ಮೂಲ ಸಿನಿಮಾಗಿಂತ ಶಾಹಿದ್ ಉತ್ತಮವಾಗಿ ನಟಿಸಲಿದ್ದಾರೆ; ಹಿಂದಿ 'ಜರ್ಸಿ' ಬಗ್ಗೆ ನಾನಿ ಪ್ರತಿಕ್ರಿಯೆ

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್ ನಟ ಶಾಹಿದ್ ಕಪೂರ್ ಸದ್ಯ ತೆಲುಗಿನ ಸೂಪರ್ ಹಿಟ್ 'ಜರ್ಸಿ' ಸಿನಿಮಾದ ಹಿಂದಿ ರಿಮೇಕ್‌ನಲ್ಲಿ ಬ್ಯುಸಿಯಾಗಿದ್ದಾರೆ. 'ಅರ್ಜುನ್ ರೆಡ್ಡಿ' ರಿಮೇಕ್‌ನಲ್ಲಿ ಕಾಣಿಸಿಕೊಂಡಿದ್ದ ಶಾಹಿದ್ ಕಪೂರ್‌ಗೆ ದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತ್ತು. 'ಕಬೀರ್ ಸಿಂಗ್' ಹೆಸರಲ್ಲಿ 'ಅರ್ಜುನ್ ರೆಡ್ಡಿ' ಬಾಲಿವುಡ್‌ಗೆ ರಿಮೇಕ್ ಆಗಿತ್ತು.

'ಕಬೀರ್ ಸಿಂಗ್' ಸಕ್ಸಸ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಶಾಹಿದ್ ಕಪೂರ್ ಬಳಿಕ ಮತ್ತೊಂದು ಸೂಪರ್ ಹಿಟ್ ತೆಲುಗು ಸಿನಿಮಾದ ರಿಮೇಕ್‌ನಲ್ಲಿ ಮೋಡಿ ಮಾಡಲು ಸಜ್ಜಾಗಿದ್ದಾರೆ. 'ಜರ್ಸಿ' ಚಿತ್ರದ ಮೂಲಕ ಮತ್ತೆ ಅಭಿಮಾನಿಗಳ ಹೃದಯ ಕದಿಯಲು ಸಿದ್ಧರಾಗಿದ್ದಾರೆ. 'ಜರ್ಸಿ' ತೆಲುಗು ನಟ ನಾನಿ ನಟಿಸಿದ್ದ ಸಿನಿಮಾ. ಟಾಲಿವುಡ್‌ನಲ್ಲಿ ಈ ಸಿನಿಮಾ ದೊಡ್ಡ ಮಟ್ಟದ ಹಿಟ್ ಆಗಿತ್ತು. ಇದೀಗ ಈ ಸಿನಿಮಾ ಮೂಲಕ ಶಾಹಿದ್ ಕಪೂರ್ ಕೂಡ ಮತ್ತೊಂದು ಹಿಟ್ ನೀಡಲು ಶ್ರಮಿಸುತ್ತಿದ್ದಾರೆ.

ಅಂದಹಾಗೆ ಜರ್ಸಿ ಸಿನಿಮಾ ಬಾಲಿವುಡ್‌ಗೆ ರಿಮೇಕ್ ಆದ ಬಳಿಕ ನಟ ನಾನಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮೊದಲ ಬಾರಿಗೆ ಶಾಹಿದ್ ಕಪೂರ್ ಜರ್ಸಿ ಬಗ್ಗೆ ತೆಲುಗು ಸ್ಟಾರ್ ನಾನಿ ಪ್ರತಿಕ್ರಿಯೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮುಂದೆ ಓದಿ..

