For Quick Alerts
  ALLOW NOTIFICATIONS  
  For Daily Alerts

  ಮಾಜಿ ಸಿಎಂ ಮಾಯಾವತಿ ಬಗ್ಗೆ ಡರ್ಟಿ ಜೋಕ್; ವಿವಾದದಲ್ಲಿ ನಟ ರಣದೀಪ್ ಹೂಡ

  |

  ಬಾಲಿವುಡ್ ನ ಖ್ಯಾತ ನಟ ರಣದೀಪ್ ಹೂಡ ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ಬಗ್ಗೆ ಕೀಳುಮಟ್ಟದ ಜೋಕ್ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ. ಅಂದಹಾಗೆ ಇದು ಹಲವು ವರ್ಷಗಳ ಹಳೆಯ ವಿಡಿಯೋವಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಮಾಯಾವತಿ ಬಗ್ಗೆ ಕೀಳು ಮಟ್ಟದ ಜೋಕ್ ಮಾಡಿರುವ ರಣದೀಪ್ ಹೂಡ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಾಟ್ ಶೋ ಒಂದರಲ್ಲಿ ರಣದೀಪ್, ಮಾಯಾವತಿ ಬಗ್ಗೆ ಕೆಟ್ಟದಾಗಿ ಹಾಸ್ಯ ಮಾಡಿದ್ದಾರೆ. ಒಬ್ಬ ಮಹಿಳೆ ಬಗ್ಗೆ ಇಂಥ ಕೆಟ್ಟ ಮಾತುಗಳನ್ನು ಆಡುತ್ತೀರಿ ಎನ್ನುವುದಾದರೆ ನಿಮ್ಮ ಮನಸ್ಸಿನಲ್ಲಿ ಎಷ್ಟು ಕೆಟ್ಟತನ ಇದೆ ಎನ್ನುವುದು ಗೊತ್ತಾಗುತ್ತದೆ, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.

  ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, 'ಇದು ಜೋಕ್ ಅಲ್ಲ ರಣದೀಪ್ ಹೂಡ. ಪುರುಷ ರಾಜಕಾರಣಿ ಬಗ್ಗೆ ಯಾರು ಕೊಳಕು ಜೋಕ್ ಮಾಡುವುದಿಲ್ಲ' ಎಂದು ಜರಿಯುತ್ತಿದ್ದಾರೆ. ರಣದೀಪ್ ಹೂಡ ಬಹಿರಂಗವಾಗಿ ಕ್ಷಮೆಯಾಚಿಸಲೇ ಬೇಕೆಂದು ಇನ್ನು ಕೆಲವು ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ.

  ನಾಲ್ಕು ಬಾರಿ ಸಿಎಂ ಆದ ಮಹಿಳೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೀರಲ್ಲಾ ನಿಮ್ಮ ಮನಸ್ಥಿತಿ ಇದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ನಟ ರಣದೀಪ್ ಹೂಡ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕ್ಷಮೆಯಾಚಿಸುತ್ತಾರಾ ಎಂದು ಕಾದು ನೋಡಬೇಕು.

  ಇನ್ಯಾವತ್ತೂ Salman Khan ಸಿನಿಮಾ ವಿಮರ್ಶೆ ಮಾಡೋದಿಲ್ಲ ಎಂದ‌ KRK | Filmibeat Kannada

  ರಣದೀಪ್ ಇತ್ತೀಚಿಗಷ್ಟೆ ಬಿಡುಗಡೆಯಾದ ರಾಧೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸಲ್ಮಾನ್ ಖಾನ್ ನಟನೆಯ ರಾಧೆ; ಯುವರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರದಲ್ಲಿ ರಣದೀಪ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಸದ್ಯ ಅನ್ ಫೇರ್ ಅಂಡ್ ಲವ್ಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಜೊತೆಗೆ ರಣದೀಪ್ ಇನ್ಸ್ ಪೆಕ್ಟರ್ ಅವಿನಾಶ್ ವೆಬ್ ಸೀರಿಸ್ ನಲ್ಲೂ ಕಾಣಿಸಿಕೊಂಡಿದ್ದಾರೆ.

  English summary
  Actor Randeep Hooda dirty joke on former CM Mayawati. He called out castesit and sexist joke on Mayavathi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X