ಮನೋಜ್ ಬಾಜಪೇಯಿ ತಂದೆ ಸ್ಥಿತಿ ಗಂಭೀರ: ಆಸ್ಪತ್ರೆಗೆ ದಾಖಲು
ಬಾಲಿವುಡ್‌ನ ಖ್ಯಾತ ಚಲನಚಿತ್ರ ನಟ ಮನೋಜ್ ಬಾಜಪೇಯಿ ಅವರ ತಂದೆ ಆರ್‌ಕೆ ಬಾಜಪೇಯಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ದೆಹಲಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
83 ವರ್ಷದ ಆರ್ ಕೆ ಬಾಜಪೇಯಿ ಅವರಿಗೆ ಏನಾಗಿದೆ ಎನ್ನುವುದರ ಬಗ್ಗೆ ಮಗ ಮನೋಜ್ ಅಧಿಕೃತವಾಗಿ ಮಾಹಿತಿ ನೀಡಿಲ್ಲವಾದರೂ, ಸದ್ಯಕ್ಕೆ ಅವರ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ತಂದೆ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆ ಕೇರಳದಲ್ಲಿ ಸಿನಿಮಾವೊಂದರ ಚಿತ್ರೀಕರಣದಲ್ಲಿದ್ದ ಮನೋಜ್ ಬಾಜಪೇಯಿ, ಶೂಟಿಂಗ್ ಅರ್ಧಕ್ಕೆ ಬಿಟ್ಟು ದೆಹಲಿಗೆ ತೆರಳಿದರು.

ಇದಕ್ಕೂ ಮುಂಚೆ ಎಎನ್‌ಐಗೆ ನೀಡಿದ ಸಂದರ್ಭದಲ್ಲಿ ಸಿನಿಮಾ ಜಗತ್ತಿಗೆ ಬರುವುದಕ್ಕೂ ಮುಂಚೆ ಶಿಕ್ಷಣವನ್ನು ಅರ್ಧಕ್ಕೆ ಬಿಡಲು ಒಪ್ಪಿಗೆ ಕೊಟ್ಟಿರಲಿಲ್ಲ. ಪದವಿ ಪೂರ್ತಿಗೊಳಿಸಿ ನಂತರ ವೃತ್ತಿ ಆರಂಭಿಸಲು ಸೂಚಿಸಿದ್ದರು ಎಂದು ಹೇಳಿಕೊಂಡಿದ್ದರು. ''18ನೇ ವಯಸ್ಸಿನಲ್ಲಿ ನಾನು ಬಿಹಾರದ ಸಣ್ಣ ಹಳ್ಳಿಯಿಂದ ದೆಹಲಿಗೆ ಬಂದೆ. ವಿಶ್ವವಿದ್ಯಾಲಯಕ್ಕೆ ಸೇರಿ ನಾನು ಪದವಿ ಮುಗಿಸಬೇಕು ಎನ್ನುವುದು ನನ್ನ ತಂದೆಯ ಆಸೆಯಾಗಿತ್ತು. ನಾನು ಓದುವುದನ್ನು ಅರ್ಧಕ್ಕೆ ನಿಲ್ಲಿಸುವುದು ಅವರಿಗೆ ಇಷ್ಟ ಇರಲಿಲ್ಲ. ಹಾಗಾಗಿ, ಅವರ ಕನಸನ್ನು ನನಸು ಮಾಡಲು ನಿರ್ಧರಿಸಿದೆ. ಕೊನೆಗೆ ಡಿಗ್ರಿ ಪಡೆದುಕೊಂಡೆ'' ಎಂದು ಹೇಳಿದ್ದರು.
'ಫ್ಯಾಮಿಲಿ ಮ್ಯಾನ್ 2' ವೆಬ್ ಸಿರೀಸ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಮನೋಜ್ ಬಾಜಪೇಯಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದ್ದ ಈ ಸರಣಿಯಲ್ಲಿ ಸಮಂತಾ ಸಹ ಪ್ರಧಾನ ಪಾತ್ರ ಮಾಡಿದ್ದರು. ಇವರಿಬ್ಬರ ಜುಗಲ್‌ಬಂಧಿ ಚಿತ್ರಕ್ಕೆ ಯಶಸ್ಸು ತಂದು ಕೊಟ್ಟಿತ್ತು.
ಇತ್ತೀಚಿಗಷ್ಟೆ ತೆರೆಕಂಡಿದ್ದ 'ಡಾಯಲ್ 100' ಸಿನಿಮಾದಲ್ಲಿ ನೀನಾ ಗುಪ್ತಾ, ಸಾಕ್ಷಿ ತನ್ವರ್ ಜೊತೆ ಮನೋಜ್ ಬಾಜಪೇಯಿ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಇನ್ನು ಮೊಹಮ್ಮದ್ ಅಲಿ ನಿರ್ದೇಶನದಲ್ಲಿ ತಯಾರಾಗಿರುವ ಮೊಘಲ್ ರೋಡ್ ಚಿತ್ರದಲ್ಲಿ ಮನೋಜ್ ಬಾಜಪೇಯಿ ನಟಿಸಿದ್ದು, ಈ ವರ್ಷದ ಅಂತ್ಯದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಮಿಲಪ್ ಜವೇರಿ ನಿರ್ದೆಶನದ 'ರಾಖ್' ಚಿತ್ರದಲ್ಲಿ ಮನೋಜ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಜಾನ್ ಅಬ್ರಾಹಂ ನಟಿಸಿದ್ದಾರೆ. ಸುವಾಹ್ಧಾನ್ ಆಂಗ್ರೆ ನಿರ್ದೇಶಿಸಿರುವ 'ಕ್ಯಾಂಪಸ್' ಚಿತ್ರದಲ್ಲಿಯೂ ಮನೋಜ್ ಅಭಿನಯಿಸಿದ್ದಾರೆ.


Click it and Unblock the Notifications











