For Quick Alerts
  ALLOW NOTIFICATIONS  
  For Daily Alerts

  ಧೋನಿ ಪುತ್ರಿಗೆ ಅತ್ಯಾಚಾರ ಬೆದರಿಕೆ: ಪ್ರತಿಕ್ರಿಯೆ ನೀಡಿದ ನಟ ಮಾಧವನ್

  |

  ಕ್ರಿಕೆಟಿಗ ಎಂ ಎಸ್ ಧೋನಿ ಅವರ 5 ವರ್ಷದ ಮಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು 16 ವರ್ಷದ ಬಾಲಕನನ್ನು ಬಂಧಿಸಿದ್ದಾರೆ. ಪೊಲೀಸರ ತ್ವರಿತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಖ್ಯಾತ ನಟ ಆರ್ ಮಾಧವನ್ ಪ್ರತಿಕ್ರಿಯೆ ನೀಡಿದ್ದಾರೆ.

  2020 ಐಪಿಎಲ್ ನಲ್ಲಿ ಕಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ ಸೋತ ಬಳಿಕ 16 ವರ್ಷದ ಬಾಲಕ ಧೋನಿ ಮಗಳಿಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ್ದ. ಈ ಸಂಬಂಧ ಧೋನಿ ಪತ್ನಿ ಸಾಕ್ಷಿ ರಾಂಚಿ ಪೊಲೀಸರಿಗೆ ದೂರು ನೀಡಿದ್ದರು. ಬೆದರಿಕೆ ಹಾಕಿರುವ ಬಾಲಕ 12ನೇ ತರಗತಿ ಓದುತ್ತಿರುವ ಕಛ್ ಸಮೀಪದ ಮುಂದ್ರಾ ಗ್ರಾಮದ ನಿವಾಸಿ ಎಂದು ಪೊಲೀಸರು ಹೇಳಿದ್ದಾರೆ.

  ತೆಲುಗು ಸಿನಿಮಾದಲ್ಲಿ ಮಾಧವನ್ ವಿಲನ್ ಪಾತ್ರ: ಟ್ವೀಟ್ ಮೂಲಕ ಸ್ಪಷ್ಟನೆತೆಲುಗು ಸಿನಿಮಾದಲ್ಲಿ ಮಾಧವನ್ ವಿಲನ್ ಪಾತ್ರ: ಟ್ವೀಟ್ ಮೂಲಕ ಸ್ಪಷ್ಟನೆ

  ಭಾನುವಾರ ರಾತ್ರಿ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಪೊಲೀಸರ ತ್ವರಿತ ಕ್ರಮಕ್ಕೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ನಟ ಮಾಧವನ್ ಸಹ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

  "ಎಂ.ಎಸ್ ಧೋನಿ ಮಗಳ ವಿರುದ್ಧ ಬೆದರಿಕೆ ಹಾಕಿದ್ದವರನ್ನು ಬಂಧಿಸಲಾಗಿದೆ: ಪೊಲೀಸರು ಉತ್ತಮವಾದ ಕೆಲಸ ಮಾಡಿದ್ದಾರೆ. ಮುಖ ತೋರಿಸದ ರಾಕ್ಷಸರಿಗೆ ಕಾನೂನು ಮತ್ತು ದೇವರ ಭಯ ಹುಟ್ಟಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಏನು ಬೇಕಾದರು ಮಾಡಬಹುದು, ಏನು ಬೇಕಾದರೂ ಹೇಳಬಹುದು ಎಂದುಕೊಂಡಿದ್ದರೆ ಅವರು ಹದಿಹರಿಯದವರಾದರೂ ಸರಿ ಅಂತವರನ್ನು ಹತ್ತಿಕ್ಕಬೇಕು" ಎಂದು ಟ್ವೀಟ್ ಮಾಡಿದ್ದಾರೆ.

  ಈ ಘಟನೆ ಬಳಿಕ ರಾಂಚಿಯಲ್ಲಿರುವ ಧೋನಿ ತೋಟದ ಮನೆಗೆ ಭದ್ರತೆ ನೀಡಲಾಗಿದೆ. ಅಲ್ಲಿ ಅವರ ಮಗಳು ಮತ್ತು ಪತ್ನಿ ನೆಲೆಸಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಈ ಘಟನೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

  English summary
  Actor R Madhavan reaction to threats against MS Dhoni's daughter. He Applauds Police for Arresting Teenager Who Threats Against MS Dhoni's Daughter.
  Monday, October 12, 2020, 13:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X