ಬಿಗ್ ಬಿ ಮತ್ತು ಮಾಧುರಿ ದೀಕ್ಷಿತ್ ಇಬ್ಬರು ಒಟ್ಟಿಗೆ ಸಿನಿಮಾ ಮಾಡದಿರಲು ಕಾರಣ ಕೇಳಿದ್ರೆ ನಿಜಕ್ಕು ಅಚ್ಚರಿ ಪಡುತ್ತೀರಿ. ಮುಂದೆ ಓದಿ...

80ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ

80ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ

ನಟಿ ಮಾಧುರಿ ದೀಕ್ಷಿತ್ 80ರ ದಶಕದಲ್ಲಿಯೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ. ಅಬೋದ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಮಾಧುರಿಗೆ ಪ್ರಾರಂಭದಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ. ಸಾಕಷ್ಟು ಸೋಲುಗಳ ಬಳಿಕ ಮಾಧುರಿ ಸ್ಟಾರ್ ನಟಿಯಾಗಿ ಹೊರಹೊಮ್ಮುತ್ತಾರೆ. ಅದರಲ್ಲೂ ಅನಿಲ್ ಕಪೂರ್ ಜೊತೆ ನಟಿಸಿದ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದಂತೆ ಚಿತ್ರರಂಗದಲ್ಲಿ ಮಾಧುರಿ ಲಕ್ ಬದಲಾಯಿತು.

ಅಮಿತಾಬ್-ಮಾಧುರಿ ಸಿನಿಮಾ ನೋಡಲು ಕಾತರರಾಗಿದ್ದರು

ಅಮಿತಾಬ್-ಮಾಧುರಿ ಸಿನಿಮಾ ನೋಡಲು ಕಾತರರಾಗಿದ್ದರು

80-90ರ ದಶದಲ್ಲಿ ಅಮಿತಾಬ್ ಬಚ್ಚನ್ ಸ್ಟಾರ್ ನಟನಾಗಿ ಬಾಲಿವುಡ್ ಆಳುತ್ತಿದ್ದರು. ಮಾಧುರಿ ದೀಕ್ಷಿತ್ ಇನ್ನೂ ಹೊಸ ಮುಖ. ಅಲ್ಲದೆ ಪ್ರಾರಂಭದಲ್ಲಿ ಮಾಧುರಿಗೆ ಯಶಸ್ಸು ಸಿಗಲಿಲ್ಲ. ಮಾಧುರಿ ಜೊತೆ ನಟಿಸಲು ಅನೇಕರು ನಟರು ಹಿಂದೇಟು ಹಾಕುತ್ತಿದ್ದರು. ಆ ಸಮಯದಲ್ಲಿ ನಟ ಅನಿಲ್ ಕಪೂರ್ ಜೊತೆ ತೇಜಬ್ ಸಿನಿಮಾ ಮಾಡುತ್ತಾರೆ. ಈ ಸಿನಿಮಾ ಹಿಟ್ ಆಗುತ್ತಿದ್ದಂತೆ ಮಾಧುರಿ ಸ್ಟಾರ್ ಗೆ ಬೇಡಿಕೆಯ ನಟಿಯಾಗಿ ಹೊರಹೊಮ್ಮುತ್ತಾರೆ. ಆ ಸಮಯದಲ್ಲಿ ಅಮಿತಾಬ್ ಜೊತೆ ಸಿನಿಮಾ ಮಾಡಬೇಕು ಎನ್ನುವ ಕನಸು ಕೂಡ ಮಾಧುರಿಗಿತ್ತು. ಅಲ್ಲದೆ ಅಭಿಮಾನಿಗಳು ಅಮಿತಾಬ್ ಮತ್ತು ಮಾಧುರಿ ಜೋಡಿಯನ್ನು ತೆರೆಮೇಲೆ ನೋಡಲು ಕಾತರರಾಗಿದ್ದರು.

