For Quick Alerts
  ALLOW NOTIFICATIONS  
  For Daily Alerts

  ಪ್ರೀತಿಯ ಪತಿಗೆ ಆಲಿಯಾ ಮುದ್ದಾದ ವಿಶ್‌: ರಣಬೀರ್‌ ಕ್ಯೂಟ್‌ ಫೋಟೋ ವೈರಲ್‌

  |

  ಬಾಲಿವುಡ್‌ನ ಯಶಸ್ವಿ ನಾಯಕ ರಣಬೀರ್ ಕಪೂರ್‌ ಇಂದು( ಸಪ್ಟೆಂಬರ್ 28) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 40ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ರಣಬೀರ್ ಕಪೂರ್‌ಗೆ ಜನ್ಮ ದಿನದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಬಾಲಿವುಡ್‌ ತಾರೆಯರು ಸೇರಿದಂತೆ ಭಾರತೀಯ ಚಿತ್ರದ ಅನೇಕ ಗಣ್ಯರು ರಣಬೀರ್ ಕಪೂರ್‌ಗೆ ಶುಭಾಶಯ ಕೋರಿದ್ದಾರೆ.

  ಬಾಲಿವುಡ್‌ನ ಕ್ಯೂಟ್‌ ಜೋಡಿಯಾಗಿರುವ ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ತಮ್ಮದೇ ಆದ ವಿಶೇಷತೆಗಳಿಂದ ಆಗಾಗ ಜನರಿಗೆ ಹತ್ತಿರವಾಗುತ್ತಿದ್ದಾರೆ. ರಣಬೀರ್‌ ಕಪೂರ್‌ಗೆ ವರ್ಷದ ಹುಟ್ಟುಹಬ್ಬ ತುಂಬಾ ವಿಶೇಷವಾಗಿದ್ದು, ತಾವು ತಂದೆಯಾಗುತ್ತಿರುವುದೇ ಅವರಿಗೆ ವಿಶೇಷವಾದ ಉಡುಗೊರೆಯಾಗಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರೀತಿಯ ಪತಿಗೆ ಆಲಿಯಾ ಭಟ್‌ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

  ವರದಿಗಳ ಪ್ರಕಾರ ಆಲಿಯಾ ಭಟ್‌ ಇಂದಿನ ( ಸಪ್ಟೆಂಬರ್ 28) ಪೂರ್ತಿ ದಿನವನ್ನು ತಮ್ಮ ಪತಿ ರಣಬೀರ್‌ ಕಪೂರ್‌ ಅವರೊಂದಿಗೆ ಕಳೆದಿದ್ದು, ಎಷ್ಟು ಸಾಧ್ಯವೋ ಅಷ್ಟು ಸಪ್ರೈಸ್‌ಗಳನ್ನು ನೀಡುವ ಮೂಲಕ ಜೊತೆಯಲ್ಲಿ ಉತ್ತಮ ಸಮಯವನ್ನು ಕಳೆದಿದ್ದಾರೆ. ಅಲ್ಲದೇ ರಣಬೀರ್‌ ಕಪೂರ್‌ ಮೆಚ್ಚಿನ ರೆಸ್ಟೋರೆಂಟ್‌ಗೆ ಕೂಡ ಆಲಿಯಾ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

