ಕಾಸ್ಟಿಂಗ್ ಕೌಚ್ ಅನುಭವ ಬಿಚ್ಚಿಟ್ಟ 'ಮರ್ಡರ್' ಚೆಲುವೆ ಮಲ್ಲಿಕಾ ಶೆರವಾತ್

ಮಲ್ಲಿಕಾ ಶೆರವಾತ್ ಅಂದಾಕ್ಷಣ ಮೊದಲು ನೆನಪಾಗುವುದು 'ಮರ್ಡರ್' ಸಿನಿಮಾ. ಆ ಚಿತ್ರದಲ್ಲಿ ಆಕೆ ನಟಿಸಿರುವ ಹಾಟ್ ದೃಶ್ಯಗಳು. ಬಾಲಿವುಡ್‌ನ ಹಾಟ್ ನಟಿಯರು ಎಂದು ಹುಡುಕಿದರೆ ಮಲ್ಲಿಕಾ ಶೆರವಾತ್ ಹೆಸರು ಮೊದಲ ಸಾಲಿನಲ್ಲಿ ಬರುತ್ತದೆ. ತೆರೆಮೇಲೆ ಹಾಟ್ ಹಾಗೂ ಬೋಲ್ಡ್ ಆಗಿ ನಟಿಸಿದ ಮಾತ್ರಕ್ಕೆ ನಿಜ ಜೀವನದಲ್ಲಿಯೂ ಮಲ್ಲಿಕಾ ಹಾಗೆ ಇರ್ತಾರೆ ಎನ್ನಲು ಆಗಲ್ಲ. ಆದರೂ ಒಂದು ಸಮಯದಲ್ಲಿ ಮಲ್ಲಿಕಾ ಪಡ್ಡೆಗಳ ನಿದ್ದೆ ಕೆಡಿಸಿದ್ದರು.

ಕಾಸ್ಟಿಂಗ್ ಕೌಚ್ ಬಗ್ಗೆ ಈಗಾಗಲೇ ಹಲವು ನಟಿಯರು ಮಾತನಾಡಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಕೆಟ್ಟ ಅನುಭವಗಳನ್ನು ಬಹಿರಂಗಪಡಿಸಿದ್ದಾರೆ. ಕೆಲವರು ಕಾನೂನು ಹೋರಾಟವೂ ಮಾಡ್ತಿದ್ದಾರೆ. ಇದೀಗ, ಕಾಸ್ಟಿಂಗ್ ಕೌಚ್ ಬಗ್ಗೆ 'ಮರ್ಡರ್' ಚೆಲುವೆ ಮಲ್ಲಿಕಾ ಶೆರವಾತ್ ಪ್ರತಿಕ್ರಿಯಿಸಿದ್ದಾರೆ.

ಪಿಂಕ್‌ವಿಲ್ಲಾ ವೆಬ್‌ಸೈಟ್ ಜೊತೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಲ್ಲಿಕಾ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಅನುಭವಿಸಿದ ಬಗ್ಗೆ ಮತ್ತು ಅಂತಹ ಸನ್ನಿವೇಶಗಳನ್ನು ಹೇಗೆ ನಿಭಾಯಿಸಿದರು ಎಂಬುದರ ಕುರಿತು ಹೇಳಿಕೊಂಡಿದ್ದಾರೆ.

Actor Mallika Sherawat opened up about facing casting couch in the film industry

ಕಾಸ್ಟಿಂಗ್ ಕೌಚ್ ಎದುರಿಸಿದ್ದೀರಾ ಎಂದು ಪ್ರಶ್ನಿಸಿದ್ದಕ್ಕೆ, ''ನೇರವಾಗಿ ಅದನ್ನು ನಾನು ಎದುರಿಸಿಲ್ಲ. ನಾನು ತುಂಬಾ ಅದೃಷ್ಟವಂತೆ. ಮುಂಬೈಗೆ ಬಂದ ಕೂಡಲೇ ತುಂಬಾ ಸುಲಭವಾಗಿ ಮರ್ಡರ್ ಹಾಗೂ ಕ್ವಾಹಿಶ್ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ತು. ಆ ಚಿತ್ರದಲ್ಲಿ ಬಹಳ ಬೋಲ್ಡ್ ಆಗಿ ನಟಿಸಿದ್ದೆ. ಈ ಪಾತ್ರ ಮಾಡಿದ್ಮೇಲೆ ಕೆಲವು ನಟರು ನನ್ನ ಬಳಿ ಅಸಭ್ಯವಾಗಿ ವರ್ತಿಸಲು ಪ್ರಯತ್ನಿಸಿದ್ದರು. ಅದರಲ್ಲಿ ಕೆಲವರು ತೆರೆಮೇಲೆ ನಟಿಸಿದಷ್ಟೇ ಬೋಲ್ಡ್ ಆಗಿ, ಆಫ್ ಸ್ಕ್ರೀನ್‌ನಲ್ಲೂ ಇರ್ತೇನೆ ಎಂದುಕೊಂಡಿದ್ದರು ಎನ್ನುವ ವಿಷಯ ಪ್ರಸ್ತಾಪಿಸಿದರು.

