For Quick Alerts
  ALLOW NOTIFICATIONS  
  For Daily Alerts

  ಉತ್ತಮ ಚಿಕಿತ್ಸೆ ಸಿಕ್ಕಿದ್ರೆ ನಾನು ಬದುಕುಳಿಯುತ್ತಿದ್ದೆ: ಸಾವಿಗೂ ಮುನ್ನ ನಟ ರಾಹುಲ್ ಪೋಸ್ಟ್ ವೈರಲ್

  |

  ಕೊರೊನಾ ವೈರಸ್ ವಿರುದ್ಧ ಕಳೆದ ಕೆಲವು ದಿನಗಳಿಂದ ಹೋರಾಟ ನಡೆಸುತ್ತಿದ್ದ ನಟ ರಾಹುಲ್ ವೊಹ್ರಾ ಕೊನೆಯುಸಿರೆಳೆದಿದ್ದಾರೆ. ಸಾವಿಗೂ ಮುನ್ನ ಫೇಸ್ ಬುಕ್ ನಲ್ಲಿ ರಾಹುಲ್ ಹಾಕಿರುವ ಪೋಸ್ಟ್ ಈಗ ವೈರಲ್ ಆಗಿದೆ. ಬದುಕುವ ಆಸೆ ಹೊಂದಿದ್ದ ರಾಹುಲ್ ಕೊನೆಯ ಸಂದೇಶ ಮನಕಲಕುತ್ತಿದೆ.

  ನಟ ರಾಹುಲ್ ವೊಹ್ರಾ ಸಾವಿನ ಸುದ್ದಿಯನ್ನು ನಿರ್ದೇಶಕ ಅರವಿಂದ್ ಗೋಹರ್ ಖಚಿತಪಡಿಸಿದ್ದಾರೆ. ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದ ರಾಹುಲ್ ಕಳೆದ ಕೆಲವು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ದೆಹಲಿಯ ತಾಹಿರ್ ಪುರದ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ರಾಹುಲ್ ಚಿಕಿತ್ಸೆ ಪಡೆಯುತ್ತಿದ್ದರು.

  ಮತ್ತೊಬ್ಬ ಪ್ರೀತಿ ಪಾತ್ರರನ್ನು ಕಳೆದುಕೊಂಡ ನಟಿ ರಿಯಾ ಚಕ್ರವರ್ತಿಮತ್ತೊಬ್ಬ ಪ್ರೀತಿ ಪಾತ್ರರನ್ನು ಕಳೆದುಕೊಂಡ ನಟಿ ರಿಯಾ ಚಕ್ರವರ್ತಿ

  35 ವರ್ಷದ ನಟ ಮತ್ತು ಯೂಟ್ಯೂಬರ್ ರಾಹುಲ್ ಸಾವಿಗೂ ಮುನ್ನ ದಿನ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ. 'ಉತ್ತಮ ಚಿಕಿತ್ಸೆ ಸಿಕ್ಕಿದ್ದರೆ ಬಹುಶಃ ನಾನು ಬದುಕುಳಿಯುತ್ತಿದೆ. ಮತ್ತೆ ಹುಟ್ಟಿ ಬರುತ್ತೇನೆ. ಈಗ ಎಲ್ಲಾ ಧೈರ್ಯವನ್ನು ಕಳೆದುಕೊಂಡಿದ್ದೇನೆ' ಎಂದು ಪೋಸ್ಟ್ ಮಾಡಿ ಪ್ರಧಾನಿ ನರೇಂದ್ರ ಮೋದಿಗೆ ಟ್ಯಾಗ್ ಮಾಡಿದ್ದಾರೆ.

  ಈ ಬಗ್ಗೆ ನಿರ್ದೇಶಕ ಮತ್ತು ರಾಹುಲ್ ಸ್ನೇಹಿತ ಅರವಿಂದ್ ಸಾಮಾಜಿಕ ಜಾಲತಾಣದಲ್ಲಿ, ಪ್ರತಿಭಾಂತ ನಟ ರಾಹುಲ್ ವೊಹ್ರಾ ಇನ್ನಿಲ್ಲ. ಉತ್ತಮ ಚಿಕಿತ್ಸೆ ದೊರೆತಿದ್ದರೆ ಅವರ ಜೀವವನ್ನು ಉಳಿಸಬಹುದಿತ್ತು. ರಾಜೀವ್ ಗಾಂಧಿ ಆಸ್ಪತ್ರೆಯಿಂದ ದ್ವಾರಕಾದ ಆಯುಷ್ಮಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನಾವು ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ' ಎಂದು ಬರೆದುಕೊಂಡಿದ್ದಾರೆ.

  ಅಲ್ಲು ಅರ್ಜುನ್ ಮತ್ತು ಪ್ರಭಾಸ್ ಸಿನಿಮಾಗಳಲ್ಲಿ ಸುದೀಪ್ ನಟನೆ!! | Filmibeat Kannada

  ಉತ್ತರಖಂಡ್ ಮೂಲದ ರಾಹುಲ್ ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದರು. ಕೆಲವು ಸಿನಮಾಗಳಲ್ಲಿಯೂ ರಾಹುಲ್ ನಟಿಸಿದ್ದಾರೆ. ನೆಟ್ ಫ್ಲಿಕ್ಸ್ ಸರಣಿ ಅನ್ ಫ್ರೀಡಂನಲ್ಲಿ ರಾಹುಲ್ ನಟಿಸಿದ್ದಾರೆ. ಇದರಲ್ಲಿ ರಾಹುಲ್ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

  English summary
  Actor Rahul Vohra passed away due to Coronavirus. He shares helpless post befor dies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X