ಎಂಎಸ್ ಧೋನಿ ಕೆನ್ನೆಗೆ ಪ್ರೀತಿಯಿಂದ ಮುತ್ತು ಕೊಟ್ಟು, ನನ್ನ ಮಹಿ ಎಂದ ನಟ ರಣವೀರ್ ಸಿಂಗ್
ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು 'ಕ್ಯಾಪ್ಟನ್ ಕೂಲ್' ಎಂದು ಕರೆಯಲ್ಪಡುವ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಬ್ಬರು ಭೇಟಿಯಾಗಿದ್ದಾರೆ. ಭೇಟಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ರಣವೀರ್ ಸಿಂಗ್ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ನಟರಾದ ರಣವೀರ್ ಸಿಂಗ್ ಮತ್ತು ರಾಮ್ ಚರಣ್ ಅವರನ್ನು ಭೇಟಿಯಾಗಿದ್ದಾರೆ. ಭೇಟಿಯ ಎರಡು ಚಿತ್ರವನ್ನು ರಣವೀರ್ ಸಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ಎಂಎಸ್ ಧೋನಿಗೆ ಪ್ರೀತಿಯಿಂದ ಮುತ್ತು ಕೊಟ್ಟಿದ್ದಾರೆ.

ಎಂಎಸ್ ಧೋನಿಗೆ ಸಿಕ್ಕಿತು ರಣವೀರ್ ಸಿಂಗ್ ಸಿಹಿಮುತ್ತು!
ಫೋಟೋಗಳನ್ನು ನೋಡಿ ನಟ ರಣವೀರ್ ಸಿಂಗ್ ಮತ್ತು ಕ್ರಿಕೆಟಿಗ ಎಂಎಸ್ ಧೋನಿ ಇಬ್ಬರ ಅಭಿಮಾನಿಗಳು ಫೂಲ್ ಖುಷ್ ಆಗಿದ್ದಾರೆ. ಅಭಿಮಾನಿಗಳಷ್ಟೇ ಅಲ್ಲ ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ ಕೂಡ ರಿಯಾಕ್ಟ್ ಮಾಡಿದ್ದು, ಮುದ್ದಾದ ಕಾಮೆಂಟ್ ಮಾಡಿದ್ದಾರೆ.
ಎರಡು ಫೋಟೋಗಳಿಗೆ "ಮೇರಾ ಮಹಿ (ನನ್ನ ಮಹಿ)" ಎಂದು ರಣವೀರ್ ಸಿಂಗ್ ಶೀರ್ಷಿಕೆ ನೀಡಿದ್ದಾರೆ. ಹೆಚ್ಚು ಜನರು ಕ್ರಿಕೆಟಿಗ ಎಂಎಸ್ ಧೋನಿಯನ್ನು 'ಮಹಿ' ಎಂದು ಪ್ರೀತಿಯಿಂದ ಕರೆಯುತ್ತಾರೆ. ಫೋಟೋಗಳಿಗೆ ಹಾರ್ಟ್ ಸಿಂಬಲ್ ಹಾಕಿದ್ದು, ಹಲವಾರು ಹ್ಯಾಶ್‌ಟ್ಯಾಗ್‌ಗಳನ್ನು ಹಾಕಿದ್ದಾರೆ.

ರಣವೀರ್ ಸಿಂಗ್ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ನಟ ಬೆಳ್ಳಿಯ ಚೈನ್ ಮತ್ತು ಕಪ್ಪು ಟೀ ಶರ್ಟ್ ಧರಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನೀಲಿ ಶರ್ಟ್‌ನಲ್ಲಿದ್ದಾರೆ. ಮೊದಲ ಚಿತ್ರದಲ್ಲಿ, ಇಬ್ಬರೂ ಕ್ಯಾಮೆರಾಗೆ ದೊಡ್ಡ ಸ್ಮೈಲ್ ನೀಡಿದ್ದಾರೆ. ಎರಡನೇ ಚಿತ್ರದಲ್ಲಿ ರಣವೀರ್ ಸಿಂಗ್, ಧೋನಿಯ ಕೆನ್ನೆಯ ಮೇಲೆ ಸಿಹಿ ಮುತ್ತು ನೀಡಿದ್ದಾರೆ. ಅವರು ನಾಚಿಕೆಯಿಂದ ಕೆಂಪಾಗಿದ್ದಾರೆ.
ಧೋನಿ ಪತ್ನಿ ಸಾಕ್ಷಿ ಸಿಂಗ್ ಪ್ರತಿಕ್ರಿಯೆ
ಇಬ್ಬರು ಸೆಲಬ್ರೆಟಿಗಳ ಫೋಟೋಗಳಿಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ಮತ್ತು ಕಾಮೆಂಟ್ ಮಾಡುತ್ತಿದ್ದಾರೆ. ಇದರ ಜೊತೆಗೆ ಎಲ್ಲರ ಗಮನ ಸೆಳೆದಿದ್ದು ಎಂ ಎಸ್ ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ಹಲವ ಕಾಮೆಂಟ್. ಚಿತ್ರಗಳಿಗೆ ನಾಲ್ಕು ರೆಡ್ ಹಾರ್ಟ್‌ಗಳ ಎಮೋಜಿ ಜೊತೆಗೆ ಕಾಮೆಂಟ್ ಮಾಡಿದ್ದಾರೆ. ಆಕೆಯ ಕಾಮೆಂಟ್‌ಗೆ ರಣವೀರ್ ಸಿಂಗ್ ಕೂಡ ಅದೇ ಎಮೋಜಿಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು, ಅಕ್ಟೋಬರ್ 4 ರಂದು, ರಾಮ್ ಚರಣ್ ಮತ್ತು ಮಹೇಂದ್ರ ಸಿಂಗ್ ಧೋನಿ ಭೇಟಿಯಾಗಿದ್ದರು. ಇಬ್ಬರು ಫೊಟೋಗಳನ್ನು ತೆಗೆಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಚಿತ್ರದಲ್ಲಿ ಮಹೇಂದ್ರ ಸಿಂಗ್ ಧೋನಿ ಹೇರ್‌ಸೈಲ್ ಎಲ್ಲರ ಗಮನ ಸೆಳೆದಿತ್ತು.


Click it and Unblock the Notifications











