ಖ್ಯಾತ ನಟ ಮುರಳಿ ಶರ್ಮಾ ತಾಯಿ ನಿಧನ
ತೆಲುಗು, ತಮಿಳು, ಹಿಂದಿ, ಮರಾಠಿ ಭಾಷೆಗಳಲ್ಲಿ ನಟಿಸಿರುವ ಖ್ಯಾತ ನಟ ಮುರಳಿ ಶರ್ಮಾ ಅವರ ತಾಯಿ ನಿನ್ನೆ (ಜೂನ್ 07) ನಿಧನರಾಗಿದ್ದಾರೆ.
ಮೈ ಹೂ ನಾ ದಿಂದ ಇತ್ತೀಚಿಗೆ ಬಿಡುಗಡೆಯಾಗಿ ಸೂಪರ್ ಹಿಟ್ ಆದ ಅಲಾ ವೈಕುಂಟಪುರಂಲೋ ಸಿನಿಮಾದವರೆಗೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಮುರಳಿ ಶರ್ಮಾ ಅವರ ತಾಯಿ ಪದ್ಮಾ ಶರ್ಮಾ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪದ್ಮಾ ಶರ್ಮಾ ಅವರಿಗೆ 76 ವರ್ಷ ವಯಸ್ಸಾಗಿತ್ತು. ಮುಂಬೈನಲ್ಲಿ ನೆಲೆಸಿದ್ದ ಅವರು, ತಮ್ಮ ಸ್ವಗೃಹದಲ್ಲಿಯೇ ಕೊನೆಉಸಿರೆಳೆದಿದ್ದಾರೆ.
ಮುರಳಿ ಶರ್ಮಾ ಅವರ ತಂದೆ ವೃಜ್‌ಭೂಷಣ್ ಶರ್ಮಾ ಕಳೆದ ವರ್ಷವಷ್ಟೆ ಮರಣ ಹೊಂದಿದ್ದರು. ಈಗ ತಾಯಿ ಪದ್ಮಾ ಶರ್ಮಾ ಸಾವನ್ನಪ್ಪಿದ್ದಾರೆ.

ಮುರಳಿ ಶರ್ಮಾ ಆಪ್ತರು, ಗೆಳೆಯರು, ಸಿನಿಮಾ ಮಂದಿ ಮುರಳಿ ಶರ್ಮಾ ತಾಯಿಯ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
More from Filmibeat
English summary
Actor Murli Sharma's mother Padma Sharma passed away yesterday because of heart attack.


Click it and Unblock the Notifications











