Jawan: ಜವಾನ್ 'ಬ್ಲಾಕ್‌ಬಸ್ಟರ್ ಸಿನಿಮಾ' ಎಂದ ತೆಲುಗು ನಟ ಮಹೇಶ್ ಬಾಬು, ಶಾರುಖ್ ಖಾನ್ ಪ್ರತಿಕ್ರಿಯೆಯೇನು?

ಶಾರುಖ್ ಖಾನ್ ಅವರ 'ಜವಾನ್' ಹವಾ ವಿಶ್ವದೆಲ್ಲೆಡೆ ಹರಡಿದೆ. ಮೊದಲ ದಿನವೇ ಈ ಚಿತ್ರ ವಿಶ್ವದಾದ್ಯಂತ 150 ಕೋಟಿ ಗಳಿಸಿದೆ ಎನ್ನಲಾಗಿದೆ. ಇದರ ನಡುವೆ ಅಭಿಮಾನಿಗಳು ಮಾತ್ರವಲ್ಲದೆ ಸಿನಿರಂಗದ ತಾರೆಯರು ಕೂಡ ಜವಾನ್ ಮೋಡಿಗೆ ಒಳಗಾಗಿದ್ದಾರೆ. ತೆಲುಗು ನಟ ಮಹೇಶ್ ಬಾಬು ಜವಾನ್ 'ಬ್ಲಾಕ್‌ಬಸ್ಟರ್ ಸಿನಿಮಾ' ಎಂದು ಹಾಡಿ ಹೊಗಳಿದ್ದಾರೆ.

ಸಿನಿಮಾ ನೋಡಿರುವ ನಟ ಮಹೇಶ್ ಬಾಬು ತಮ್ಮ ಅನಿಸಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಅವರು ಜವಾನ್ ಅನ್ನು 'ಬ್ಲಾಕ್‌ಬಸ್ಟರ್ ಸಿನಿಮಾ' ಮತ್ತು 'ಸ್ಟಫ್ ಆಫ್ ದಿ ಲೆಜೆಂಡ್ಸ್' ಎಂದು ಕರೆದಿದ್ದಾರೆ. ಇಡೀ ಚಿತ್ರತಂಡವನ್ನು ಶ್ಲಾಘಿಸಿರುವ ಅವರು ಶಾರುಖ್ ಖಾನ್ ಅವರನ್ನು ಬೆಂಕಿಗೆ ಹೋಲಿಸಿದ್ದಾರೆ.

Actor Mahesh Babu reviews Shah Rukh Khans Jawan

ನಟ ಮಹೇಶ್ ಬಾಬು 'ಜವಾನ್' ವಿಮರ್ಶೆ

ಶಾರುಖ್ ಖಾನ್ 'ಜವಾನ್' ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಯೋಧ ಮತ್ತು ಜೈಲರ್ ಆಗಿಸ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿರುವ ಸಿನಿಮಾ ಮೊದಲ ದಿನವೇ ವಿಶ್ವದಾದ್ಯಂತ 150 ಕೋಟಿ ಗಳಿಸಿದೆ ಎಂದು ವರದಿಯಾಗಿದೆ. ಸೆಪ್ಟೆಂಬರ್ 8 ರಂದು ಸಿನಿಮಾ ನೋಡಿರುವ ನಟ ಮಹೇಶ್ ಬಾಬು, ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಟ್ವೀಟ್ ಮಾಡಿರುವ ಅವರು, "ಜವಾನ್... ಬ್ಲಾಕ್‌ಬಸ್ಟರ್ ಸಿನಿಮಾ... ನಿರ್ದೇಶಕ ಅಟ್ಲಿ ಕಿಂಗ್‌ನೊಂದಿಗೆ ಕಿಂಗ್ ಸೈಜ್ ಮನರಂಜನೆಯನ್ನು ನೀಡಿದ್ದಾರೆ. ಅಟ್ಲಿ ಅವರ ವೃತ್ತಿಜೀವನದ ಅತ್ಯುತ್ತಮ ಚಿತ್ರ ಇದು. ಶಾರುಖ್ ಖಾನ್ ಅವರ ಸೆಳೆತ, ವರ್ಚಸ್ಸು ಮತ್ತು ಸ್ಕ್ರೀನ್ ಪ್ರೆಸೆನ್ಸ್‌ಗೆ ಸಾಟಿಯಿಲ್ಲ... ಫುಲ್ ಫೈಯರ್!! ಜವಾನ್ ತನ್ನದೇ ದಾಖಲೆಗಳನ್ನು ಮುರಿಯುತ್ತದೆ" ಎಂದು ಹೇಳಿದ್ದಾರೆ.

