twitter
    For Quick Alerts
    ALLOW NOTIFICATIONS  
    For Daily Alerts

    ಹತ್ತನೇ ತರಗತಿಯಲ್ಲಿ ಪಡೆದಿದ್ದು ಇಷ್ಟೇ ಮಾರ್ಕ್ಸ್: ಅಂಕ ಬಹಿರಂಗಪಡಿಸಿದ ಮಾಧವನ್

    |

    ವಿವಿಧೆಡೆ ಬುಧವಾರ ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಕಡಿಮೆ ಅಂಕ ಪಡೆದಿದ್ದಕ್ಕೆ ಬೇಸರಗೊಂಡಿರುವ ಮಕ್ಕಳಿಗೆ ನಟ ಆರ್. ಮಾಧವನ್ ಸ್ಫೂರ್ತಿ ತುಂಬುವ ಮಾತುಗಳನ್ನಾಡಿದ್ದಾರೆ. ಜೀವನದಲ್ಲಿ ಸಣ್ಣಪುಟ್ಟ ಹಿನ್ನಡೆಗಳು ಸೋಲೇ ಅಲ್ಲ ಎಂಬುದಕ್ಕೆ ಅವರು ತಾವು 10ನೇ ತರಗತಿ ಬೋರ್ಡ್ ಎಕ್ಸಾಮಲ್ಲಿ ಪಡೆದಿದ್ದ ಅಂಕಗಳನ್ನು ಬಹಿರಂಗಪಡಿಸುವ ಮೂಲಕ ವಿದ್ಯಾರ್ಥಿಗಳನ್ನು ಉತ್ತೇಜಿಸಿದ್ದಾರೆ. ಇದು ಜೀವನದ ಆರಂಭವಷ್ಟೇ ಎಂದು ಹೇಳಿದ್ದಾರೆ.

    Recommended Video

    Kannad Gothilla :ರಚಿತಾ ರಾಮ್ ಚಾನ್ಸ್ ಮಿಸ್ ಮಾಡ್ಕೊಂಡ್ರು ಹರಿಪ್ರಿಯಾ ಕ್ಯಾಚ್ ಹಾಕೊಂಡ್ರು |Mayuraa Raghavendra

    ನಿರೀಕ್ಷಿಸಿದಷ್ಟು ಅಂಕಗಳು ಬಂದಿಲ್ಲ ಎಂದು ಕಂಗೆಡುವುದು ಬೇಡ. ತಮ್ಮ ಜೀವನದಲ್ಲಿ ಏನನ್ನು ಸಾಧಿಸಬೇಕೆಂದು ಬಯಸಿರುತ್ತೀರೋ ಅದನ್ನು ತಡೆಯಲು ಅಂಕಗಳಿಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ವಿವಿಧ ರಾಜ್ಯಗಳಲ್ಲಿ 10 ಮತ್ತು 12ನೆಯ ತರಗತಿಗಳ ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿದೆ. ಅವರಿಗೆಲ್ಲ ಮಾಧವನ್ ಸ್ವಲ್ಪ ತಮಾಷೆಯಾಗಿಯೇ ಸ್ಫೂರ್ತಿ ತುಂಬುವ ಮಾತನ್ನಾಡಿದ್ದಾರೆ. ಮುಂದೆ ಓದಿ.

    ನನ್ನ ಅಂಕಗಳೂ ಕಡಿಮೆ ಇತ್ತು

    ನನ್ನ ಅಂಕಗಳೂ ಕಡಿಮೆ ಇತ್ತು

    'ತಮ್ಮ ಪರೀಕ್ಷೆಗಳ ಫಲಿತಾಂಶ ಪಡೆದ ಎಲ್ಲರಿಗೂ... ತಮ್ಮ ನಿರೀಕ್ಷೆಗಳನ್ನು ಮೀರಿದವರಿಗೆ ಮತ್ತು ಸಾಧನೆ ಮಾಡಿದವರಿಗೆ ಅಭಿನಂದನೆಗಳು. ಹಾಗೆಯೇ ಉಳಿದವರಿಗೆ, ನಾನು ಪರೀಕ್ಷೆಯಲ್ಲಿ ಶೇ 58ರಷ್ಟು ಅಂಕ ಪಡೆದಿದ್ದೆ ಎಂದು ತಿಳಿಸಲು ಬಯಸುತ್ತೇನೆ' ಎಂದು ಹೇಳಿದ್ದಾರೆ.