ಶಾಹಿದ್ ಕಪೂರ್ ಜರ್ಸಿ ಬಗ್ಗೆ ನಾನಿ ಮಾತು

ಶಾಹಿದ್ ಕಪೂರ್ ಜರ್ಸಿ ಬಗ್ಗೆ ನಾನಿ ಮಾತು

ಹಿಂದಿ ಜರ್ಸಿ ಬಗ್ಗೆ ಮಾತನಾಡಿರುವ ನಾನಿ "ಗೌತಮ್ (ನಿರ್ದೇಶಕ) ನನಗೆ ಕೆಲ ದೃಶ್ಯವನ್ನು ತೋರಿಸಿದರು ಮತ್ತು ನನಗೆ ನಂಬಿಕೆ ಇದೆ ತುಂಬಾ ಪ್ರಾಮಿಸಿಂಗ್ ಆಗಿದೆ. ನಾನು ಅವರ ಆಂತರಿಕ ಭಾವನೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ. ನಾನು ಅವರ ಮುಖದಲ್ಲಿ ನೋಡಬಲ್ಲೆ. ಗೌತಮ್ ಒಬ್ಬ ಅಂತರ್ಮುಖಿ. ಹಿಂದಿ ವರ್ಷನ್‌ನಿಂದ ತುಂಬ ಸಂತೋಷವಾಗಿದ್ದಾರೆ. ಅದು ಎಷ್ಟು ಅದ್ಭುತವಾಗಿ ಬಂದಿದೆ ಎಂದು ನಾನು ಊಹಿಸಬಹುದು" ಎಂದು ಹೇಳಿದ್ದಾರೆ.

ಶಾಹಿದ್ ಅದ್ಭುತವಾಗಿ ನಟಿಸಲಿದ್ದಾರೆ- ನಾನಿ

ಶಾಹಿದ್ ಅದ್ಭುತವಾಗಿ ನಟಿಸಲಿದ್ದಾರೆ- ನಾನಿ

ತಾನು ಕೂಡ ಹಿಂದಿ ವರ್ಷನ್‌ಗಾಗಿ ಎದುರು ನೋಡುತ್ತಿರುವುದಾಗಿ ನಾನಿ ಹೇಳಿದ್ದಾರೆ. ಶಾಹಿದ್ ಅದ್ಭುತ ನಟ, ಮೂಲ ಸಿನಿಮಾಗಿಂತ ಶಾಹಿದ್ ಉತ್ತಮವಾಗಿ ನಟಿಸಲಿದ್ದಾರೆ ಎಂದು ನಾನಿ ಹಾಡಿ ಹೊಗಳಿದ್ದಾರೆ. ಇದೇ ಸಮಯದಲ್ಲಿ ಚಿತ್ರಮಂದಿರಗಳು ಮುಚ್ಚಿದ ಬಗ್ಗೆ ಮಾತನಾಡಿ, ಚಿತ್ರಮಂದಿರಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಚಿತ್ರಮಂದಿರಗಳ ಬಗ್ಗೆ ನಾನಿ ಪ್ರತಿಕ್ರಿಯೆ

ಚಿತ್ರಮಂದಿರಗಳ ಬಗ್ಗೆ ನಾನಿ ಪ್ರತಿಕ್ರಿಯೆ

ನಾವು ಚಿತ್ರಮಂದಿರಗಳಲ್ಲಿ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇವೆ. ನಾನು ನಟ ಅಲ್ಲದಿದ್ದರೂ, ನಾನು ಆ ಅನುಭವವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಈಗ ಜಗತ್ತು ಬಿಕ್ಕಟ್ಟನ್ನು ಎದುರಿಸುತ್ತಿದೆ. ನಾವು ಪರ್ಯಾಯ ಆಯ್ಕೆಗಳಿಗೆ ಹೊಂದಿಕೊಳ್ಳಬೇಕು. OTT ಕೂಡ ಒಂದು ಉತ್ತಮ ಆಯ್ಕೆಯಾಗಿ"ಎಂದು ನಟ ನಾನಿ ಅಭಿಪ್ರಾಯ ಪಟ್ಟರು.

ನಂಬರ್‌ನಲ್ಲಿ ಜರ್ಸಿ ಬಿಡುಗಡೆ

ನಂಬರ್‌ನಲ್ಲಿ ಜರ್ಸಿ ಬಿಡುಗಡೆ

ಅಂದಹಾಗೆ ಬಹುನಿರೀಕ್ಷೆಯ ಜರ್ಸಿ ಹಿಂದಿ ರಿಮೇಕ್ ನವೆಂಬರ್‌ನಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ನವೆಂಬರ್ 5ರಂದು ಬಿಡುಗಡೆ ಮಾಡಲು ಸಿನಿಮಾ ತಂಡ ಸಜ್ಜಾಗಿದೆ.

ನಾನಿ ಬಗ್ಗೆ ಶಾಹಿದ್ ಕಪೂರ್ ಹೇಳಿದ್ದೇನು?

ನಾನಿ ಬಗ್ಗೆ ಶಾಹಿದ್ ಕಪೂರ್ ಹೇಳಿದ್ದೇನು?

