For Quick Alerts
  ALLOW NOTIFICATIONS  
  For Daily Alerts

  ರಾಜೇಶ್ ಖನ್ನಾ ಮೊಬೈಲ್ ನಂಬರ್ ಇನ್ನೂ ಜೀವಂತ

  By Rajendra
  |

  ಬಾಲಿವುಡ್ ಮೊಟ್ಟ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಗತಿಸಿದ ಬಳಿಕ (ಜು.18, 2012) ಅವರ ವಿವಿಐಪಿ ಮೊಬೈಲ್ ಫೋನ್ ನಂಬರನ್ನೂ ಹಲವರು ಡಿಲೀಟ್ ಮಾಡಿರಲೂಬಹುದು. ಆದರೆ ಅವರ ಮೊಬೈಲ್ ಸಂಖ್ಯೆ ಮಾತ್ರ ಇನ್ನೂ ಜೀವಂತವಾಗಿದೆ!

  ಈ ಬಗ್ಗೆ ಖನ್ನಾ ಕುಟುಂಬಿಕರು ವಿವರ ನೀಡಿದ್ದು, "ಖನ್ನಾ ಅವರ ಮೊಬೈಲ್ ಫೋನ್ ಡಿಂಪಲ್ ಕಪಾಡಿಯಾ ಅವರ ಬಳಿಯೇ ಇದೆ. ಆ ಮೊಬೈಲನ್ನು ಅವರು ಬಳಸುತ್ತಿದ್ದಾರೆ. ಕುಟುಂಬಿಕರು ಹಾಗೂ ಆಪ್ತಸ್ನೇಹಿತರಿಗೆ ಕರೆ ಮಾಡಬೇಕಾದರೆ ಇದೇ ಸಂಖ್ಯೆಯನ್ನು ಅವರು ಬಳಸುತ್ತಿದ್ದಾರೆ" ಎಂದಿದ್ದಾರೆ.

  ಈ ನಂಬರನ್ನು ನಿಷ್ಕ್ರಿಯಗೊಳಿಸಬೇಕು ಎಂದು ಮೊದಲು ಅಂದುಕೊಂಡಿದ್ದರಂತೆ. ಆದರೆ ಈ ನಂಬರ್ ನನಗೇ ಇರಲಿ ಎಂದು ಡಿಂಪಲ್ ಬಳಸುತ್ತಿದ್ದಾರೆ. ಖನ್ನಾ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾಗ ಬರುತ್ತಿದ್ದ ಕರೆಗಳನ್ನು ಡಿಂಪಲ್ ಅವರೇ ರಿಸೀವ್ ಮಾಡುತ್ತಿದ್ದರಂತೆ.

  ಖನ್ನಾ ಮೊಬೈಲ್ ಸಂಖ್ಯೆಗೆ ಬರುತ್ತಿದ್ದ ಎಸ್ಎಂಎಸ್ ಗಳು ಹಾಗೂ ಕರೆ ಮಾಡಿದ ಅವರ ಆರೋಗ್ಯ ವಿಚಾರಿಸುತ್ತಿದ್ದವರ ಬಗ್ಗೆ ಡಿಂಪಲ್ ವಿವರ ನೀಡುತ್ತಿದ್ದರಂತೆ. ಈಗ ಡಿಂಪಲ್ ಅವರು ಈ ಸಂಖ್ಯೆಯನ್ನು ಅಧಿಕೃತವಾಗಿ ತಮ್ಮ ಹೆಸರಿಗೆ ವರ್ಗಾಯಿಸುಕೊಳ್ಳಲು ಮುಂದಾಗಿದ್ದಾರೆ.

  ಶೀಘ್ರದಲ್ಲೇ ರಾಜೇಶ್ ಖನ್ನಾ ಅವರ ವಿವಿಐಪಿ ನಂಬರ್ ಡಿಂಪಲ್ ಅವರ ಹೆಸರಿಗೆ ವರ್ಗವಾಗಲಿದೆ ಎನ್ನುತ್ತವೆ ಮೂಲಗಳು. ಬಾಲಿವುಡ್ ನ ಮತ್ತೊಬ್ಬ ಹೆಸರಾಂತ ನಟ ದೇವ್ ಆನಂದ್ ಅವರ ವಿವಿಐಪಿ ಸಂಖ್ಯೆಯೂ ಅವರ ನಿಧನ ಬಳಿಕ ನಿಷ್ಕ್ರಿಯವಾಗಿರಲಿಲ್ಲ. ಅವರ ಮಗ ಸುನೀಲ್ ಆನಂದ್ ಆ ಸಂಖ್ಯೆಯನ್ನು ಬಳಸುತ್ತಿದ್ದಾರೆ.

  ಡಿಂಪಲ್ ಕಪಾಡಿಯಾ ಅವರಿಗೆ ರಾಜೇಶ್ ಖನ್ನಾ ದುಗ್ಗಾಣಿಯೂ ಬಿಟ್ಟು ಹೋಗಿಲ್ಲ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಓದಿರುತ್ತೀರಾ. ನಿಜ ಇರಬಹುದು. ಆದರೆ ಖನ್ನಾ ಸಾಹೇಬರು ಜತನದಿಂದ ಕಾಪಾಡಿಕೊಂಡು ಬಂದಿದ್ದ ಅವರ ಮೊಬೈಲ್ ನಂಬರ್ ಡಿಂಪಲ್ ಅವರಿಗೆ ಬಿಟ್ಟುಹೋಗಿದ್ದಾರೆ. (ಏಜೆನ್ಸೀಸ್)

  English summary
  After superstar Rajesh Khanna's death, people were thinking of deleting Rajesh Khanna's VVIP mobile number from their phones. But it has been reported that Dimple Kapadia does not want her late husband's phone number to get deactivated, so she has decided to use the number herself.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X