ಮಾತು ಮುಂದುವರಿಸಿದ ನಟಿ, ''ಹಲವು ನಟರು ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ವ್ಯಕ್ತಿತ್ವದ ನಡುವೆ ವ್ಯತ್ಯಾಸದ ಬಗ್ಗೆ ಜ್ಞಾನ ಹೊಂದಿರಲಿಲ್ಲ. ಹಾಗಾಗಿ, ಕೆಲವು ಸಂದರ್ಭದಲ್ಲಿ ನಾನು ಕಷ್ಟಕರ ಪರಿಸ್ಥಿತಿಯನ್ನು ಎದುರಿಸಿದೆ. ಆದರೆ ನಾನು ಕುಗ್ಗಲಿಲ್ಲ ಏಕಂದ್ರೆ ನಾನು ತುಂಬಾ ಗಟ್ಟಿ ಮನಸ್ಸಿ ಮಹಿಳೆಯಾಗಿದ್ದೆ. ನನ್ನ ಬಳಿ ಕೆಟ್ಟದಾಗಿ ನಡೆದುಕೊಳ್ಳಲು ಪ್ರಯತ್ನಿಸಿದ ಕೆಲವು ನಟರಿಗೆ 'ಕ್ಷಮಿಸಿ, ನಾನು ರಾಜಿ ಮಾಡಿಕೊಳ್ಳುವುದಿಲ್ಲ. ನಾನು ಬಾಲಿವುಡ್‌ಗೆ ರಾಜಿ ಮಾಡಿಕೊಳ್ಳಲು ಬಂದಿಲ್ಲ, ನನ್ನ ವೃತ್ತಿ ಜೀವನವನ್ನು ಕಂಡುಕೊಳ್ಳಲು ಬಂದಿದ್ದೇನೆ ಅಂದೆ. ಹಾಗಾಗಿ, ಅವರು ನನ್ನ ಜೊತೆ ಕೆಲಸ ಮಾಡಲಿಲ್ಲ'' ಎಂದು ಮಲ್ಲಿಕಾ ತಿಳಿಸಿದ್ದಾರೆ.

Actor Mallika Sherawat opened up about facing casting couch in the film industry

ಇದಕ್ಕೂ ಮುಂಚೆ ಇನ್ನೊಂದು ಸಂದರ್ಶನದಲ್ಲಿ ಮಾತನಾಡಿದ ಮಲ್ಲಿಕಾ, 'ನಾನು ಉತ್ತುಂಗದಲ್ಲಿದ್ದ ಸಮಯದಲ್ಲಿ ಕೆಲವು ಮಾಧ್ಯಮದವರು ನನಗೆ ಬಹಳ ಕಾಟ ಕೊಟ್ಟರು. ಅದರಲ್ಲೂ ಮಹಿಳಾ ಪತ್ರಕರ್ತರು ನನ್ನ ವಿರುದ್ಧ ಬಹಳ ಟೀಕೆ ಮಾಡಿದರು. ''ಈಕೆ ತೆರೆ ಮೇಲೆ ಲಿಪ್‌ಲಾಕ್ ಮಾಡುತ್ತಾಳೆ'', ''ಈಕೆ ಮರ್ಯಾದೆಗೆಟ್ಟ ಹೆಂಗಸು'', ''ಈಕೆಗೆ ಸಂಪ್ರದಾಯ, ಸಂಸ್ಕಾರಗಳು ಗೊತ್ತಿಲ್ಲ'', ''ಈಕೆಯ ಸಿನಿಮಾ ನೋಡಿದರೆ ಯುವಕರು ಹಾಳಾಗುತ್ತಾರೆ'' ಹೀಗೆ ಏನೇನೊ ಬರೆದರು. ಒಬ್ಬ ಮಾಧ್ಯಮದವರಂತೂ ನನ್ನನ್ನು ಪೋರ್ನ್ ಸ್ಟಾರ್ ಎಂದೇ ಬರೆದಿದ್ದರು. ಅವರ ಹೆಸರು ಹೇಳಲು ನನಗೆ ಇಷ್ಟವಿಲ್ಲ. ನನಗೆ ಪೋರ್ನ್ ಉದ್ಯಮದಲ್ಲಿರುವವರ ಬಗ್ಗೆ ಬೇಸರವಿಲ್ಲ. ಆದರೆ ನಾನು ಆ ಉದ್ಯಮಕ್ಕೆ ಸೇರಿದವಳಾಗಿರಲಿಲ್ಲ. ಆದರೂ ನನ್ನನ್ನು ಅಪಮಾನ ಮಾಡಬೇಕೆಂಬ ಉದ್ದೇಶದಿಂದ ಹಾಗೆ ಬರೆಯಲಾಗಿತ್ತು' ಎಂದು ಬೇಸರ ಹೊರಹಾಕಿದ್ದರು.

2002ರಲ್ಲಿ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಮಲ್ಲಿಕಾ ವಿಶೇಷ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದರು. 2019ರಲ್ಲಿ ತೆರೆಕಂಡ 'ಬೂ ಸಬ್ಕಿ ಫತೇಗಿ' ವೆಬ್ ಸಿರೀಸ್‌ನಲ್ಲಿ ಕೊನೆಯದಾಗಿ ಮಲ್ಲಿಕಾ ಶೆರವಾತ್ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಯಾವ ಪ್ರಾಜೆಕ್ಟ್‌ನಲ್ಲೂ ನಟಿಸಿಲ್ಲ. ಅದಕ್ಕೂ ಮುಂಚೆ 2017ರಲ್ಲಿ 'ಜೀನಾತ್' ಚಿತ್ರದಲ್ಲಿ ಅಭಿನಯಿಸಿದ್ದರು.

More from Filmibeat

English summary
Bollywood Actor Mallika Sherawat opened up about facing casting couch in the film industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X