ನಟ ಮಹೇಶ್ ಬಾಬು ಟ್ವೀಟ್‌ಗೆ ಶಾರುಖ್ ಖಾನ್ ಉತ್ತರಿಸಿ ತುಂಬು ಹೃದಯದ ಧನ್ಯವಾದ ಹೇಳಿದ್ದಾರೆ. "ನಿಮಗೆ ತುಂಬಾ ಧನ್ಯವಾದಗಳು. ನೀವು ಇಷ್ಟಪಟ್ಟಿದ್ದಕ್ಕೆ ಎಲ್ಲರೂ ತುಂಬಾ ಥ್ರಿಲ್ ಆಗಿದ್ದಾರೆ. ನಿಮಗೆ ಮತ್ತು ಕುಟುಂಬಕ್ಕೆ ಮತ್ತಷ್ಟು ಪ್ರೀತಿ. ನಿಮ್ಮ ಮಾತುಗಳನ್ನು ಕೇಳಲು ತುಂಬಾ ಖುಷಿಯಾಗಿದೆ. ಹೀಗೆ ಮನರಂಜನೆ ನೀಡಲು ಹೆಚ್ಚುಹೆಚ್ಚು ಕೆಲಸ ಮಾಡುತ್ತಿರುತ್ತೇನೆ. ಲವ್ ಯು ಮೈ ಫ್ರೆಂಡ್" ಎಂದಿದ್ದಾರೆ.

Actor Mahesh Babu reviews Shah Rukh Khans Jawan

'ಜವಾನ್'

ತಮಿಳು ನಿರ್ದೇಶಕ ಅಟ್ಲಿ ಬರೆದು ನಿರ್ದೇಶಿಸಿರುವ 'ಜವಾನ್' ಶಾರುಖ್ ಖಾನ್ ಆಕ್ಷನ್ ಥ್ರಿಲ್ಲರ್ ಆಗಿದೆ. ಅಟ್ಲಿ ಕಥೆಗೆ ಎಸ್ ರಮಣಗಿರಿವಾಸನ್ ಚಿತ್ರಕಥೆ ಬರೆದಿದ್ದಾರೆ. 'ಜವಾನ್' ಅಟ್ಲಿ ಮತ್ತು ನಟಿ ನಯನತಾರಾ ಅವರ ಮೊದಲ ಬಾಲಿವುಡ್ ಚಿತ್ರ. ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ನಯನತಾರಾ ಜೊತೆಗೆ ವಿಜಯ್ ಸೇತುಪತಿ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ ಸೇರಿ ಹಲವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ, ಸಂಜಯ್ ದತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸೆಪ್ಟೆಂಬರ್ 7 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ, ಜಿಕೆ ವಿಷ್ಣು ಅವರ ಛಾಯಾಗ್ರಹಣ ಮತ್ತು ರೂಬೆನ್ ಅವರ ಸಂಕಲನವಿದೆ. 'ಜವಾನ್' ಸಿನಿಮಾವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಿರ್ಮಿಸಿದೆ.

More from Filmibeat

English summary
Mahesh Babu reviews Shah Rukh Khan's Jawan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X