  ಇನ್ನು ಆಲಿಯಾ ಭಟ್‌ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ರಣಬೀರ್‌ ಕಪೂರ್‌ಗೆ ಬಹಳ ಮುದ್ದಾಗಿ ಶುಭಾಶಯ ಕೋರಿದ್ದಾರೆ. ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ರಣಬೀರ್‌ ಕಪೂರ್ ಬಿಳಿ ಬಣ್ಣದ ಸೂಟ್‌ ಧರಿಸಿರುವ ಫೋಟೋ ಹಂಚಿಕೊಂಡಿರುವ ಆಲಿಯಾ, ಹುಟ್ಟು ಹಬ್ಬದ ಶುಭಾಶಯ ತಿಳಿಸಿ ಹ್ಯಾಪಿ 40 ಬೇಬಿ ಎಂದು ಬರೆದುಕೊಂಡಿದ್ದಾರೆ. ಪತಿಗೆ ಆಲಿಯಾ ಭಟ್‌ ತಿಳಿಸಿರುವ ಕ್ಯೂಟ್‌ ಶುಭಾಶಯಕ್ಕೆ ಬಾಲಿವುಡ್‌ನ ನಟಿಯರು ಪ್ರತಿಕ್ರಿಯಿಸಿದ್ದು, ಹಾರ್ಟ್ ಇಮೋಜಿ ನೀಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  2022 ಏಪ್ರಿಲ್‌ 14ರಂದು ಮದುವೆಯಾಗಿರುವ ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ಜೋಡಿ ಸದ್ಯ ತಂದೆ-ತಾಯಿಯಾಗುವ ಖುಷಿಯಲ್ಲಿದ್ದಾರೆ. ಸದ್ಯ ರಣಬೀರ್‌ ದಂಪತಿ ತಮ್ಮ ಪುಟ್ಟ ಕುಟುಂಬಕ್ಕೆ ಹೊಸ ಸದಸ್ಯನ ಆಗಮನದ ನಿರೀಕ್ಷೆಯಲ್ಲಿದೆ. ಜೊತೆಗೆ ರಣಬೀರ್‌ ಕಪೂರ್‌ ಹಾಗೂ ಆಲಿಯಾ ಭಟ್‌ ತೆರೆ ಮೇಲೆ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿರುವ 'ಬ್ರಹ್ಮಾಸ್ತ್ರ' ಚಿತ್ರ ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು, ರಣಬೀರ್‌ ಹುಟ್ಟುಹಬ್ಬದ ಖುಷಿ ದುಪ್ಪಟ್ಟಾಗಿದೆ.

  ರಣಬೀರ್‌ ಕಪೂರ್‌ ಹುಟ್ಟಹಬ್ಬಕ್ಕೆ ಅವರ ಸೋದರ ಸಂಬಂಧಿ ಕರೀಷ್ಮಾ ಕಪೂರ್‌ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಕರೀಷ್ಮಾ ಕಪೂರ್, ರಣಬೀರ್‌ ಕಪೂರ್‌ ಅವರ ಬಾಲ್ಯದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇಂದು ರಣಬೀರ್ ಕಪೂರ್‌ ಜೊತೆಗೆ ಕರೀಷ್ಮಾ ಕಪೂರ್‌ ಅವರ ಚಿಕ್ಕಮ್ಮ ರಿಮಾ ಜೈನ್‌ ಹುಟ್ಟುಹಬ್ಬ ಕೂಡ ಆಗಿದ್ದು, ಕರೀಷ್ಮಾ ಕಪೂರ್ ಇಬ್ಬರಿಗೂ ಶುಭಾಶಯ ಕೋರಿದ್ದಾರೆ.

  ಇದು ವಿಶೇಷವಾದ ದಿನ, ಇಂದು( ಸಪ್ಟೆಂಬರ್ 28) ನಮ್ಮ ಕುಟುಂಬದ ಇಬ್ಬರು ಸದಸ್ಯರ ಹುಟ್ಟುಹಬ್ಬ. ಒಬ್ಬರು ಶೀಘ್ರದಲ್ಲೇ ತಂದೆಯಾಗುತ್ತಿದ್ದಾರೆ. ಇನ್ನೊಬ್ಬರು ಕರುಣಮಯಿ ಹೃದಯವುಳ್ಳವರು, ಹ್ಯಾಪಿ ಬರ್ತ್‌ಡೇ ರೀಮಾ ಆಂಟಿ ಹಾಗೂ ಹ್ಯಾಪಿ ೪೦ ರಣಬೀರ್‌ ಎಂದು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಕರೀಷ್ಮಾ ಕಪೂರ್ ಹಂಚಿಕೊಂಡಿದ್ದಾರೆ. ಬಾಲಿವುಡ್‌ನ ಅನೇಕ ತಾರೆಯರು ರಣಬೀರ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದು, ರಣಬೀರ್‌ ಕಪೂರ್‌ ಶುಭಾಶಯ ತಿಳಿಸಿದ ಅಭಿಮಾನಿಗಳಿಗೂ ಹಾಗೂ ನಟ-ನಟಿಯರಿಗೆ ಧನ್ಯವಾದ ತಿಳಿಸಿದ್ದಾರೆ.

  English summary
  Bollywood actress Alia Bhatt sweet post for husband Ranbir Kapoor on his birthday.
  Thursday, September 29, 2022, 10:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X