ಮಾಧುರಿ ದೀಕ್ಷಿತ್ ಮತ್ತು ಅನಿಲ್ ಕಪೂರ್ ಅಫೇರ್ ವದಂತಿ

ಮಾಧುರಿ ದೀಕ್ಷಿತ್ ಮತ್ತು ಅನಿಲ್ ಕಪೂರ್ ಅಫೇರ್ ವದಂತಿ

90ರ ದಶಕದಲ್ಲಿ ನಟ ಅನಿಲ್ ಕಪೂರ್ ಚಿತ್ರರಂಗದ ಉತ್ತುಂಗದಲ್ಲಿದ್ದರು. ಅಲ್ಲದೆ ಮಾಧುರಿ ಮತ್ತು ಅನಿಲ್ ಜೋಡಿ ಸಿಕ್ಕಾಪಟ್ಟೆ ಖ್ಯಾತಿಗಳಿಸಿತ್ತು. ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಈ ಜೋಡಿ ನಡುವೆ ಆಗಲೆ ಗಾಸಿಪ್ ಜೋರಾಗಿ ಕೇಳಿ ಬರುತ್ತಿತ್ತು. ಸಿನಿಮಾ ಸೆಟ್ ಗಳಲ್ಲಿ ಆತ್ಮೀಯವಾಗಿ ಇರುವುದನ್ನು ನೋಡಿದವರು ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧವಿದೆ ಎನ್ನುತ್ತಿದ್ದರು. ಅಲ್ಲದೆ ರೀಲ್ ಜೋಡಿ ರಿಯಲ್ ಲೈಫ್ ನಲ್ಲಿಯೂ ಜೋಡಿಯಾಗಲಿದ್ದಾರೆ ಎನ್ನುವ ಸುದ್ದಿ ಹರಿಡಾದಲು ಪ್ರಾರಂಭವಾಗಿತ್ತು.

ಅಮಿತಾಬ್ ಜೊತೆ ನಟಿಸಲು ಅವಕಾಶ ಸಿಕ್ಕರು ಸಿನಿಮಾ ಮಾಡಿಲ್ಲ

ಅಮಿತಾಬ್ ಜೊತೆ ನಟಿಸಲು ಅವಕಾಶ ಸಿಕ್ಕರು ಸಿನಿಮಾ ಮಾಡಿಲ್ಲ

ಸ್ಟಾರ್ ನಟಿಯಾಗಿ ಗುರುತಿಸಿಕೊಂಡ ನಂತರ ಮಾಧುರಿಗೆ ಬೇಡಿಕೆ ಹೆಚ್ಚಾಯಿತು. ಆ ಸಮಯದಲ್ಲಿ ಮಾಧುರಿ ಕನಸಿನಂತೆ ಬಿಗ್ ಬಿ ಅಮಿತಾಬ್ ಜೊತೆ ನಟಿಸುವ ಅವಕಾಶ ಕೂಡ ಒಲಿದು ಬರುತ್ತೆ. ಆದರೆ ಅಮಿತಾಬ್ ಜೊತೆ ಸಿನಿಮಾ ಮಾಡದಂತೆ ನಟ ಅನಿಲ್ ಕಪೂರ್ ಒತ್ತಡ ಹೇರುತ್ತಾರಂತೆ. ಮಾಧುರಿ ದೀಕ್ಷಿತ್ ಮೇಲೆ ಅನಿಲ್ ಕಪೂರ್ ಹೆಚ್ಚು ಪೊಸೆಸಿವ್ ಆಗಿದ್ದರು. ಹಾಗಾಗಿ ಬಿಗ್ ಬಿ ಜೊತೆ ಸಿನಿಮಾ ಮಾಡುವುದನ್ನು ತಡೆಯುತ್ತಾರಂತೆ.