ಅಂದಹಾಗೆ ಇತ್ತೀಚಿಗಷ್ಟೆ ನಟ ಶಾಹಿದ್ ಕಪೂರ್ ಜರ್ಸಿ ಸಿನಿಮಾದ ಬಗ್ಗೆ ಮತ್ತು ನಾನಿ ಬಗ್ಗೆ ಮಾತನಾಡಿದ್ದರು. "ಈ ಸಿನಿಮಾದಲ್ಲಿ ನಾನಿ ನನ್ನನ್ನು 5-6 ಬಾರಿ ಕಣ್ಣೀರು ಹಾಕುವಂತೆ ಮಾಡಿದ್ದಾರೆ" ಎಂದು ಶಾಹಿದ್ ಬಹಿರಂಗ ಪಡಿಸಿದ್ದರು. ನಾನಿ ನಟನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಶಾಹಿದ್, ಜರ್ಸಿ ಚಿತ್ರವನ್ನು ಶಾಹಿದ್ ತನ್ನ ವೈಯಕ್ತಿಕ ಜೀವನದೊಂದಿಗೆ ಹೋಲಿಸಿಕೊಂಡಿದ್ದರು. "ನನಗೆ 40 ವರ್ಷ. ನನ್ನ ಜೀವನ ಕೂಡ ಜರ್ಸಿ ಕಥೆಗೆ ಹತ್ತಿರವಾಗಿದೆ. ತಡವಾದ ಯಶಸ್ಸಿನ ಬಗ್ಗೆ ಹೇಳುವ ಕಥೆ. ತಡವಾಗಿ ಯಶಸ್ಸು ಕಂಡವರಲ್ಲಿ ನಾನು ಕೂಡ ಒಬ್ಬ. ಜರ್ಸಿ ಒಂದು ಕುಟುಂಬದ ಚಿತ್ರ. ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ" ಎಂದು ಹೇಳಿದರು.

ನಾನಿ ನನ್ನನ್ನು ಅನೇಕ ಬಾರಿ ಅಳುವಂತೆ ಮಾಡಿದ್ದರು

ನಾನಿ ನನ್ನನ್ನು ಅನೇಕ ಬಾರಿ ಅಳುವಂತೆ ಮಾಡಿದ್ದರು

ನಾನಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಶಾಹಿದ್ "ನಾನಿ ಅದ್ಭುತ ನಟ. ಈ ಸಿನಿಮಾ ನೋಡುವಾಗ ಅನೇಕ ಬಾರಿ ಅಳುವಂತೆ ಮಾಡಿದರು" ಎಂದು ಬಹಿರಂಗ ಪಡಿಸಿದರು. ಜರ್ಸಿ ಸಿನಿಮಾ ನೋಡಿದ ಬಳಿಕ ವೃತ್ತಿಜೀವನದ ಪ್ರಮುಖ ಅಂಶವನ್ನು ಅರಿತುಕೊಂಡಿರುವುದಾಗಿ ಹೇಳಿದ್ದರು. ಜೊತೆಗೆ ಉತ್ತಮ ಕಥೆಯ ಮಹತ್ವ ಕೂಡ ಅರಿವಾಗಿದೆ ಎಂದು ಶಾಹಿದ್ ಹೇಳಿದ್ದರು. ಪ್ರೇಕ್ಷಕರಿಗೆ ಉತ್ತಮ ಕಥೆ ತರಲು ನಿರ್ಧರಿಸಿರುವುದಾಗಿ ಶಾಹಿದ್ ಹೇಳಿದ್ದಾರೆ.

ಹಿಂದಿ ಜರ್ಸಿಯಲ್ಲಿ ಮೃಣಾಲ್ ನಾಯಕಿ

ಹಿಂದಿ ಜರ್ಸಿಯಲ್ಲಿ ಮೃಣಾಲ್ ನಾಯಕಿ

ಹಿಂದಿ ಜರ್ಸಿಯಲ್ಲಿ ಶಾಹಿದ್ ಕಪೂರ್‌ಗೆ ನಾಯಕಿಯಾಗಿ ಮೃಣಾಲ್ ಠಾಕೂರ್ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗಿನಲ್ಲಿ ಶ್ರದ್ಧಾ ಶ್ರೀನಾಥ್ ನಟಿಸಿದ್ದರು. ಇನ್ನು ಮೂಲ ನಿರ್ದೇಶಕರಾದ ಗೌತಮ್ ಹಿಂದಿ ರಿಮೇಕ್‌ಗೂ ಆಕ್ಷನ್ ಕಟ್ ಹೇಳುವ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.

More from Filmibeat

English summary
Tollywood star Nani says Shahid kapoor do it better in Jersey Hindi remake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X