    ಆಟ ಇನ್ನೂ ಶುರುವಾಗಿಲ್ಲ

    ಆಟ ಇನ್ನೂ ಶುರುವಾಗಿಲ್ಲ

    'ನನ್ನ ಆತ್ಮೀಯ ಸ್ನೇಹಿತರೇ ಇನ್ನೂ ನಿಜವಾದ ಆಟ ಶುರುವಾಗಿಲ್ಲ...' ಎಂದು ಮಾಧವನ್ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ತಮ್ಮದೇ ಹಳೆಯ ಚಿತ್ರವೊಂದರ ತಮಾಷೆಯ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಇಂಗ್ಲಿಷ್ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಅವರು ಟ್ವೀಟ್ ಮಾಡಿದ್ದಾರೆ.

    ಅಂತರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಮಾಧವನ್ ಪುತ್ರಅಂತರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಮಾಧವನ್ ಪುತ್ರ

    ನಿಜ ಬದುಕಲ್ಲೂ ಸ್ಫೂರ್ತಿ

    ನಿಜ ಬದುಕಲ್ಲೂ ಸ್ಫೂರ್ತಿ

    ಮಾಧವನ್ ಪೋಸ್ಟ್‌ಗೆ ವಿವಿಧ ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ತಾವು ಕೂಡ ಕಡಿಮೆ ಅಂಕಗಳನ್ನು ಪಡೆದಿದ್ದರೂ ಪಿಎಚ್‌ಡಿಯಂತಹ ಪದವಿಗಳನ್ನು ಮುಗಿಸಿ ಉನ್ನತ ಕೆಲಸದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ನಿಮ್ಮ ಥ್ರೀ ಈಡಿಯಟ್ಸ್ ಚಿತ್ರದಂತೆಯೇ ನೈಜ ಬದುಕಿನಲ್ಲಿಯೂ ಸ್ಫೂರ್ತಿಯಾಗಿದ್ದೀರಿ ಎಂದು ಶ್ಲಾಘಿಸಿದ್ದಾರೆ.

    ನನ್ನಪ್ಪ ಹೀಗೆಯೇ ನೋಡಿದ್ದರು

    ನನ್ನಪ್ಪ ಹೀಗೆಯೇ ನೋಡಿದ್ದರು

    ಕೆಲವರು ಮಾಧವನ್ ಅವರ ಪೋಸ್ಟ್‌ಗೆ ತಮಾಷೆಯ ಪ್ರತಿಕ್ರಿಯೆಗಳನ್ನು ಕೂಡ ನೀಡಿದ್ದಾರೆ. 'ನಿಮ್ಮ ಅಪ್ಪ ಯಾರು? ನನ್ನ 12ನೇ ತರಗತಿ ಪರೀಕ್ಷೆಯ ಅಂಕಗಳನ್ನು ಹೇಳಿದಾಗ ನನ್ನಪ್ಪ ನನ್ನನ್ನು ಹೀಗೆಯೇ ನೋಡಿದ್ದರು' ಎಂದು ಹೇಳಿದ್ದಾರೆ. ಇನ್ನು ಕೆಲವರು 'ನಿಮಗರ್ಥವಾಗೊಲ್ಲ ಬಿಡಿ ಸರ್' ಎಂದಿದ್ದಾರೆ. 'ನಿಮಗೆ ಪಿಯು ಕಾಲೇಜಿಗೆ ಪ್ರವೇಶ ನೀಡಿದವರು ಯಾರು? ನಮಗೆ ಇಲ್ಲಿ ಕನಿಷ್ಠ ಶೇ 75ರಷ್ಟು ಅಂಕ ಇರಲೇಬೇಕು ಎನ್ನುತ್ತಿದ್ದಾರೆ. ನೀವು ಓದಿದ ಕಾಲೇಜಲ್ಲೇ ಸೇರಿಸಿ' ಎಂದು ಕಾಲೆಳೆದಿದ್ದಾರೆ.

    ಜನಿವಾರ ಧರಿಸುವ ಮನೆಯಲ್ಲಿ ಶಿಲುಬೆ ಯಾಕೆ? ಗರಂ ಆದ ನೆಟ್ಟಿಗರಿಗೆ ಮಾಧವನ್ ಖಡಕ್ ಉತ್ತರಜನಿವಾರ ಧರಿಸುವ ಮನೆಯಲ್ಲಿ ಶಿಲುಬೆ ಯಾಕೆ? ಗರಂ ಆದ ನೆಟ್ಟಿಗರಿಗೆ ಮಾಧವನ್ ಖಡಕ್ ಉತ್ತರ

    English summary
    Actor R Madhavan has revealed he got 58% at board exam to motivate the students who disappointed with their marks.
    Thursday, July 16, 2020, 16:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X