ಇದುವರೆಗೂ ಅಮಿತಾಬ್ ಜೊತೆ ಸಿನಿಮಾ ಮಾಡಲೇ ಇಲ್ಲ

ಇದುವರೆಗೂ ಅಮಿತಾಬ್ ಜೊತೆ ಸಿನಿಮಾ ಮಾಡಲೇ ಇಲ್ಲ

ಅನಿಲ್ ಕಪೂರ್ ಸಿನಿಮಾ ಮಾಡದಂತೆ ತಡೆದ ಬಳಿಕ ಮಾಧುರಿ ಅಮಿತಾಬ್ ಜೊತೆ ತೆರೆಮೇಲೆ ಕಾಣಿಸಿಕೊಂಡಿಲ್ಲ. ಅಲ್ಲಿಗೆ ಅಭಿಮಾನಿಗಳ ಕನಸು ಸಹ ಈಡೇರಲಿಲ್ಲ. ಅನಿಲ್ ಕಪೂರ್ ಗೆ ಮಾಧುರಿ ದೀಕ್ಷಿತ್ ಮೇಲಿನ ಪೊಸೆಸಿವ್ ಒಂದೆಡೆ ಆದರೆ, ಆ ಕಾಲದಲ್ಲಿ ಅಮಿತಾಬ್ ಮತ್ತು ಅನಿಲ್ ಇಬ್ಬರು ಸ್ಟಾರ್ ನಟರಾಗಿ ಮೆರೆಯುತ್ತಿದ್ದರು, ಇಬ್ಬರ ನಡುವೆ ವೃತ್ತಿಪರ ಸ್ಪರ್ಧೆಯ ಪೈಪೂಟಿ ಕೂಡ ಇತ್ತು, ಹಾಗಾಗಿಯೇ ಅಮಿತಾಬ್ ಜೊತೆ ಸಿನಿಮಾ ಮಾಡದಂತೆ ತಡೆದಿದ್ದಾರೆ ಎಂದು ಹೇಳಲಾಗುತ್ತೆ.

ಅನಿಲ್ ಕಪೂರ್ ಯಿಂದ ದೂರದ ಮಾಧುರಿ

ಅನಿಲ್ ಕಪೂರ್ ಯಿಂದ ದೂರದ ಮಾಧುರಿ

ತಾಜಾಬ್, ಬೇಟ, ಖೇಲ್, ರಾಮ್ ಲಖನ್, ರಾಜ್ ಕುಮಾರ್, ಜಿಂದಗಿ ಏಕ್ ಜುಮಾ, ಜಮಾಯಿ ರಾಜ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ ಅನಿಲ್ ಮತ್ತು ಮಾಧುರಿ 2000ರಲ್ಲಿ ರಿಲೀಸ್ ಆದ ಪುಕಾರ್ ಸಿನಿಮಾದ ನಂತರ ದೂರ ಆಗುತ್ತಾರೆ. ಇಬ್ಬರ ನಡುವೆ ಗಾಸಿಪ್ ಜೋರಾಗಿ ಹಬ್ಬುತ್ತಿದ್ದಂತೆ ಮಾಧುರಿ, ಅನಿಲ್ ಕಪೂರ್ ಯಿಂದ ದೂರ ಆಗುವ ನಿರ್ಧಾರ ತೆಗೆದುಕೊಳ್ಳುತ್ತಾರೆ.

17 ವರ್ಷದ ಬಳಿಕ ಒಂದಾದ ಜೋಡಿ

17 ವರ್ಷದ ಬಳಿಕ ಒಂದಾದ ಜೋಡಿ

17 ವರ್ಷದ ಹಿಂದೆ ಮಾಧುರಿ ತೆಗೆದುಕೊಂಡ ನಿರ್ಧಾರ 'ಟೋಟಲ್ ಧಮಾಲ್' ಸಿನಿಮಾದಲ್ಲಿ ಕೊನೆಗೊಳ್ಳುತ್ತದೆ. ಹೌದು, ಕಳೆದ ವರ್ಷ ಈ ಜೋಡಿ ಟೋಟಲ್ ಧಮಾಲ್ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಕೊನೆಗೂ ಮಾಧುರಿ, ಅಮಿತಾಬ್ ಜೊತೆ ಅಭಿನಯಿಸಲೇ ಇಲ್ಲ. ಮುಂದಿನ ದಿನಗಳಲ್ಲಾದರೂ ಒಟ್ಟಿಗೆ ಅಭಿನಯಿಸುತ್ತಾರಾ? ಎನ್ನುವುದು ಕಾದು ನೋಡಬೇಕು.

More from Filmibeat

English summary
Bollywood star actor madhuri dixit and Amitabh Bachchan never worked together.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X